ಶಿಕಾರಿಪುರ: ಪಟ್ಟಣದ ಶ್ರೀ ಹುಚ್ಚುರಾಯ ಸ್ವಾಮಿ ದೇವಸ್ಥಾನ ಬಳಿಯಿರುವ ಪುಷ್ಕರಣಿಯಲ್ಲಿ ಬುಧವಾರ ಬೆಳಗ್ಗೆ ಅನಾಮಧೇಯ ಮಹಿಳೆಯ ಶವ ಪತ್ತೆಯಾಗಿದ್ದು, ಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ರಾಜು ರೆಡ್ಡಿಯವರು ಯುಡಿಆರ್ ಸಂಖ್ಯೆ 04-2021 ಕಲಾಂ174 ಸಿಆರ್ ಪಿಸಿ ಪ್ರಕರಣದಡಿ ಕೇಸು ದಾಖಲಿಸಿದ್ದಾರೆ.
ಪುಷ್ಕರಣಿಯಲ್ಲಿ ಮುಖ ಕೆಳಗಾಗಿ ತೇಲುತ್ತಿರುವ ಮಹಿಳೆ ಮೃತ ದೇಹವನ್ನು ಹೊರತೆಗೆದು ಪರಿಶೀಲನೆ ನಡೆಸಿದ್ದಾರೆ. ಆದರೆ ಆ ಮಹಿಳೆಯನ್ನು ಯಾರೂ ಪರಿಚಯಿಸದೇ ಇರುವುದರಿಂದ ಅನಾಮಧೇಯ ಮಹಿಳೆಯ ಶವ ಎಂದು ಗುರುತಿಸಲಾಗಿದೆ. ಈ ಮಹಿಳೆಯ ವಯಸ್ಸು ಸುಮಾರು 35-40 ವರ್ಷದವರಾಗಿದ್ದು 5.2 ಅಡಿ ಉದ್ದದ ಎಣ್ಣೆಗೆಂಪು ಬಣ್ಣದ ದೇಹದ ದುಂಡು ಮುಖದ ಸಾಧಾರಣ ಮೈಕಟ್ಟು ಹೊಂದಿರುತ್ತಾರೆ ಎನ್ನಲಾಗಿದೆ.
ಈ ಹೆಂಗಸು ಹಳದಿ, ನೀಲಿ, ಕೆಂಪು, ಕಾಫಿ, ಹಸಿರು ಬಣ್ಣದ, ಉದ್ದ ಗೆರೆಗಳಿರುವ ಸೀರೆ ಹಾಗೂ ಗೋಲ್ಡ್ ಕಲರ್ ಬ್ಲೌಸ್ ಧರಿಸಿದ್ದು, ಕೊರಳಲ್ಲಿ ಕರಿಮಣಿ ಹೊಂದಿರುವ ತಾಳಿ, ಕಿವಿಯಲ್ಲಿ ಓಲೆ, ಕಾಲುಂಗುರವನ್ನು ಧರಿಸಿದ್ದು, ಕಪ್ಪು ಬಣ್ಣದ ಒಂದು ಬ್ಯಾಗ್ ನಲ್ಲಿ ಬಟ್ಟೆ ಹಾಗೂ ಚಪ್ಪಲಿ ಇರುತ್ತದೆ. ಮೃತ ದೇಹವನ್ನು ಜಿಲ್ಲಾ ಆಸ್ಪತ್ರೆಯಾಗಿರುವ ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು ಸಂಬಂಧಪಟ್ಟವರು ಶಿಕಾರಿಪುರ ತಾಲ್ಲೂಕಿನ ಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ರಾಜು ರೆಡ್ಡಿಯವರನ್ನು ಸಂಪರ್ಕಿಸಲು ಕೋರಿದೆ.
Related