ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ಸನ್ನಿಧಿಯಲ್ಲಿ ಶರನ್ನವರಾತ್ರಿ ಉತ್ಸವ ಆರಂಭ

0
448

ಸಾಗರ: ಭಕ್ತರ ಆರಾಧನಾ ಕೇಂದ್ರ ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇಗುಲದಲ್ಲಿ ಗುರುವಾರ ಶರನ್ನವರಾತ್ರಿ ಉತ್ಸವ ವಿಜೃಂಭಣೆಯಿಂದ ಆರಂಭವಾಯಿತು.

ರಾಣೆಬೆನ್ನೂರು ತಾಲೂಕು ಅರೆ ಮಲ್ಲಾಪುರ ಶರಣಬಸವೇಶ್ವರ ಮಠದ ಶ್ರೀ ಪ್ರಣವಾನಂದ ಸ್ವಾಮೀಜಿ ಉತ್ಸವಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು, ಸರಕಾರ, ಸಂವಿಧಾನಗಳು ಬರುವ ಮುನ್ನವೇ ದೇಶದಲ್ಲಿ ಮಠ-ಮಾನ್ಯಗಳು, ದೇಗುಲಗಳು ಇದ್ದವು. ಈ ಪರಂಪರೆಗೆ ಚ್ಯುತಿಬಾರದಂತೆ ಸರಕಾರಗಳು ನಡೆದುಕೊಳ್ಳಬೇಕೆಂದು. ಧಾರ್ಮಿಕ ಕೇಂದ್ರಗಳ ರಕ್ಷಣೆ ಮತ್ತು ಭಕ್ತರ ಭಾವನೆಗಳಿಗೆ ದಕ್ಕೆಯಾಗುವ ನಿರ್ಧಾರಗಳು ಸರಕಾರಗಳಿಂದ ಆಗಬಾರದು. ಸಿಗಂದೂರು ಈ ನಾಡಿನ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ. ಬೇಡುವ ವರ ನೀಡುವ ತಾಯಿಯ ಸೇವೆಯನ್ನು ಆಡಳಿತ ಮಂಡಳಿ ಅಚ್ಚುಕಟ್ಟಾಗಿ ಮಾಡುತ್ತಿದೆ. ಶರವನ್ನವರಾತ್ರಿ ಆರಂಭದ ದಿನ ದೇಗುಲಕ್ಕೆ ಬಂದಿರುವುದು ಸಂತೋಷವಾಗಿದೆ. ಸಿಗಂದೂರು ಕ್ಷೇತ್ರದಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ಲಾಘಿಸಿದ ಅವರು, ಸರಕಾರ ಯಾವುದೇ ದೇವಸ್ಥಾನಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದರು.

ಸ್ವಾಮೀಜಿಯನ್ನು ದೇವಾಲಯಕ್ಕೆ ಡೊಳ್ಳು ಕುಣಿತ ಹಾಗೂ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.

ಧರ್ಮದರ್ಶಿ ಡಾ.ರಾಮಪ್ಪ, ಚೌಡಮ್ಮದೇವಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಸ್ಥಳೀಯ ಮುಖಂಡರು ಹಾಗೂ ದೇವಾಲಯದ ಆಡಳಿತ ಮಂಡಳಿ ಸದಸ್ಯರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here