ಸಕಾಲಕ್ಕೆ ಸೂಕ್ತ ಚಿಕಿತ್ಸೆ ಪಡೆದರೆ ಕ್ಷಯ ರೋಗದಿಂದ ಸಂಪೂರ್ಣವಾಗಿ ಗುಣಮುಖರಾಗಬಹುದು: ಡಾ|| ಎಂ.ಕೆ. ಭಟ್

0
227

ಸೊರಬ: ಕ್ಷಯ ರೋಗವು ಬಹಳ ಪುರಾತನ ಕಾಯಿಲೆಯಾದರೂ ಇದರ ಬಗ್ಗೆ ಇರುವ ತಪ್ಪು ಕಲ್ಪನೆಗಳಿಂದ ಹೊರ ಬಂದು ಸಕಾಲಕ್ಕೆ ಸೂಕ್ತ ಚಿಕಿತ್ಸೆ ಪಡೆದರೆ ರೋಗದಿಂದ ಸಂಪೂರ್ಣವಾಗಿ ಗುಣಮುಖರಾಗಬಹುದು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ವೈದ್ಯ ಡಾ|| ಎಂ.ಕೆ. ಭಟ್ ಹೇಳಿದರು.

ಪಟ್ಟಣದಲ್ಲಿ ಬುಧವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕ್ಷಯ ರೋಗ ನಿಯಂತ್ರಣ ಕೇಂದ್ರ ಹಾಗೂ ಸಾರ್ವಜನಿಕ ಆಸ್ಪತ್ರೆ ವತಿಯಿಂದ ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಜೆಸಿಐ, ಯುವಾ ಬ್ರಿಗೇಡ್, ಎಸ್‌ಐಒ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ವಿಶ್ವ ಕ್ಷಯ ರೋಗ ದಿನಾಚಣೆ ಅಂಗವಾಗಿ ಹಮ್ಮಿಕೊಂಡ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬಡತನ, ಅಪೌಷ್ಟಿಕತೆ ಹಾಗೂ ನಗರಗಳಲ್ಲಿ ಹೆಚ್ಚುತ್ತಿರುವ ಕೊಳಚೆ ಪ್ರದೇಶಗಳು ಮುಂತಾದ ಹಲವು ಕಾರಣಗಳಿಂದಾಗಿ ಕ್ಷಯ ರೋಗ ನಿಯಂತ್ರಣ ಸರ್ಕಾರದ ಪಾಲಿಗೆ ಬಲುದೊಡ್ಡ ಸವಾಲಾಗಿ ಪರಿಣಮಿಸಿದೆ. ದೇಶವನ್ನು ಕ್ಷಯ ರೋಗ ಮುಕ್ತ ರಾಷ್ಟ್ರವನ್ನಾಗಿಸುವ ಗುರಿಯನ್ನು ಸರ್ಕಾರ ಹೊಂದಿದ್ದು, ಕಳೆದ ವರ್ಷ ಕೊರೋನಾದತ್ತ ಚಿತ್ತ ಹರಿಸಿದ್ದರ ಪರಿಣಾಮ ಕ್ಷಯ ರೋಗದತ್ತ ಹೆಚ್ಚಿನ ಗಮನ ನೀಡಲಿಲ್ಲ. ಕ್ಷಯ ರೋಗಿಗೆ ಕೊರೊನಾ ಸೋಂಕು ತಗುಲಿದರೆ ಅಪಾಯ ಮತ್ತಷ್ಟು ದುಪ್ಪಟ್ಟು ಸಂಭವಿಸುವ ಸಾಧ್ಯತೆ ಇದೆ ಎಂದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಅಕ್ಷತಾ ವಿ. ಖಾನಾಪುರ ಮಾತನಾಡಿ, ಎರಡು ವಾರಗಳಿಗಳಿಗೂ ಹೆಚ್ಚು ದಿನ ಕೆಮ್ಮ, ಎದೆ ನೋವು, ಹಸಿವಾಗದೆ ಇರುವುದು, ಸಂಜೆಯ ವೇಳೆ ಜ್ವರ ಕಾಣಿಸಿಕೊಳ್ಳುವುದು. ಕಫದಲ್ಲಿ ರಕ್ತ ಬೀಳುವುದು ಕಾಣಿಸಿಕೊಂಡರೆ ಅದು ಕ್ಷಯ ರೋಗದ ಲಕ್ಷಣಗಳಾಗಿರುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಈ ಲಕ್ಷಣಗಳು ಕಂಡು ಬಂದರೆ ಕೋಡಲೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸಾರ್ವಜನಿಕ ಆಸ್ಪತ್ರೆಯ ವೈದ್ಯರನ್ನು ಕಾಣಬೇಕು. ಕ್ಷಯ ರೋಗ ತಪಾಸಣೆ ಮತ್ತು ಚಿಕಿತ್ಸೆಯನ್ನು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಮಾಡಲಾಗುತ್ತದೆ ಎಂದರು.

ಶ್ರೀ ರಂಗನಾಥ ದೇವಸ್ಥಾನದ ಮುಂಭಾಗ ಜಾಥಾಕ್ಕೆ ತಾಪಂ ಪ್ರಭಾರ ಇಒ ಕೆ.ಜಿ. ಕುಮಾರ್ ಚಾಲನೆ ನೀಡಿದರು. ಜಾಥಾವು ಮುಖ್ಯರಸ್ತೆಯ ಮಾರ್ಗವಾಗಿ ಖಾಸಗಿ ಬಸ್ ನಿಲ್ದಾಣದ ಆವರಣದ ಎಸ್. ಬಂಗಾರಪ್ಪ ಪುತ್ಥಳಿವರೆಗೆ ಜರುಗಿತು.

ಕ್ಷಯ ರೋಗ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಎಚ್. ಅಕ್ಷಯ, ಸಾರ್ವಜನಿಕ ಆಸ್ಪತ್ರೆಯ ಡಾ|| ಆಫೀಫಾ ಆರೀಫ್, ಡಾ. ಛಾಯಾ, ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಭಾಕರ ಗೋಖಲೆ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಜಿಲ್ಲಾಧ್ಯಕ್ಷ ಸಿ.ಪಿ. ಈರೇಶ್ ಗೌಡ, ಜೆಸಿಐ ಸೊರಬ ವೈಜಯಂತಿ, ಅಧ್ಯಕ್ಷ ಮಂಜುನಾಥ ಗುತ್ತಿ, ಕಾಳಿಂಗರಾಜ್, ವಾಸುದೇವ ಬೆನ್ನೂರು, ಯುವಾ ಬ್ರಿಗೇಡ್‌ನ ತಾಲ್ಲೂಕು ಸಂಚಾಲಕ ಮಹೇಶ್ ಖಾರ್ವಿ, ಲೋಕೇಶ್, ರಂಗನಾಥ ಮೊಗವೀರ, ವಿನೋದ್ ವಾಲ್ಮಿಕಿ, ಕೃಷ್ಣ ಮೊಗವೀರ್, ರಾಘವೇಂದ್ರ, ಮಂಜು, ಅನಿಲ್ ಮಾಳವಾದೆ, ನಮ್ಮೂರ ಸಮುದಾಯ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಎಸ್. ರಾಘವೇಂದ್ರ, ಅಕ್ಕನ ಬಳಗದ ರೇಣುಕಮ್ಮ ಗೌಳಿ, ಎಸ್‌ಐಒ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಮುಹಮ್ಮದ್ ಉಮೇರ್, ಸೈಯದ್ ಜಿಯಾ, ಸೈಯದ್ ಅಖಿಲ್, ಸೈಯದ್ ಸುಹೇಬ್, ಮುಹಮ್ಮದ್ ರೇಹಾನ್, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಹಸೀನಾ, ಶಶಿ, ಮಂಜು, ಸುರೇಶ್, ಸೋಮಶೇಖರ್ ಸೇರಿದಂತೆ ಇತರರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here