ಸಂಕಷ್ಟದಲ್ಲಿರುವ ಕುಟುಂಬಕ್ಕೆ ವೈಯಕ್ತಿಕ ನೆರವು ನೀಡಿ ಮಾನವೀಯತೆ ಮೆರೆದ ಬೇಳೂರು ಗೋಪಾಲಕೃಷ್ಣ

0
403

ರಿಪ್ಪನ್‌ಪೇಟೆ: ಶಿವಮೊಗ್ಗದ ಖಾಸಗಿ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಅವಧಿಗೂ ಮುನ್ನ ಜನಿಸಿದ ಮಗು ಬೆಳವಣಿಗೆ ಇಲ್ಲದೆ ಅಸ್ಪತ್ರೆಯ ಚಿಕಿತ್ಸೆ ನೀಡಲಾಗುತ್ತಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಯಾರಾದರೂ ಸಹಾಯ ನೀಡಿ ಎಂಬ ಬಗ್ಗೆ ಹರಿದಾಡುತ್ತಿದ್ದನ್ನು ಗಮನಿಸಿದ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ, ಮಗುವಿನ ಪೋಷಕರನ್ನು ಭೇಟಿ ಮಾಡಿ ಧೈರ್ಯ ತುಂಬಿ ವೈಯಕ್ತಿಕ ನೆರವು ನೀಡುವುದರೊಂದಿಗೆ ಮಾನವೀಯತೆ ಮೆರೆದಿದ್ದಾರೆ.

ಮಗುವಿನ ಪೋಷಕರಾದ ಗಣೇಶ್ ಗೃಹರಕ್ಷಕರಾಗಿದ್ದು ಬರುವ ವೇತನ ಕುಟುಂಬ ನಿರ್ವಹಣೆಗೆ ಸಾಕಾಗುವುದಿಲ್ಲ ಇಂತಹ ಸಂಕಷ್ಟದ ಕಾಲದಲ್ಲಿ ದೇವರು ಇಂತಹ ಮಗುವನ್ನು ನೀಡಿ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದ್ದಾನೆಂದು ಹೇಳಿದಾಗ ಎಂತಹವರ ಕಲ್ಲೆದೆ ಕೂಡ ಕರಗುವಂತಿತ್ತು.

ಗಣೇಶ್ ಕುಟುಂಬದವರು ಮತ್ತು ಮುಖಂಡರಾದ ತಾ.ಪಂ. ಮಾಜಿ ಸದಸ್ಯ ಎನ್.ಚಂದ್ರೇಶ್, ರವೀಂದ್ರ ಕೆರೆಹಳ್ಳಿ, ಜಿ.ಆರ್.ಗೋಪಾಲಕೃಷ್ಣ, ಸಣ್ಣಕ್ಕಿ ಮಂಜು, ಉಲ್ಲಾಸ್, ಖಲೀಲ್‌ ಷರೀಫ್ ಇನ್ನಿತರ ಹಲವರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here