ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದರೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸಹಕಾರಿ ಸಂಘಗಳನ್ನು ಅಭಿವೃದ್ಧಿಪಡಿಸಲು ಸಾಧ್ಯ: ರಘು ಹೆಚ್‌.ಎಸ್

0
229

ಶಿಕಾರಿಪುರ: ಸಹಕಾರಿ ಕ್ಷೇತ್ರದಲ್ಲಿ ಹಲವಾರು ಅಡೆತಡೆ ಏರುಪೇರು ಉಂಟಾಗುತ್ತದೆ. ಅದನ್ನೆಲ್ಲವನ್ನು ಮೆಟ್ಟಿ ತಾಲ್ಲೂಕಿನ ಕನಕ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ಲಾಭದಾಯಕವಾಗಿ ಹೊರಹೊಮ್ಮುವುದಕ್ಕೆ, ಈ ಸಹಕಾರ ಸಂಘ ಅಭಿವೃದ್ದಿಗೆ ಸಂಘದ ಸರ್ವ ಸದಸ್ಯರ ಹಾಗೂ ಆಡಳಿತ ಮಂಡಳಿಯ ಸಹಕಾರ ಅಗತ್ಯವಾಗಿದ್ದು, ಈ ಕನಕ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಿಂದ ಸಾಲ ಪಡೆದವರೆಲ್ಲರೂ ಸಕಾಲದಲ್ಲಿ ಸಾಲವನ್ನು ಮರುಪಾವತಿ ಮಾಡಿದರೆ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಸಾಧ್ಯವಾಗುತ್ತದೆ ಎಂದು ಕನಕ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ರಘು ಹೆಚ್.ಎಸ್ ಅಭಿಪ್ರಾಯ ವ್ಯಕ್ತಪಡಿಸಿದರು.

ಇಂದು ಪಟ್ಟಣದ ಭ್ರಾಂತೇಶ ಸಮುದಾಯ ಭವನದಲ್ಲಿ ಕನಕ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 17ನೇ ವರ್ಷದ ಸರ್ವಸದಸ್ಯರ ವಾರ್ಷಿಕ ಮಹಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದೆರಡು ವರ್ಷಗಳಿಂದ ಕೊರೊನಾ ಸಂದರ್ಭದಲ್ಲಿಯೂ ಕೂಡ ನಮ್ಮ ಕನಕ ಕ್ರೆಡಿಟ್ ಸಹಕಾರ ಸಂಘವು ಸರ್ಕಾರದ ಮಾರ್ಗಸೂಚಿಯನ್ನು ಅನುಸರಿಸಿ ವಹಿವಾಟು ನಡೆಸುವ ಮೂಲಕ ಸಂಕಷ್ಟದಲ್ಲಿರುವ ಸದಸ್ಯರ ಹಿತವನ್ನು ಕಾಪಾಡಲಾಗಿದೆ. ಸಂಘದ ವಾರ್ಷಿಕ ವಹಿವಾಟು 30 ಕೋಟಿ ರೂ., ಸಾಲ ನೀಡಿಕೆ 5 ಕೋಟಿ 71 ಲಕ್ಷ ರೂ., ಸಂಘದ ಆಸ್ತಿ 1 ಕೋಟಿ 12 ಲಕ್ಷ ರೂ., ಎಫ್ಡಿ, ಎಸ್ಸಿ, ಪಿಗ್ಮಿ ಸೇರಿದಂತೆ ಒಟ್ಟು 6 ಕೋಟಿ 41 ಲಕ್ಷ ರೂ. ವಾಗಿದ್ದು ಈ ವರ್ಷ ನಮ್ಮ ಕನಕ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು 14 ಲಕ್ಷ 53 ಸಾವಿರದ 165 ರೂಪಾಯಿ ನಿವ್ವಳ ಲಾಭದಲ್ಲಿದೆ ಎಂದು ತಿಳಿಸಿದರು.

ಶಿಕಾರಿಪುರ ತಾಲ್ಲೂಕಿನಲ್ಲಿ ಕನಕ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ಪ್ರತಿಷ್ಠಿತ ಸಹಕಾರಿ ಸಂಘವಾಗಿದ್ದು, ಈ ಸಹಕಾರ ಸಂಘವನ್ನು ಸಂಸ್ಥಾಪಕರ ಶ್ರಮವನ್ನು ಗೌರವಿಸಬೇಕಾಗಿದೆ. ಅವರು ಕಟ್ಟಿ ಬೆಳೆಸಿದ ಈ ಸಂಘವನ್ನು ಸರ್ವಸದಸ್ಯರು ಒಗ್ಗೂಡಿ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಸಹಕಾರ ನೀಡಬೇಕು. ಈ ಸಹಕಾರ ಸಂಘವು ಕೇವಲ ಒಂದೇ ಸಮಾಜಕ್ಕೆ ಸಿಮಿತವಾಗದೆ ಎಲ್ಲಾ ಸಮುದಾಯದ ಜನರನ್ನೊಳಗೊಂಡಿದೆ. ಸಂಘದ ಎಲ್ಲಾ ಸದಸ್ಯರು ತಮ್ಮ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಈ ಸಹಕಾರಿ ಸಂಘವು ಸಮಾಜದ ಶೈಕ್ಷಣಿಕವಾಗಿ ಪ್ರಗತಿಯಲ್ಲಿರುವವರಿಗೆ ಪ್ರೋತ್ಸಾಹ ನೀಡುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಆರ್ಥಿಕ ಹಾಗೂ ಸಾಂಸ್ಕೃತಿಕವಾಗಿಯೂ ಕೂಡ ನಮ್ಮ ಸಹಕಾರಿ ಸಂಘದ ಸದಸ್ಯರಿಗೆ ಉತ್ತೇಜನ ನೀಡುವ ವ್ಯವಸ್ಥೆ ಮಾಡಲಾಗಿದೆ.

ನಮ್ಮ ಸಮುದಾಯದ ಮಹಾನ್ ನಾಯಕರಾದ ಸಂಗೊಳ್ಳಿ ರಾಯಣ್ಣನವರು ಕೇವಲ ನಮ್ಮ ಸಮಾಜದ ಸಾಮಾನ್ಯ ನಾಯಕರಾಗದೇ, ಎಲ್ಲಾ ಸಮುದಾಯದ ನಾಯಕರಾಗಿ ಹೊರಹೊಮ್ಮಿದ್ದಾರಲ್ಲದೇ ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ರಾಯಣ್ಣನವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರಲ್ವದೇ, ಪ್ರಾಣತ್ಯಾಗ ಕೂಡ ಮಾಡಿದ್ದಾರೆ. ಅಲ್ಲದೇ ಕನಕದಾಸರು ಕೂಡ ಎಲ್ಲಾ ಸಮುದಾಯದ ನಾಯಕರಾಗಿ ಹೊರಹೊಮ್ಮಿದ್ದಾರಲ್ಲದೇ ಸಮಾಜದ ಅಂಕು ಡೊಂಕುಗಳನ್ನು ತಮ್ಮ ಕೀರ್ತನೆಗಳ ಮೂಲಕ ಸರಿದೂಗಿಸುವ ಕೆಲಸ ಮಾಡಿದ್ದಾರೆ. ಹಾಗೂ ಈ ಸಂಸ್ಥೆಯ ಸಂಸ್ಥಾಪಕರಿಗೆ ಅದರಲ್ಲೂ ಮುಖ್ಯವಾಗಿ ಈ ಸಹಕಾರ ಸಂಘವು ಆರಂಭದಲ್ಲಿ ಆಗಮಿಸಿದ ನಿರಂಜನಾನಂದಪುರಿ ಸ್ವಾಮಿಜಿ, ಈಶ್ವರಾಂನಂದ ಪುರಿ ಸ್ವಾಮೀಜಿ ಸೇರಿದಂತೆ ಮೈಸೂರು ಸಂಸ್ಥಾನದ ಆಶೀರ್ವಾದ ಕೂಡ ಈ ಕನಕ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗಿದೆ ಇಂತಹಾ ಮಹಾತ್ಮರ ಘನತೆಗೆ ಚ್ಯುತಿ ಬಾರದಂತೆ ಸಮಾಜದವರು ನಡೆಯಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಹಕಾರ ಸಂಘದ ಉಪಾಧ್ಯಕ್ಷೆ ಶುಭ ಸಾ ನ ಮಂಜಪ್ಪ, ನಿರ್ದೇಶಕರಾದ ಮಂಜಪ್ಪ ಎ ಎಸ್, ಹೆಚ್ ಜಿ ಗಿಡ್ಡಪ್ಪ (ಗಿರೀಶ್), ಆರ್ ಎಸ್ ಸತೀಶ್, ಕೊಟ್ರಪ್ಪ, ಪ್ರಶಾಂತ್ ಡಿ, ಸಿ ಎಸ್ ಗಿಡ್ಡೇಶ್, ವಿ ರಮೇಶ್ ಬಾಬು, ಲಕ್ಷ್ಮಮ್ಮ ನಾಗರಾಜ್, ಗೌರವ ಸಲಹೆಗಾರರಾದ ನಗರದ ಅಶೋಕ್, ಎಸ್ ಎಲ್ ಲಕ್ಕಪ್ಪ ಸೇರಿದಂತೆ ಅನೇಕ ಸದಸ್ಯರು ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here