ಸಂಭ್ರಮದೊಂದಿಗೆ ವರ್ಷದೊಡಕು ಸಂಪನ್ನ

0
655

ರಿಪ್ಪನ್‌ಪೇಟೆ: ಮಲೆನಾಡಿನ ವ್ಯಾಪ್ತಿಯಲ್ಲಿ ದೀಪಾವಳಿಯ ಹಬ್ಬವು ಮೂರು, ಐದು ದಿನಗಳ‌ ಕಾಲ ನೀರು ತುಂಬುವುದು ಬಲಿಪಾಡ್ಯಮಿ ಮತ್ತು ವರ್ಷದೊಡಕು ಇನ್ನೂ ಹಲವರು ನೋನಿ ನೀರು ತುಂಬುವ ಹಬ್ಬ, ಬಲಿಪಾಡ್ಯಮಿ ಕರಿ ಹಾಗೂ ವರ್ಷದೊಡಕು ಎಂದು ಐದು ದಿನಗಳ ಕಾಲ ಹಬ್ಬ ಆಚರಿಸುವುದು ಅನಾದಿ ಕಾಲದಿಂದಲೂ ನಡೆಸಿಕೊಂಡ ಬರುತ್ತಿರುವ ಪದ್ದತಿಯ ಹಬ್ಬವಾಗಿದ್ದು ಇಂದು ಜಮೀನಿನಲ್ಲಿ ಬೆಳೆಯಲಾದ ಭತ್ತದ ತೆನೆಗಳನ್ನು ಕಟಾವು ಮಾಡಿಕೊಂಡು ಬಂದು ಮುತ್ತೈದೆಯರು ಹೊಸಬಟ್ಟೆಗಳನ್ನು ತೊಟ್ಟು ಪೂಜಿಸಿ ವರ್ಷದೊಡಕಿನ ವಿಶೇಷ.

ಮುಂಜಾನೆ ಕಾಗೆ ಕೂಗುವ ಮುನ್ನವೇ ಮನೆಯ ಯಜಮಾನ ಜಮೀನಿನಲ್ಲಿ ಬೆಳೆಯಲಾದ ಭತ್ತದ ಪೈರನ್ನು ಪೂಜಿಸಿ ಕಟಾವು ಮಾಡಿಕೊಂಡು ಮನೆಗೆ ತಂದು ಅದನ್ನು ದೇವರ ಮನೆಯಲ್ಲಿಟ್ಟು ಭತ್ತದ ಫಸಲಿಗೆ ಅರಿಶಿಣ ಕುಂಕುಮ ಗಂಧ ಭಸ್ಮಧಾರಣೆ ಮಾಡಿ ಹೂವಿನ ಅಲಂಕಾರದೊಂದಿಗೆ ವಿಶೆಷ ಪೂಜೆ ಸಲ್ಲಿಸಿ ಭತ್ತದಲ್ಲಿ ಅಕ್ಕಿಯನ್ನು ತೆಗೆದು ಹಾಲು ಪಾಯಸ ಮಾಡಿ ನೈವೇದ್ಯ ಮಾಡುತ್ತಾರೆ. ಅಲ್ಲದೆ ಬಗೆ ಬಗೆಯ ಭಕ್ಷ್ಯಗಳನ್ನು ಸಿದ್ದಪಡಿಸಿ ನೈವೇದ್ಯ ಮಾಡಿ ವಿವಾಹ ಮಾಡಿಕೊಟ್ಟ ಹೆಣ್ಣು ಮಕ್ಕಳನ್ನು ತವರಿಗೆ ಕರೆಯಿಸಿ ಬಾಗಿನ ಕೊಟ್ಟು ಹರಸುವುದು ದೀಪಾವಳಿಯ ವಿಶೇಷ ಸಂಪ್ರದಾಯವಾಗಿದೆ. ಅದರಂತೆ ಇಂದು ವಿವಿಧ ಕಡೆಯಲ್ಲಿ ವರ್ಷತೊಡಕು ಹಬ್ಬವನ್ನು ಸಂಭ್ರಮದೊಂದಿಗೆ ಆಚರಿಸುವುದರೊಂದಿಗೆ ದೀಪಾವಳಿ ಹಬ್ಬ ಸಂಪನ್ನಗೊಂಡಿತು.

ಜಾಹಿರಾತು

LEAVE A REPLY

Please enter your comment!
Please enter your name here