ಸಂಭ್ರಮದೊಂದಿಗೆ ಸಂಪನ್ನಗೊಂಡ ಹೊಗಳಿಕಮ್ಮ ದೇವಿ ಜಾತ್ರಾ ಮಹೋತ್ಸವ

0
471

ರಿಪ್ಪನ್‌ಪೇಟೆ: ಸಮೀಪದ ತಳಲೆ ಬಳಿಯ ಇತಿಹಾಸ ಪ್ರಸಿದ್ದ ಹೊಗಳಿಕಮ್ಮ ದೇವಿಯ ಜಾತ್ರಾ ಮಹೋತ್ಸವವು ಸಂಭ್ರಮದೊಂದಿಗೆ ಸಂಪನ್ನಗೊಂಡಿತು.

ಈ ಜಾತ್ರಾ ಮಹೋತ್ಸವದಲ್ಲಿ ದೇವಿಗೆ ಸುತ್ತಮುತ್ತಲಿನ ರೈತ ನಾಗರೀಕರು ಭಕ್ತ ಸಮೂಹ ಧಾವಿಸಿ ದೇವಿಗೆ ಹಣ್ಣು-ಕಾಯಿ ಹರಕೆ ಸಮರ್ಪಿಸುವ ಮೂಲಕ ದೇವಿಯ ದರ್ಶನ ಪಡೆದರು.

ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಎಐಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಸಾಮೂಹಿಕ ಅನ್ನಸಂತರ್ಪಣೆಗೆ ಅರ್ಥಿಕ ನೆರವು ನೀಡಿ, ಜಾತ್ರಾ ಮಹೋತ್ಸವವು ಗ್ರಾಮೀಣ ಸಂಸ್ಕೃತಿ, ಸಂಸ್ಕಾರದ ಪ್ರತೀಕಗಳಾಗಿವೆ. ನಮ್ಮ ಪೂರ್ವಿಕರು ಆಚರಿಸಿಕೊಂಡು ಬಂದಂತಹ ದೇವಿಯ ಆರಾಧನೆಯಿಂದಾಗಿ ಗ್ರಾಮದ ಸರ್ವ ಜನಾಂಗವರಲ್ಲಿ ಸಾಮರಸ್ಯ ಸೌಹಾರ್ಧತೆ ಬೆಳಸಿಕೊಂಡು ಬರಲು ಸಹಕಾರಿಯಾಗಿದೆ ಎಂದರು.

ಜಿ.ಪಂ.ಸದಸ್ಯೆ ಕುಮಾರಿ ಶ್ವೇತಾ ಆರ್.ಬಂಡಿ, ಎಪಿಎಂಸಿ ನಿರ್ದೇಶಕ ರಾಮಚಂದ್ರ, ಅರಸಾಳು ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಮಾಕರ್, ಗ್ರಾ.ಪಂ.ಸದಸ್ಯರಾದ ಶ್ರೀಮಂತ, ಚಂದ್ರಶೇಖರ ಮಳವಳ್ಳಿ, ಕಾಂಗ್ರೆಸ್ ಮುಖಂಡ ಉಂಡಗೋಡು ನಾಗಪ್ಪ, ಉಲ್ಲಾಸ್, ವಿಜಯ ಇತರರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here