ಶ್ರೀ ಚೌಡೇಶ್ವರಿ ದೇವಿಗೆ ಕಲಾಭಿವೃದ್ದಿ, ದುರ್ಗಾ ಹೋಮ, 108 ಕಲಶಾಪಪೂರ್ವಕ ಕುಂಭಾಭಿಷೇಕ

0
358

ರಿಪ್ಪನ್‌ಪೇಟೆ: ಇಲ್ಲಿನ ಚೌಡೇಶ್ವರಿ ದೇವಸ್ಥಾನ ಸೇವಾ ಸಮಿತಿಯ 31ನೇ ವರ್ಷದ ಶ್ರೀಚೌಡೇಶ್ವರಿ ದೇವಸ್ಥಾನದ ವಾರ್ಷೀಕೋತ್ಸವ ಧಾರ್ಮಿಕ ಪೂಜಾ ಕೈಂಕರ್ಯವನ್ನು ಉಡುಪಿಯ ಶಿರಿಯಾರ ಪುರೋಹಿತ್ ನಾಗರಾಜ್ ಅಡಿಗ ಇವರ ನೇತೃತ್ವದಲ್ಲಿ ಏಪ್ರಿಲ್ 5 ಮತ್ತು 6 ರಂದು ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಏಪ್ರಿಲ್ 6 ರಂದು ಸಾಮೂಹಿಕ ಗಣಹೋಮ, ಕಲಾಭಿವೃದ್ದಿ ಹೋಮ, ಶ್ರೀದುರ್ಗಾ ಹೋಮ, 108 ಕಲಶಾಪಪೂರ್ವಕ ಸಾಮೂಹಿಕ ಕುಂಭಾಭಿಷೇಕ ಪರಿವಾರ ದೇವತೆ ಯಕ್ಷಿ ಕಲಾಹೋಮ ಹಾಗೂ ನವಕಾಭಿಷೇಕ ಪೂಜೆ ನಾಗಪೂಜೆ ಅಮ್ಮನವರಿಗೆ ಮಡಿಲಕ್ಕಿ ಸೇವೆಯನ್ನು ಏರ್ಪಡಿಲಾಗಿದ್ದು ಸಕಲ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ದರ್ಶನಾಶೀರ್ವಾದ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಾಮೂಹಿಕ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿದೆ ಎಂದು ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here