20.6 C
Shimoga
Friday, December 9, 2022

ಶ್ರೀ ಜೇನುಕಲ್ಲಮ್ಮ ದೇವಸ್ಥಾನದ ಜೀರ್ಣೋದ್ಧಾರ | ಡಿ. 28 ರಂದು ಶಂಕುಸ್ಥಾಪನೆ ; ವ್ಯವಸ್ಥಾಪನಾ ಸಮಿತಿ ಮತ್ತು ಭಕ್ತರೊಂದಿಗೆ ಶಾಸಕ ಹರತಾಳು ಹಾಲಪ್ಪ ಸಮಾಲೋಚನಾ ಸಭೆ

ರಿಪ್ಪನ್‌ಪೇಟೆ: ಇತಿಹಾಸ ಪ್ರಸಿದ್ಧ ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಸ್ಥಾನವನ್ನು ಮುಂದಿನ ಪಂಚವಾರ್ಷಿಕ ಯೋಜನೆಯಡಿಯಲ್ಲಿ ಇದೊಂದು ಪ್ರವಾಸಿ ತಾಣವನ್ನಾಗಿಸುವ ಕುರಿತು ವ್ಯವಸ್ಥಾಪನಾ ಸಮಿತಿ ಮತ್ತು ಭಕ್ತರ ಸಮಾಲೋಚನಾ ಸಭೆಯನ್ನು ದೇವಸ್ಥಾನ ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ಹಾಗೂ ಕ್ಷೇತ್ರದ ಶಾಸಕ ಹಾಲಪ್ಪ ಹಾಲಪ್ಪನವರ ಅಧ್ಯಕ್ಷತೆಯಲ್ಲಿ ನಡೆಯಿತು.


ಈ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಾಲಪ್ಪ ಹರತಾಳು, 5 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಶಿಲಾಮಯ ದೇವಸ್ಥಾನ ನಿರ್ಮಿಸಲಾಗುವುದು. ಇದೇ ಬರುವ ಡಿಸೆಂಬರ್ 28 ರಂದು ಶಂಕುಸ್ಥಾಪನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ರಾಮಚಂದ್ರಪುರಮಠದ ಶ್ರೀ ರಾಘವೇಶ್ವರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು.


ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮೊದಲಾದವರು ಭಾಗವಹಿಸಲಿದ್ದಾರೆಂದರು.


ಬರುವ ಒಂದು ವರ್ಷದೊಳಗೆ ದೇವಸ್ಥಾನದ ಮುಖಮಂಟಪ ನಿರ್ಮಾಣ ಮತ್ತು ಇನೈದು ವರ್ಷದೊಳಗೆ ಅಮ್ಮನಘಟ್ಟದ ಸರ್ವಾಂಗೀಣ ಅಭಿವೃದ್ದಿಯೊಂದಿಗೆ ಮುಂದಿನ 25 ವರ್ಷದಲ್ಲಿ ಸಹಸ್ರ ಸಂಖ್ಯೆಯಲ್ಲಿ ನಿತ್ಯ ಭಕ್ತರನ್ನು ಆಕರ್ಷಿಸುವ ಪ್ರವಾಸಿ ತಾಣವನ್ನಾಗಿ ಮಾರ್ಪಡಿಸಲಾಗುವುದರ ಕುರಿತು ದಾನಿಗಳು ಮತ್ತು ಭಕ್ತರ ಸಹಕಾರದೊಂದಿಗೆ ಅಧಿಕಾರ ಇರಲಿ ಇಲ್ಲದಿರಲ್ಲಿ ಸರ್ಕಾರದಿಂದ ಹೆಚ್ಚು ಅನುದಾನ ತರುವುದಾಗಿ ಸಭೆಗೆ ವಿವರಿಸಿದರು.


ದೇವಸ್ಥಾನ ಜೀರ್ಣೋದ್ಧಾರ ಕಾರ್ಯದಲ್ಲಿ ಗೊಂದಲ ಬೇಡ :

ಧರ್ಮದರ್ಶಿ ಸಮಿತಿ ಮತ್ತು ಜೀರ್ಣೋದ್ಧಾರ ಸಮಿತಿ ಎರಡು ಸಮರ್ಪಕವಾಗಿ ದೇವಸ್ಥಾನ ಅಭಿವೃದ್ದಿಗೆ ಪ್ರತಿಫಲಾಪೇಕ್ಷೆ ಇಲ್ಲದೆ ಶ್ರಮಿಸಬೇಕು ಇದರಲ್ಲಿ ಯಾರಾದರೂ ಮೂಗು ತೂರಿಸುವ ಕೆಲಸ ಮಾಡಿದರೆ ನಾನು ಸುಮ್ಮನೆ ಇರುವುದಿಲ್ಲ. ಈ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದಾಗಿದ್ದು ತಹಶೀಲ್ದಾರ ನೇತೃತ್ವದಲ್ಲಿ ಅಭಿವೃದ್ದಿ ಪಡಿಸಲು ಮುಂದಾಗಬೇಕಾಗುತ್ತದೆಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದರು.


ಮುಂದಾಲೋಚನೆಯ ಯೋಜನೆ:

ಇತಿಹಾಸವನ್ನು ಅರಿತ ಹಿರಿಯರು ದೇವಸ್ಥಾನದ ಅಭಿವೃದ್ದಿಗಾಗಿ 25 ಎಕರೆ ಜಾಗವನ್ನು ದೇವಸ್ಥಾನದ ಅಭಿವೃದ್ದಿಗಾಗಿ ಮಂಜೂರು ಮಾಡಿಸಿದ್ದಾರೆ. ಆ ಜಾಗದಲ್ಲಿ ಸುವ್ಯವಸ್ಥಿತ ಯೋಜನೆಯೊಂದಿಗೆ ದೇವಸ್ಥಾನ ಅಭಿವೃದ್ಧಿಪಡಿಸಲಾಗುವುದು ಪರಿಸರವನ್ನು ಉಳಿಸಿಕೊಂಡು ಮಲೆನಾಡಿನ ಪ್ರಕೃತಿ ಸೌಂದರ್ಯಕ್ಕೂ ಧಕ್ಕೆ ಉಂಟಾಗದಂತೆ ನಿಗದಿತ ಪ್ರದೇಶವನ್ನು ಸರ್ವೇ ಮಾಡಿಸಿ ಪೋಡಿ ದುರಸ್ತಿ ಮಾಡುವಂತೆ ತಹಶೀಲ್ದಾರ್‌ಗೆ ಸೂಚಿಸಿದ್ದೇನೆ. ಸಾವಿರಾರು ವರ್ಷದಲ್ಲಿ ಆಕಾರಗೊಳಿಸಲಾಗುವುದು ಎಂದು ಶಾಸಕ ಹಾಲಪ್ಪ ಹರತಾಳು ಹೇಳಿದರು.

ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ, ಮಾಜಿ ಶಾಸಕ ಬಿ.ಸ್ವಾಮಿರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ಈಗಾಗಲೇ ದೇವಸ್ಥಾನದ ಗರ್ಭಗುಡಿಯ ಮುಖಮಂಟಪಕ್ಕೆ ಶಿಲಾಮಯ ಕಂಬಗಳ ಕೆತ್ತನೆಯ ಕಾಮಗಾರಿ ಭರದಿಂದ ಸಾಗಿದೆ. ಶಂಕುಸ್ಥಾಪನೆಯಾದ ನಂತರದಲ್ಲಿ ಧಾರ್ಮಿಕ ವಿಧಿವಿಧಾನದೊಂದಿಗೆ ಕಾಮಗಾರಿ ಪ್ರಾರಂಭಗೊಳ್ಳಲಿದ್ದು ದೇವಸ್ಥಾನದ ಖಾತೆಯಲ್ಲಿನ ಹಣವನ್ನು ಕಟ್ಟಡಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.


ದೇವಸ್ಥಾನದ ಧರ್ಮದರ್ಶಿ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಜಿ.ಪಂ.ಮಾದಿ ಅಧ್ಯಕ್ಷ ಕಲಗೋಡು ರತ್ನಾಕರ್, ಜಿ.ಪಂ.ಮಾಜಿ ಸದಸ್ಯ ಬಂಡಿ ರಾಮಚಂದ್ರ, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ತಹಶೀಲ್ದಾರ್ ವಿ.ಎಸ್. ರಾಜೀವ್, ಬಿಜೆಪಿ ಅಧ್ಯಕ್ಷ ಬಿಳಗೋಡು ಗಣಪತಿ, ಎನ್.ಸತೀಶ್, ಆರ್.ಟಿ.ಗೋಪಾಲ್, ಸುಧೀರ್, ಸರೋಜಮ್ಮ, ಪುಟ್ಟಪ್ಪ, ಸಂತೋಷ, ಶ್ರೀನಿವಾಸ ಹಿಂಡ್ಲೆಮನೆ, ವಿಜೇಂದ್ರರಾವ್, ಕಲ್ಯಾಣಪ್ಪಗೌಡ, ಗ್ರಾ.ಪಂ.ಉಪಾಧ್ಯಕ್ಷ ಜಯಪ್ರಕಾಶ್‌ಶೆಟ್ಟಿ, ಚಂದ್ರಮೌಳಿ, ಮೆಣಸೆ ಅನಂದ್, ನಾಗರಾಜ್‌ಗೌಡ, ವೇದಾಂತಪ್ಪಗೌಡ, ಉಸ್ಮಾನ್‌ಸಾಬ್, ಮಂಡಾನಿ ಮೋಹನ್, ರಾಮಚಂದ್ರ ಹರತಾಳು, ಕೆ.ಬಿ.ಹೂವಪ್ಪ ಹಲವರು ಸಭೆಯಲ್ಲಿ ಪಾಲ್ಗೊಂಡು ಸಲಹೆಗಳನ್ನು ನೀಡಿದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!