ಸಂಭ್ರಮದಿಂದ ಜರುಗಿದ ಭೈರಾಪುರ ಉದ್ಭವ ಕಂತೆ ಸಿದ್ದೇಶ್ವರ ಸ್ವಾಮಿ ರುದ್ರಾಭಿಷೇಕ

0
435

ರಿಪ್ಪನ್‌ಪೇಟೆ: ಮಹಾಶಿವರಾತ್ರಿಯ ಪ್ರಯುಕ್ತ ಸಮೀಪದ ಬೈರಾಪುರದ ಉದ್ಬವ ಕಂತೆ ಸಿದ್ದೇಶ್ವರ ಸ್ವಾಮಿಗೆ ವಿಶೇಷ ರುದ್ರಾಭಿಷೇಕ, ಅಭಿಷೇಕ ಹಾಗೂ ಅಲಂಕಾರ ಪೂಜಾ ಕಾರ್ಯಕ್ರಮವು ವಿರಕ್ತಮಠದ ಮಹೇಶ್ವರಯ್ಯ ನೇತೃತ್ವದಲ್ಲಿ ಸಂಭ್ರಮ ಸಡಗರದೊಂದಿಗೆ ಜರುಗಿತು.

ಮಹಾಶಿವರಾತ್ರಿಯ ಜಾಗರಣೆಯೊಂದಿಗೆ ಶುಕ್ರವಾರ ಉದ್ಭವ ಕಂತೆ ಸಿದ್ದೇಶ್ವರ ಸ್ವಾಮಿ ದೇವಸ್ಥಾನಕ್ಕೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರ ಸಮೂಹ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ದರ್ಶನಾಶೀರ್ವಾದವನ್ನು ಪಡೆದರು. ನಂತರ ಸಾಮೂಹಿಕ ಅನ್ನ ಸಂತರ್ಪಣೆ ಜರುಗಿತು.

ಉದ್ಭವ ಕಂತೆ ಸಿದ್ದೇಶ್ವರ ಸ್ವಾಮಿ ದೇವಸ್ಥಾನವು ಶಿವಮೊಗ್ಗ-ಹೊಸನಗರ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಈ ದೇವಸ್ಥಾನದ ಮಹಿಮೆ ಕಂಡು ಸಾಕಷ್ಟು ಭಕ್ತರು ಶ್ರದ್ದಾಭಕ್ತಿಯಿಂದ ಬಂದು ತಮ್ಮ ಸೇವೆಯನ್ನು ಸಲ್ಲಿಸುವುದು ವಾಡಿಕೆಯಾಗಿದೆ ದೀಪಾವಳಿ ಸಂದರ್ಭದಲ್ಲಿ ಸುತ್ತಮುತ್ತಲಿನ ರೈತರು ತಮ್ಮ ಎತ್ತುಗಳನ್ನು ಹಿಡಿದು ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುವುದು ಇಲ್ಲಿನ ವಿಶೇಷವಾಗಿದೆ. ಅಂದರೆ ಬೇಡಿಬಂದ ಭಕ್ತರ ಅಶೋತ್ತರಗಳನ್ನು ಕರುಣಿಸುವ ಕರುಣಾಮಯಿ ಸಿದ್ದೇಶ್ವರ ಸ್ವಾಮಿ ಎಂಬ ಬಲವಾದ ನಂಬಿಕೆ ಇಲ್ಲಿನ ವಿಶೇಷವೆಂದು ಮುರಿಗಮ್ಮ ಗುರುಪಾದಯ್ಯ, ದೊಡ್ಡಿನಕೊಪ್ಪದ ಹಿರಿಯರಾದ ಸುಶೀಲಮ್ಮ ಶಿವಪ್ಪಗೌಡ, ಡಿ.ಸಿ.ಈಶ್ವರಪ್ಪ, ದಾಕ್ಷಾಯಿಣಮ್ಮ, ಹಾಲಪ್ಪಗೌಡ ಭೈರಾಪುರ, ಟೇಕೇಶಪ್ಪಗೌಡ, ಮುಡುಬ ಧರ್ಮಪ್ಪ, ಸುವರ್ಣಮ್ಮ ಈಶ್ವರಪ್ಪ, ಮಂಜಪ್ಪ ಭಂಡಾರಿ, ಹಿರಿಯಣ್ಣ ಭಂಡಾರಿ, ಷಣ್ಮುಖ, ಹೊಳೆಯಪ್ಪಗೌಡ, ಜಯಲಕ್ಷ್ಮೀ ಮೋಹನ್, ಡಿ.ಎಸ್.ಕರ್ಣ, ಕಿರಣ, ಡಿ.ಈ.ಮಧುಸೂದನ್, ಮಂಜಪ್ಪಗೌಡ ಬೈರಾಪುರ, ಸ್ವಾಮಿ ಭೈರಾಪುರ, ಡಾಕಪ್ಪ, ತಮ್ಮ ಅನುಭವವನ್ನು ಈ ರೀತಿಯಲ್ಲಿ ಪ್ರತಿಕ್ರಿಯಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here