ಸಂತೋಷ್ ಆತ್ಮಹತ್ಯೆ ಬಗ್ಗೆ ಸೂಕ್ತ ತನಿಖೆಯಾಗಲಿ: ಸಿ.ಟಿ ರವಿ

0
185

ಚಿಕ್ಕಮಗಳೂರು: ಗುತ್ತಿಗೆದಾರ ಸಂತೋಷ್ ಸಾವಿನ ಸುತ್ತ ಅನುಮಾನಗಳ ಹುತ್ತ ಬೆಳೆದಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ ರವಿ ಹೇಳಿದರು.

ಗುರುವಾರ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಹುಲ್ ಗಾಂಧಿಯವರ ಹೆಸರಿನಲ್ಲಿ ನಕಲಿ ಸಹಿ ಮಾಡಿ ಜಿಲ್ಲಾ ಪಂಚಾಯತ್ ಟಿಕೆಟ್ ಪಡೆಯಲು ಸಂತೋಷ್ ಯತ್ನಿಸಿದ್ದರು ಎಂಬ ಆರೋಪ ಇದೆ. ದೆಹಲಿಯಲ್ಲಿ ಪತ್ರಿಕಾ ಗೋಷ್ಟಿ ನಡೆಸಿದ್ದರು. ರಾಜಕಾರಣ ಗೊತ್ತಿದ್ದವರು ಯಾಕೆ ಆತ್ಮಹತ್ಯೆಗೆ ಶರಣಾದರು. ನಿಜವಾಗಿ ಆತ್ಮಹತ್ಯೆ ನಡೆದಿದ್ಯಾ? ಇದರ ಹಿಂದೇ ಬೇರೆ ಏನಾದರೂ ಇದ್ಯಾ? ಈ ಎಲ್ಲಾ ಅಂಶಗಳ ಮೇಲೆ ಸಮಗ್ರ ತಿನಿಖೆಯಾಗಬೇಕು ಎಂದರು.

ಕೆ.ಎಸ್. ಈಶ್ವರಪ್ಪ ರಾಜೀನಾಮೆ ಕುರಿತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಸೂಕ್ತ ನಿರ್ಣಯ ಕೈಗೊಳ್ಳುತ್ತಾರೆ. ರಾಜೀನಾಮೆ ವಿಚಾರ ಹೈಕಮಾಂಡ್ ಸೂಚನೆ ಬಗ್ಗೆ ನನಗೇನು ಗೊತ್ತಿಲ್ಲ ಎಂದು ಅವರು, ಗಣಪತಿ ಆತ್ಮಹತ್ಯೆ ಪ್ರಕರಣ ಮತ್ತು ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಎರಡನ್ನು ಒಂದೇ ದೃಷ್ಟಿಯಲ್ಲಿ ನೋಡಬೇಕೆಂದು ಇಲ್ಲ. ಸಾರ್ವಜನಿಕರ ಅಭಿಪ್ರಾಯ ಗೌರವಿಸಬೇಕು ಎಂದು ತಿಳಿಸಿದರು.

ಗಣಪತಿ ವಿಡಿಯೋ ಮಾಡಿ ಹೇಳಿಕೆ ನೀಡಿದ್ದರು. ಇಲ್ಲಿ ಸಂತೋಷ್ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಾದ ಮೇಲೆ ಆತ್ಮಹತ್ಯೆ ನಡೆದಿದೆ. ಎರಡಕ್ಕೂ ಹೊಲಿಕೆ ಮಾಡಲು ಬರುವುದಿಲ್ಲ ಎರಡು ಪ್ರಕರಣದಲ್ಲಿ ಜೀವಹಾನಿಯಾಗಿರುವುದು ದುರಾದೃಷ್ಟಕರ ಎಂದರು.

ಟೆಂಡರ್ ಕರೆಯದೇ ಕೆಲಸ ಮಂಜೂರಾಗದೆ ಕೋಟಿಗಟ್ಟಲೇ ಕೆಲಸ ಮಾಡಿಸಲು ಬರುತ್ತಾ ಎಂದು ಪ್ರಶ್ನಿಸಿದ ಅವರು, ಫೇಕ್ ವರ್ಕ್ ಆರ್ಡರ್ ನೀಡಲಾಗಿದ್ಯಾ ಎಂಬ ಎಲ್ಲಾ ವಿಷಯಗಳು ತನಿಖೆಯಿಂದ ತಿಳಿದು ಬರಬೇಕು. ಆದರೆ ಸಾವಿನ ಸುತ್ತ ಅನುಮಾನದ ಹುತ್ತಾ ಇರುವುದಂತು ಸ್ಪಷ್ಟ ಸಮಗ್ರ ತನಿಖೆಯಾಗಬೇಕು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ತಿಳಿಸಿದರು.

ವಿಪಕ್ಷಗಳು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರತಿಭಟನೆ ನಡೆಸಲು ಎಲ್ಲರಿಗೂ ಹಕ್ಕಿದೆ. ಪ್ರತಿಭಟನೆ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಂ ಡರೇ ಅವರ ವಿರುದ್ಧ ಕ್ರಮವಾಗುತ್ತದೆ. ಕಾನೂನು ಮಿತಿಯೊಳಗೆ ಪ್ರತಿಭಟನೆ ನಡೆಸಲು ಎಲ್ಲರಿಗೂ ಅವಕಾಶವಿದೆ ಎಂದು ತಿಳಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here