ಶಿಕಾರಿಪುರ: ಪಟ್ಟಣದ ಸುಪ್ರಸಿದ್ಧ ಆರಾಧ್ಯ ದೈವ ಎಂದೇ ಪ್ರಸಿದ್ದಿ ಪಡೆದಿರುವ ಶ್ರೀ ಹುಚ್ಚರಾಯ ಸ್ವಾಮಿಗೆ ವಿವಿಧ ರೀತಿಯ ನಾಣ್ಯಗಳನ್ನು ಬಳಸಿ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗಿದೆ.
ದೇವರು ಎಂದೊಡನೆ ನಂಬಿಕೆಯುಳ್ಳವರಿಗೆ ವಿಶೇಷವಾದ ಭಯ, ಭಕ್ತಿ ಮತ್ತು ಪ್ರೀತಿ ಇರುವುದು ಸಹಜ, ಅದರಲ್ಲೂ ಒಂದು ಊರಿನ ಆರಾಧ್ಯ ದೈವ ಎಂದರೆ ಅತ್ಯಂತ ಕಾಳಜಿಯಿರುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾವಿರಾರು ಭಕ್ತ ಸಮೂಹ ಹೊಂದಿರುವ ಶಿಕಾರಿಪುರ ತಾಲ್ಲೂಕಿನ ಸುಪ್ರಸಿದ್ಧ ಆರಾಧ್ಯ ದೈವ ಶ್ರೀ ಹುಚ್ಚರಾಯ ಸ್ವಾಮಿಗೆ ಶ್ರಾವಣ ಮಾಸದಲ್ಲಿ, ಅಧಿಕ ಮಾಸದಲ್ಲಿ ಮತ್ತು ಆಗಿಂದಾಗ್ಗೆ ಬೆಣ್ಣೆ, ಹೂವು, ಹಣ್ಣು, ತರಕಾರಿ ಹೀಗೆ ವಿವಿಧ ರೀತಿಯಲ್ಲಿ ಬಗೆ ಬಗೆಯ ರೂಪಗಳಲ್ಲಿ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತಿದೆ.
ಅದೇ ರೀತಿ ಇಂದು ಸಹ ದೇವಸ್ಥಾನದ ಪ್ರಧಾನ ಅರ್ಚಕರಾದ ಉಮೇಶ್ ಭಟ್ ಮತ್ತು ಅವರ ಸಹೋದರರಾದ ಸುರೇಶ್ ಭಟ್, ಗಿರೀಶ್ ಭಟ್ ರವರು, ಒಂದು, ಎರಡು, ಐದು ಹಾಗೂ ಹತ್ತು ರೂಪಾಯಿಗಳ ನಾಣ್ಯಗಳನ್ನು ಬಳಸಿ ವಿಶೇಷ ಅಲಂಕಾರ ಮಾಡಿ ಪೂಜೆ ನಡೆಸಲಾಗಿದೆ. ಈ ಅಲಂಕಾರಕ್ಕೆ ಸುಮಾರು ಐದು ಸಾವಿರ ರೂಪಾಯಿಗಳ ನಾಣ್ಯಗಳನ್ನು ಬಳಸಲಾಗಿದೆ ಎನ್ನಲಾಗಿದೆ.
Related