ಸಂಡೂರು ಜಗಮೋಹನ್ ಕಂಪನಿಯವರಿಂದ ಸಾವಿರಾರು ಕೋಟಿ ರೂ. ಲೂಟಿ ; ಜೆಡಿಎಸ್ ಗಂಭೀರ ಆರೋಪ

0
475

ರಿಪ್ಪನ್‌ಪೇಟೆ: ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ತಾಲ್ಲೂಕಿನ ಚಕ್ರಾವರಾಹಿ ವಿದ್ಯುತ್ ಉತ್ಪಾದನೆಯನ್ನು ಸಂಡೂರು ಜಗಮೋಹನ್ ಪವರ್ ಕಾರ್ಪೋರೇಷನ್ ಕಂಪನಿಗೆ ಲಿಸ್ ಮೇಲೆ ವಿದ್ಯುತ್‌ಯನ್ನು ಮಾರಾಟ ಮಾಡುವ ಒಪ್ಪಂದದಂತೆ ವರ್ಷಕ್ಕೆ ನೂರಾರು ಕೋಟಿ ಲಾಭಾಂಶವನ್ನು ಲೂಟಿ ಮಾಡುತ್ತಿದ್ದಾರೆಂದು ಜೆಡಿಎಸ್ ಯುವ ಮುಖಂಡ, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಭಾವಿ ಎಂ.ಎಲ್.ಎ ಅಭ್ಯರ್ಥಿಯೆಂದೆ ಬಿಂಬಿಸಲಾಗಿರುವ ಯಡೂರು ರಾಜಾರಾಮ್ ಆರೋಪಿಸಿದರು.

ಅವರು ರಿಪ್ಪನ್‌ಪೇಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಮುಂದಿನ ವರ್ಷದಲ್ಲಿ ರಾಜ್ಯದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರ ಹಿಡಿಯುವುದರೊಂದಿಗೆ ಮುಖ್ಯಮಂತ್ರಿಯಾಗಿ ಕುಮಾರಣ್ಣ ಗದ್ದುಗೆ ಏರುವ ಆಶಾ ಭಾವನೆ ವ್ಯಕ್ತಪಡಿಸಿ ಗ್ರಾಮಗಳ ಅಭಿವೃದ್ಧಿಗೆ ಸದ್ವಿನಿಯೋಗ ಮಾಡಿಕೊಳ್ಳುವ ಬದಲು ಬೇರೆ ರಾಜ್ಯದವರಿಗೆ ವಿದ್ಯುತ್ ಮಾರಾಟ ಮಾಡಿರುವುದು ಎಷ್ಟು ಸಮಂಜಸವಾಗಿದೆ ಸ್ವಹಿತಾ ಶಕ್ತಿಯಿಲ್ಲದೆ ರಾಜ್ಯದ ಸಂಪನ್ಮೂಲವನ್ನು ಬೇರೆ ರಾಜ್ಯಗಳಿಗೆ ಎರವಲು ನೀಡಿರುವು ಅಪಾಯಕಾರಿ ಬೆಳವಣಿಗೆ ಎಂದು ಟೀಕಿಸಿದರು.

ಈಗಾಗಲೇ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದೆ ಶಾಂತವೇರಿ ಗೋಪಾಲಗೌಡರ ಸಮಾಜವಾದಿ ತತ್ವ ಸಿದ್ದಾಂತಗಳು ಉಳಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಜಾರಿಗೊಳಿಸಿರುವ ನಿಯಮದನ್ವಯ ಲಕ್ಷ್ಮಣ ರೇಖೆಯನ್ನು ದಾಟದೆ ಇತಿ ಮಿತಿಯಲ್ಲಿ ಮತದಾರರನ್ನು ಅಕರ್ಷಿಸುವ ಮೂಲಕ ಈ ಭಾರಿ ತೀರ್ಥಹಳ್ಳಿಯಲ್ಲಿ ಹೊಸಯುವ ರಾಜಕಾರಣಿಯನ್ನು ಗೆಲ್ಲಿಸುವ ಬಯಕೆಯನ್ನು ವ್ಯಕ್ತಪಡಿಸುತ್ತಿದ್ದಾರೆಂದು ಹೇಳಿ ಕ್ಷೇತ್ರದಲ್ಲಿ ಮುಂಬರುವ ವರ್ಷಗಳಲ್ಲಿ ಮೆಡಿಕಲ್‌ ಕಾಲೇಜ್ ಮತ್ತು ಇಂಡ್ರಸ್ಟಿಸ್ ಸ್ಥಾಪನೆ ಏತ ನೀರಾವರಿ ಯೋಜನೆಯನ್ನು ಅನುಷ್ಟಾನಗೊಳಿಸುವ ಮೂಲಕ ಅತಿ ಹೆಚ್ಚು ಮಳೆಯಾಗುವ ಪ್ರದೇಶವಾದರೂ ಬೇಸಿಗೆಯಲ್ಲಿ ಮಲೆನಾಡಿನ ಜನರು ನೀರಿಗಾಗಿ ಪರಿತಪ್ಪಿಸಬೇಕಾಗಿದ್ದು ಇದನ್ನು ನಿವಾರಿಸುವ ಉದ್ದೇಶದಿಂದ ತುಂಗಾ ಭದ್ರಾ ವರದಾ ಏತ ನೀರಾವರಿ ಯೋಜನೆಯನ್ವಯ ಅಲ್ಲಲ್ಲಿ ಬ್ಯಾರೇಜ್ ನಿರ್ಮಿಸುವುದರ ಬಗ್ಗೆ ಚಿಂತನೆ ನಡೆಸಿರುವುದಾಗಿ ವಿವರಿಸಿ ಕುಮಾರಣ್ಣ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದದಿನದಲ್ಲಿಯೇ ಕ್ಷೇತ್ರದ ಅಭಿವೃದ್ದಿಗೆ ಪ್ರಥಮ ಆಧ್ಯತೆ ನೀಡುವುದಾಗಿ ವಿವರಿಸಿದರು.

ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಅನ್ಯಾಯ:

ರಾಷ್ಟ್ರಕವಿ ಕುವೆಂಪು ಮತ್ತು ಯು.ಆರ್.ಅನಂತಮೂರ್ತಿ, ಎಂ.ಕೆ.ಇಂದಿರಾ, ಡಾ. ಹಾ.ಮಾ.ನಾಯಕ್ ಹೀಗೆ ಹಲವು ಸಾಹಿತಿಗಳ ಲೇಖಕರು ಸರ್ವಜನಾಂಗದ ಶಾಂತಿಯ ತೋಟ ಎಂಬ ಕುವೆಂಪುರವರ ಮಾತಿನಂತೆ ಪಠ್ಯಪುಸ್ತಕದಲ್ಲಿ ಅವರನ್ನು ಅವಲಂಬಿಸಿ ಮುಂದಿನ ಯುಪೀಳಿಗಗೆ ಪರಿಚಯಿಸುವ ಕಾರ್ಯ ಮಾಡಬೇಕು ಎಂದರು.

ಗೃಹ ಸಚಿವ ಅರಗ ಜ್ಞಾನೇಂದ್ರ ಮತ್ತು ಕಿಮ್ಮನೆ ರತ್ನಾಕರ್‌ರವರು ಯುವಕರಿಗೆ ತಮ್ಮ ಸ್ಥಾನವನ್ನು ತ್ಯಾಗ ಮಾಡಿ ಪ್ರೋತ್ಸಾಹಿಸುವ ಕೆಲಸ ಮಾಡಿ ಜನಮೆಚ್ಚುಗೆ ಪಡೆಯಲಿ ಎಂದ ಅವರು, ಮುಂದಿನ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿರುವ ನಾನು ಕ್ಷೇತ್ರದ ಸರ್ವಾಂಗೀಣಾಭಿವೃದ್ಧಿಗೆ ಸಂಕಲ್ಪ ಮಾಡಿರುವುದಾಗಿ ವಿವರಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕ್ ಜೆಡಿಎಸ್ ಅಧ್ಯಕ್ಷ ಎನ್.ವರ್ತೇಶ್, ಜೆಡಿಎಸ್ ರಾಜ್ಯ ಮುಖಂಡ ಆರ್.ಎ.ಚಾಬುಸಾಬ್, ಆರ್.ಎನ್.ಮಂಜುನಾಥ, ಜಿ.ಎಸ್.ವರದರಾಜ್, ವಾಸಪ್ಪಗೌಡ, ಷಣ್ಮುಖಪ್ಪ, ವಿಶ್ವನಾಥ ಕಲ್ಲುಕೊಪ್ಪ ಇನ್ನಿತರರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here