ಸಕಲ ಸಿದ್ಧತೆಗಳೊಂದಿಗೆ ಹೊಸನಗರದಲ್ಲಿ SSLC ಪೂರಕ ಪರೀಕ್ಷೆಗೆ ಸಜ್ಜು

0
367

ಹೊಸನಗರ : 2021ರ ಸೆಪ್ಟೆಂಬರ್ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ಇಂದು ಮತ್ತು ಬುಧವಾರ ನಡೆಯಲಿದ್ದು ನಗರದಲ್ಲಿ ಹೊಸನಗರದಲ್ಲಿ 48 ಪರೀಕ್ಷಾರ್ಥಿಗಳು ಈ ಪರೀಕ್ಷೆಗಳಲ್ಲಿ ಪಾಲ್ಗೊಳ್ಳಲಿದ್ದು ಶಿಕ್ಷಣ ಇಲಾಖೆಯ ತಾಲೂಕಾಡಳಿತ ಯಾವುದೇ ಗೊಂದಲ, ಭಯ ಭೀತಿಯಿಲ್ಲದೇ ಪರೀಕ್ಷೆ ಎದುರಿಸಲು ಪೂರಕ ವ್ಯವಸ್ಥೆ ಕೈಗೊಂಡಿದೆ.

ಪರೀಕ್ಷೆಗಳು ಪಟ್ಟಣದ ಪದವಿ ಪೂರ್ವ ಕಾಲೇಜಿನಲ್ಲಿ 6 ಕೊಠಡಿಗಳಲ್ಲಿ ನಡೆಸಲು ಸರ್ವ ಸಿದ್ಧತೆ ಮಾಡಿಕೊಂಡಿದ್ದು ಎಲ್ಲ ಕೊಠಡಿಗಳನ್ನು ಪಟ್ಟಣ ಪಂಚಾಯಿತಿ ವತಿಯಿಂದ ಸ್ಯಾನಿಟೈಸರ್ ಮಾಡಲಾಗಿದೆ.

ಪರೀಕ್ಷೆ ಎದುರಿಸುವ ಎಲ್ಲ ವಿದ್ಯಾರ್ಥಿಗಳಿಗೂ ಕಡ್ಡಾಯ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್, ಮಾಸ್ಕ್ ವ್ಯವಸ್ಥೆ ಮಾಡಿರುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ ತಿಳಿಸಿದರು.

ಇಂದು ಸೋಮವಾರ ವಿಷಯವಾರು ಪರೀಕ್ಷೆಗಳು ನಡೆಯಲಿದ್ದು ಬುಧವಾರ ಭಾಷಾ ವಿಷಯಗಳ ಪರೀಕ್ಷೆ ನಡೆಯಲಿದೆ.

ಪರೀಕ್ಷೆಗಳ ವ್ಯವಸ್ಥಿತ ಕ್ರಮಗಳಿಗಾಗಿ ತಾಲೂಕಾಡಳಿತ ಆರೋಗ್ಯ ಇಲಾಖೆ ಪಟ್ಟಣ ಪಂಚಾಯಿತಿ ಆರಕ್ಷಕ ಇಲಾಖೆ ಶಿಕ್ಷಣ ಇಲಾಖೆ ಸಹಯೋಗ ಪಡೆದಿದ್ದು ಈ ವ್ಯವಸ್ಥೆಗೆ ಬಿ.ಆರ್.ಸಿ ಹಾಗೂ ಸಿ.ಆರ್.ಪಿ ಗಳು ಸಹ ಕೈಜೋಡಿಸಿರುವುದಾಗಿ ವೀರಭದ್ರಪ್ಪ ಮಾಹಿತಿ ನೀಡಿದರು.

ಪರೀಕ್ಷಾ ಕಸ್ಟೋಡಿಯನ್ ಆಗಿ ರಂಗಸ್ವಾಮಿ ಕರ್ತವ್ಯ ವೆಸಗುತ್ತಿದ್ದು, ಸಿ. ಪುಟ್ಟಪ್ಪ ಹಾಗೂ ಚಂದ್ರಕಾಂತ್ ಅವರಿಗೆ ಸಾಥ್ ನೀಡಿರುತ್ತಾರೆ.

ವರದಿ : ಉಡುಪಿ ಎಸ್ ಸದಾನಂದ ಹೊಸನಗರ 8277173177
ಜಾಹಿರಾತು

LEAVE A REPLY

Please enter your comment!
Please enter your name here