ಸಂಕಷ್ಟ ಪರಿಹಾರಕ್ಕಾಗಿ ಎಸ್ ಸಿ ಸಮುದಾಯದವರಿಂದ ಈಶ್ವರ ದೇವಸ್ಥಾನದಲ್ಲಿ ಮೂಲೆಗದ್ದೆ ಶ್ರೀಗಳ ನೇತೃತ್ವದಲ್ಲಿ ರುದ್ರಾಭಿಷೇಕ

0
388

ರಿಪ್ಪನ್‌ಪೇಟೆ: ಹರತಾಳು ಗ್ರಾಮದ ಇತಿಹಾಸ ಪ್ರಸಿದ್ದ ಶ್ರೀ ಈಶ್ವರ ದೇವಸ್ಥಾನದಲ್ಲಿ ಮೂಲೆಗದ್ದೆ ಶಿವಯೋಗ್ರಾಶ್ರದ ಅಭಿನವ ಚನ್ನಬಸವ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ಎಸ್.ಸಿ.ಸಮುದಾಯದವರು ತಮ್ಮ ಕುಟುಂಬದಲ್ಲಿನ ಸಂಕಷ್ಟ ಪರಿಹಾರಕ್ಕಾಗಿ ರುದ್ರಾಭೀಷೇಕ ವಿಶೇಷ ಪೂಜಾ ಕಾರ್ಯಕ್ರಮ ಜರುಗಿತು.

ಹರತಾಳು ಗ್ರಾಮದಲ್ಲಿನ ಎಸ್.ಸಿ.ಸಮುದಾಯದ ಕುಟುಂಬದವರಲ್ಲಿ ಸಾಕಷ್ಟು ಸಂಕಷ್ಟಗಳು ಎದುರಾಗಿದ್ದು ಈ ಬಗ್ಗೆ ಧರ್ಮದರ್ಶಿ ತಂತ್ರಿಗಳ ಬಳಿ ಕೇಳಿಸಿದಾಗ ಬಂದ ಸಲಹೆಯಂತೆ ತಾವುಗಳೆಲ್ಲ ಸೇರಿ ತಮ್ಮ ಊರಿನ ಇತಿಹಾಸ ಪ್ರಸಿದ್ದ ಈಶ್ವರ ದೇವರಿಗೆ ಪ್ರತಿವರ್ಷ ಗುರುಗಳ ಸನ್ನಿಧಾನದಲ್ಲಿ ರುದ್ರಾಭಿಷೇಕ ಕಾರ್ಯ ನೆರವೇರಿಸಿದರೆ ತಮ್ಮ ಸಂಕಷ್ಟಗಳು ದೂರವಾಗುವುದು ಎಂದು ತಿಳಿಸಿದಂತೆ ಈಗ ಎರಡು ವರ್ಷಗಳಿಂದ ಈ ಧಾರ್ಮಿಕ ಕಾರ್ಯವನ್ನು ಕುಟುಂಬಸ್ಥರು ಶ್ರದ್ದಾ, ಭಕ್ತಿಯಿಂದ ನಿರ್ವಹಿಸಿಕೊಂಡು ಬರಲಾಗುತ್ತಿದ್ದು ನಮ್ಮ ಕಷ್ಟ ಕಾರ್ಪಣ್ಯಗಳು ಪರಿಹಾರವಾಗಿ ನೆಮ್ಮದಿಯಿಂದ ಇದ್ದೆವೆ ಎಂದು ಗ್ರಾಮದ ನವೀನ್, ಅಂಬಿಕಾ, ನಾಗರಾಜ್ ಹೀಗೆ ಪರಿಶಿಷ್ಟ ಜನಾಂಗದವರು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here