ಶ್ರೀಸಾಮಾನ್ಯರು ಸಾಲ ಕೇಳಲು ಬಂದಾಗ ಬ್ಯಾಂಕ್‌ಗಳು ಉತ್ತಮ ರೀತಿಯಲ್ಲಿ ಸ್ಪಂದಿಸುವುದು ಅಗತ್ಯ: ಎಂ.ಕೆ ಪ್ರಾಣೇಶ್

0
112

ಚಿಕ್ಕಮಗಳೂರು: ಕೇಂದ್ರ ಸರ್ಕಾರವು ಶ್ರೀ ಸಾಮಾನ್ಯರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅತಂಹ ಯೋಜನೆಗಳಿಗೆ ಸಾರ್ವಜನಿಕರು ಬ್ಯಾಂಕುಗಳಿಗೆ ಸಾಲ ಪಡೆಯಲು ಬಂದಾಗ ಬ್ಯಾಂಕುಗಳು ಅವರಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಬೇಕು ಎಂದು ವಿಧಾನ ಸಭೆಯ ಉಪಸಭಾಪತಿ ಎಂ.ಕೆ ಪ್ರಾಣೇಶ್ ಹೇಳಿದರು.

ಕೆಂಪನಹಳ್ಳಿಯ ಗಾಯಿತ್ರಿ ಸಮುದಾಯಭವನದಲ್ಲಿ ನಡೆದ ಬ್ಯಾಂಕುಗಳ ಸಾಲ ಸಂಪರ್ಕ ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಅವರು, ಸಾಲ ಸಂಪರ್ಕ ಕಾರ್ಯಕ್ರಮಕ್ಕೆ ಚಿಕ್ಕಮಗಳೂರು ಲೀಡ್ ಬ್ಯಾಂಕು ಜೊತೆಗೆ ಒಟ್ಟು ಇನ್ನೂ 23 ಬ್ಯಾಂಕುಗಳು ಮತ್ತು ಅಧಿಕಾರಿಗಳು ಕೈಜೋಡಿಸಿ ಜನರಿಗೆ ಬ್ಯಾಂಕುಗಳಿಂದ ದೊರೆಯುವ ಸಾಲಗಳ ಪಡೆಯಲು ಇರುವ ಯೋಜನೆಗಳು ಮತ್ತು ಮಾಹಿತಿಗಳನ್ನು ತಿಳಿಸಲು ಸಾಲ ಸಂಪರ್ಕ ಕಾರ್ಯಕ್ರಮವು ಒಳ್ಳೆಯ ಕಾರ್ಯಕ್ರಮವಾಗಿದೆ, ದೇಶವು ಪ್ರಗತಿ ಕಾಣಬೇಕಾದರೆ ಈ ರೀತಿಯ ಕಾರ್ಯಕ್ರಮಗಳನ್ನು ಜರುಗಬೇಕು ಇದರಿಂದ ಬ್ಯಾಂಕುಗಳು ಮತ್ತು ಜನರ ನಡುವೆ ಉತ್ತಮ ಭಾಂದವ್ಯ ಬೆಳೆಯುತ್ತದೆ ಎಂದರು.

ಬ್ಯಾಂಕ್‌ಗಳು ಜನರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡಬೇಕು ಬ್ಯಾಂಕಿಗೆ ಬಂದ ಜನರೊಡನೆ ಪ್ರೀತಿ ವಿಶ್ವಾಸದಿಂದ ವ್ಯವಹರಿಸಿ ದೊರೆಯುವ ಸಾಲ ಸೌಲಭ್ಯ, ಬಡ್ಡಿ, ಸಬ್ಸಿಡಿಯ ಹಾಗೂ ಯೋಜನೆಗಳ ಕುರಿತು ಸರಿಯಾದ ಮಾಹಿತಿಗಳನ್ನು ನೀಡಿ, ಕೇಂದ್ರ ಸರ್ಕಾರದಿಂದ ಜಾರಿಗೊಳಿಸಿರುವ ನಬಾರ್ಡ್, ಮುದ್ರಾಯೋಜನೆ, ಸ್ಟ್ಯಾಂಡ್ ಆಫ್ ಇಂಡಿಯಾ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಗಳತಂಹ ಮುಂತಾದ ಯೋಜನೆಗಳಿದ್ದು ಕಡಿಮೆ ಸಬ್ಸಿಡಿ ಬಡ್ಡಿದರದಲ್ಲಿ ಜನರಿಗೆ ಸಾಲವನ್ನು ನೀಡಲು ಈ ಯೋಜನೆಗಳು ಸಹಕಾರಿಯಾಗಿವೆ ಎಂದು ಹೇಳಿದರು.

ಬ್ಯಾಂಕ್‌ಗಳು ಜನರ ಅಭಿವೃದ್ಧಿಗೆ ಸಹಕರಿಸಿದರೆ ದೇಶದ ಅಭಿವೃದ್ಧಿಯಾಗುತ್ತದೆ ಜೊತೆಗೆ ಬ್ಯಾಂಕುಗಳು ಕೂಡ ಅಭಿವೃದ್ಧಿ ಹೊಂದುತ್ತದೆ ಆದ್ದರಿಂದ ಬ್ಯಾಂಕಿಗೆ ಬಂದ ಜನರೊಡನೆ ಅನ್ಯೋನ್ಯತೆ ಯಿಂದ ಸ್ಪಂದಿಸುವಂತೆ ಬ್ಯಾಂಕಿನ ಸಿಬಂದ್ಧಿ ಮತ್ತು ಅಧಿಕಾರಿಗಳು ಕೆಲಸ ನಿರ್ವಹಿಸುವಂತೆ ಹೇಳಿದರು.

ನಂತರ ಮಾತನಾಡಿದ ಜಿಲ್ಲಾಧಿಕಾರಿ ಕೆ.ಎನ್ ರಮೇಶ್, ಬ್ಯಾಂಕಿನಿಂದ ದೊರೆಯುವ ಸಾಲ ಸೌಲಭ್ಯಗಳು ಸಾಮಾಜದ ಕಟ್ಟ ಕಡೆಯ ವ್ಯಕ್ತಿಯವರೆಗೂ ಲಭಿಸುವಂತೆ ಕೆಲಸ ಮಾಡಿ ಬ್ಯಾಂಕ್‌ಗಳು ತಮ್ಮ ಬ್ರಾಂಚ್‌ಗಳನ್ನು ಗ್ರಾಮೀಣ ಪ್ರದೇಶಗಳಲ್ಲು ಆರಂಭಿಸಿದರೆ ಗ್ರಾಮೀಣ ಜನರಿಗೆ ಅನುಕೂಲವಾಗುತ್ತದೆ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಸಾಮಾನ್ಯ ಜನರು ತಾವು ದುಡಿದ ಹಣವನ್ನು ಉಳಿತಾಯ ಮಾಡಲು ಬ್ಯಾಂಕುಗಳಲ್ಲಿ ಹಣವನ್ನು ಊಡಿಕೆ ಮಾಡುತ್ತಾರೆ ಆ ಹಣದಿಂದ ದೇಶವು ಅಭಿವೃದ್ಧಿಯಾಗುವುದರ ಜೊತೆಗೆ ಜನ ಸಾಮಾನ್ಯರ ಅಭಿವೃದ್ಧಿಗು ನೆರವಾಗುತ್ತದೆ ಎಂದು ಹೇಳಿದರು.

ಮುದ್ರಾ ಯೋಜನೆಯಡಿ ಜನರಿಗೆ ಬ್ಯಾಂಕುಗಳಲ್ಲಿ ಸಾಲ ದೊರೆಯುತ್ತಿದ್ದು ಸಾಲ ಪಡೆಯಲು ಹೋದ ಜನರಿಗೆ ಬ್ಯಾಂಕಿನಲ್ಲಿ ಯಾವುದೇ ರೀತಿಯ ಶ್ಯೂರಿಟಿ ಇಲ್ಲದೆ ಈ ಯೋಜನೆಯಡಿ ಸಾಲವನ್ನು ಪಡೆಯಬಹುದಾಗಿದೆ ಇದರಿಂದ ಸಾಲ ಪಡೆದ ವ್ಯಕ್ತಿಗೂ ಬ್ಯಾಂಕುಗಳ ಮೇಲೆ ವಿಶ್ವಾಸ ಬರುತ್ತದೆ ಹಾಗೂ ಯಾವ ವ್ಯಕ್ತಿಯು ಬ್ಯಾಂಕಿನಿಂದ ಸಾಲ ಪಡೆಯುತ್ತಾರೋ ಅವನ ಜೀವನ ಸುಧಾರಿಸಲಿ ಜೊತೆಗೆ ಯಾರು ಸಶಕ್ತನಾಗಿರುವುದಿಲ್ಲವೋ ಅವರಿಗೆ ಈ ಸಾಲವನ್ನು ಪಡೆಯುವಂತೆ ಸಹಕರಿಸಿ ಎಂದು ಬ್ಯಾಂಕ್ ಅಧಿಕಾರಿಗಳಿಗೆ ಹೇಳಿದರು.

ಜಿಲ್ಲಾ ಪಂಚಾಯಿತಿಯ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಜಿ. ಪ್ರಭು.ಮಾತನಾಡಿ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಮಾಡಲು ಹಾಗೂ ಮಹಿಳೆಯರು ಕೂಡ ಸ್ವಂತ ಉದ್ಯೋಗ ಮಾಡಲು ಕೇಂದ್ರ ಸರ್ಕಾರವು ಅನೇಕ ಸಾಲ ನೀಡುವ ಯೋಜನೆಗಳು ಜಾರಿಯಲ್ಲಿದ್ದು ಬ್ಯಾಂಕಿನ ಅಧಿಕಾರಿಗಳು ಸಾಲ ಪಡೆಯಲು ಬಂದ ಜನರೊಡನೆ ಸಾಲದ ಬಗ್ಗೆ ಸರಿಯಾದ ಮಾಹಿತಿಗಳನ್ನು ನೀಡಿ ಸಹಕರಿಸಿ ಎಂದು ಹೇಳಿದರು,

ಕಾರ್ಯಕ್ರಮದಲ್ಲಿ ಲೀಡ್ ಬ್ಯಾಂಕಿನ ವ್ಯವಸ್ಥಾಪಕ ಸುರೇಶ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ಮುಖ್ಯಸ್ಥ ಚಂದ್ರ ಮೋಹನ್ ರೆಡ್ಡಿ, ಕೆನರಾ ಬ್ಯಾಂಕಿನ ಮುಖ್ಯಸ್ಥ ರಾಘವೇಂದ್ರ ರಾವ್ ಕಾನಲ್ ಸೇರಿದಂತೆ ಮತ್ತಿತರ ಬ್ಯಾಂಕಿನ ಅಧಿಕಾರಿಗಳು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here