ಶ್ರೀ ಕೃಷ್ಣಯ್ಯ ಚಿಟ್ಟೆ ಗ್ರೂಪ್ ವತಿಯಿಂದ ಶಿವಮೊಗ್ಗದಲ್ಲಿ ಮೂರು ದಿನಗಳ ಕಾಲ ರಿಯಾಯಿತಿ ದರದಲ್ಲಿ ಚಿನ್ನಾಭರಣಗಳ ಮಾರಾಟ ಮೇಳ

0
250

ಶಿವಮೊಗ್ಗ: ಬೆಂಗಳೂರಿನ ಪ್ರತಿಷ್ಠಿತ ಚಿನ್ನ ಬೆಳ್ಳಿ ವಜ್ರ ವ್ಯಾಪಾರಿಗಳಾದ ಶ್ರೀ ಕೃಷ್ಣಯ್ಯ ಚಿಟ್ಟೆ ಗ್ರೂಪ್ ವತಿಯಿಂದ ನಗರದ ಬಿ.ಹೆಚ್.ರಸ್ತೆಯಲ್ಲಿರುವ ರಾಯಲ್ ಆರ್ಕೆಡ್‌ನಲ್ಲಿ ಏ.22ರಿಂದ 24ರವರೆಗೆ 3 ದಿನಗಳ ಕಾಲ ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆಯ ವರೆಗೆ ಪ್ರದರ್ಶನ ಮತ್ತು ರಿಯಾಯಿತಿ ದರದಲ್ಲಿ ಆಭರಣಗಳ ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ಈ ಮಾರಾಟ ಮೇಳದಲ್ಲಿ ಗ್ರಾಹಕರಿಗೆ ಅತ್ಯುತ್ತಮ ರಿಯಾಯಿತಿಯನ್ನು ನೀಡಲಾಗುತ್ತದೆ.

ಕೃಷ್ಣಯ್ಯ ಚಿಟ್ಟೆ ಸಂಸ್ಥೆಯು 1869 ರಲ್ಲಿ ಪ್ರಾರಂಭಗೊಂಡಿತ್ತು. ಇದರ ನೆನಪಿಗಾಗಿ ನಾವು ಚಿನ್ನ ವಜ್ರ ಬೆಳ್ಳಿಯ(500 ಗ್ರಾಂ) ಆಭರಣಗಳನ್ನು ಖರೀದಿಸಿದರೆ ಪ್ರತಿ ಗ್ರಾಂಗೆ 1869 ರಂತೆ (ನಿಭಂದನೆಗಳಿಗೆ ಒಳಪಟ್ಟಿದೆ) ಮಾರಾಟ ಮಾಡಲಾಗುತ್ತದೆ. ಚಿನ್ನವನ್ನು ಕನಿಷ್ಟ,10 ಗ್ರಾಂ, ವಜ್ರ 1ಸಿಟಿ ಹಾಗೂ ಬೆಳ್ಳಿ ಅರ್ಧ ಕೆಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ.

ಸಿ. ಕೃಷ್ಣಯ್ಯ ಚಿಟ್ಟೆ ಗ್ರೂಪ್ ಕಳೆದ 150 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಬಂದಿದೆ. ಈಗಾಗಲೇ ನಮ್ಮ ಸಂಸ್ಥೆಯು ಕರ್ನಾಟಕದ ಮನೆಮಾತಾಗಿದೆ. ಪರಿಶುದ್ಧತೆ, ಗುಣಮಟ್ಟದ ವಿಷಯದಲ್ಲಿ ನಾವು ಎಂದೂ ರಾಜಿಯಾಗುವುದಿಲ್ಲ. ನಮ್ಮ ಪ್ರಮಾಣಿಕತೆಯ ವ್ಯವಹಾರದಿಂದಾಗಿ ಗ್ರಾಹಕರು ನಮ್ಮಲ್ಲಿ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ಮತ್ತೊಮ್ಮೆ ನಾವು ಇತಿಹಾಸವನ್ನು ಸೃಷ್ಠಿ ಮಾಡಲು ಹೊರಟ್ಟಿದ್ದೇವೆ.

ಶಿವಮೊಗ್ಗ ನಗರದಲ್ಲಿ ಏ.22ರಿಂದ 24ರವರೆಗೆ ನಡೆಯುವ ಪ್ರದರ್ಶನ ಹಾಗೂ ಮಾರಾಟದ ಮೇಳದ ಸೌಲಭ್ಯವನ್ನು ಮತ್ತು ಉತ್ತಮ ಅವಕಾಶವನ್ನು ಶಿವಮೊಗ್ಗ ಮತ್ತು ಸುತ್ತಮತ್ತಲ ಜಿಲ್ಲೆಯ ಗ್ರಾಹಕರು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here