ಚಿಕ್ಕಮಗಳೂರು: ಮಾರ್ಚ್ ತಿಂಗಳ ಸಂಬಳ ನೀಡಿ ಎಂದು ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಧಿಕಾರಿ ವೀರೇಶ್ ಜೊತೆಗೆ ಸಾರಿಗೆ ನೌಕರ ನಿನ್ನೆ ರಾತ್ರಿ ವಾಕ್ವಾದ ಮಾಡಿರುವ ನಡೆದಿದೆ.
ನೌಕರ ರವಿ ಎನ್ನುವವರು ಡಿ.ಸಿ ಚಿಕ್ಕಮಗಳೂರು ಘಟಕದಲ್ಲಿ ಇರುವುದನ್ನು ತಿಳಿದುಕೊಂಡು ಬಂದು ಮಾರ್ಚ್ ತಿಂಗಳ ಸಂಬಳ ಹಾಕಿ ಎಂದು ವಾದ ಮಾಡಿದ್ದಾರೆ.
ಇದಕ್ಕೆ ಡಿ.ಸಿ. ವೀರೇಶ್ ಸಂಬಳ ಹಾಕುವ ಸಂಬಂಧಿಸಿದಂತೆ ಕೇಂದ್ರ ಕಛೇರಿಯಿಂದ ಯಾವುದೇ ಮಾಹಿತಿ ಬಂದಿಲ್ಲ, ಸಂಬಳದ ವಿಚಾರ ಘಟಕ ವ್ಯವಸ್ಥಾಪಕರಿಗೆ ವ್ಯಾಪ್ತಿಯಲ್ಲಿ ಬರುತ್ತದೆ ಅವರಿಗೆ ಬರುತ್ತದೆ ಅಲ್ಲಿ ವಿಚಾರಿಸಿ ಎಂದು ಹೇಳಿದರು ಕೇಳದೆ ನೌಕರ ಗಲಾಟೆ ಮಾಡಿದ್ದಾನೆ.
ಈ ಸಂಬಂಧದ ಕರ್ತವ್ಯಕ್ಕೆ ಅಡ್ಡಿಪಡಿಸಿದರು ಎಂದು ಹೇಳಿ ಡಿ.ಸಿ.ವೀರೇಶ್ ನಗರ ಠಾಣೆಯಲ್ಲಿ ನೌಕರನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Related