ಸಂವಿಧಾನಕ್ಕೆ ಅಗೌರವ ಹಿನ್ನೆಲೆ ಫೆ.01 ರಂದು ಕಾಫಿನಾಡು ಬಂದ್‌ಗೆ ಕರೆ !

0
245

ಚಿಕ್ಕಮಗಳೂರು: ಗಣರಾಜ್ಯೋತ್ಸವ ದಿನದಂದೇ ಸಂವಿಧಾನ ಶಿಲ್ಪಿ ಡಾ|| ಬಿ. ಆರ್. ಅಂಬೇಡ್ಕರ್ ಮತ್ತು ಸಂವಿಧಾನಕ್ಕೆ ಅಗೌರವ ಉಂಟು ಮಾಡಿದ ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ವಿವಿಧ ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಫೆಬ್ರವರಿ 01 ರಂದು ಚಿಕ್ಕಮಗಳೂರು ನಗರವನ್ನು ಬಂದ್ ಮಾಡಲೂ ಕರೆ ನೀಡಿವೆ.

ಗಣರಾಜ್ಯೋತ್ಸವ ದಿನದಂದು ರಾಯಚೂರಿನಲ್ಲಿ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅಂಬೇಡ್ಕರ್ ಭಾವಚಿತ್ರ ಇದ್ದರೆ ತಾವು ಧ್ವಜಾರೋಹಣ ಮಾಡುವುದಿಲ್ಲವೆಂದು ಹೇಳಿ, ಅಂಬೇಡ್ಕರ್ ಭಾವಚಿತ್ರ ತೆಗೆಸಿ ಅವಮಾನ ಮಾಡಿದ್ದಾರೆ ಎಂದು ದಲಿತ ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ.

ಇದು ಒಬ್ಬ ಪಕ್ಷ, ವ್ಯಕ್ತಿ, ಸಂಘಟನೆಗೆ ಮಾಡಿದ ಅವಮಾನವಲ್ಲ. ಭಾರತೀಯರಿಗೆ ಮಾಡಿದ ಅವಮಾನ ಎಂದು ಪ್ರತಿಪಾದಿಸಿರುವ ಮುಖಂಡರು ಜಿಲ್ಲೆಯ ಎಲ್ಲ ಶಾಸಕರು, ಪ್ರಗತಿಪರ ಸಂಘಟನೆಗಳ ಮುಖಂಡರು ಪಾಲ್ಗೊಂಡು ಬಂದ್‌ಗೆ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.

ಹೊನ್ನೇಶ್, ವಕೀಲ ರಘು, ಅನಿಲ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಅಂಬೇಡ್ಕರ್ ಭಾವಚಿತ್ರಕ್ಕೆ ಆಗೌರವ ಹಿನ್ನೆಲೆ ಮೂಡಿಗೆರೆ ಪಟ್ಟಣದಲ್ಲಿ ಸಿಪಿಐ ಎಂಎಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗೆ ಮನವಿ ಸಲ್ಲಿಸಲಾಯಿತು‌‌. ರುದ್ರಯ್ಯ, ಶೇಖರ್, ಸಂದೀಪ್ ಹಾಗೂ ಕಾರ್ಯಕರ್ತ ಪಾಲ್ಗೊಂಡಿದ್ದರು.
ಜಾಹಿರಾತು

LEAVE A REPLY

Please enter your comment!
Please enter your name here