ಸಕಾಲ ಯೋಜನೆಯ ಸದುಪಯೋಗ ಪಡಿಸಿಕೊಳ್ಳಿ ; ತಹಶೀಲ್ದಾರ್ ವಿ.ಎಸ್ ರಾಜೀವ್ ಕರೆ

0
628

ಹೊಸನಗರ: ಸಕಾಲ ಸೇವೆಗಳನ್ನು ನಾಗರೀಕರಿಗೆ ನಿಗದಿತ ಕಾಲಮಿತಿಯೊಳಗೆ ಒದಗಿಸುವುದು ಸಕಾಲ ಯೋಜನೆಯ ಗುರಿಯಾಗಿದ್ದು ಈ ಯೋಜನೆಯನ್ನು ನಾಗರೀಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೊಸನಗರ ತಹಶೀಲ್ದಾರ್ ವಿ.ಎಸ್ ರಾಜೀವ್‌ರವರು ತಿಳಿಸಿದರು.

ಹೊಸನಗರ ತಾಲ್ಲೂಕು ಆಡಳಿತ ನಾಗರಿಕ ಸೇವೆಗೆ ಸಾರ್ಥಕತೆ ತಂದ ಸಕಾಲ ಯೋಜನೆಗೆ ದಶಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು ಈ ಸಂಭ್ರಮದಲ್ಲಿ ಸಕಾಲ ಸೇವೆಯ ಬಗ್ಗೆ ಇಂದು ನಾಳೆ ಇನ್ನಿಲ್ಲ ಹೇಳಿದ ದಿನ ತಪ್ಪೋಲ್ಲ ಎಂಬ ಬ್ಯಾನರ್ ನೊಂದಿಗೆ ತಾಲ್ಲೂಕು ಕಛೇರಿಯ ಸಿಬ್ಬಂದಿಗಳು ಹಾಗೂ ಸಕಾಲ ಯೋಜನೆಯ ನೌಕರ ವರ್ಗ ಮೆರವಣಿಗೆ ನಡೆಸಿ ನಂತರ ಮಾತನಾಡಿದರು.

ಸಕಾಲ ಯೋಜನೆಯ ಆರಂಭ 2-4-2012ರಲ್ಲಿ ಕರ್ನಾಟಕ ಸರ್ಕಾರ ಸಕಾಲ ಸೇವೆಗಳ ಅಧಿನಿಯಮವನ್ನು ಜಾರಿಗೊಳಿಸಲಾಯಿತ್ತು ಪ್ರಾರಂಭದಲ್ಲಿ 11 ಇಲಾಖೆಗಳ ಪೈಕಿ 151 ಸೇವೆಗಳನ್ನು ಸಕಾಲ ಯೋಜನೆಯಡಿ ಒಳಪಡಿಸಲಾಯಿತ್ತು ಹಂತ-ಹಂತವಾಗಿ ಇಲ್ಲಿಯವರೆವಿಗೆ ಇಲಾಖೆಗಲ್ಲಿ 1115 ಸೇವೆಗಳನ್ನು ಯೋಜನೆಗಳನ್ನು ಜಾರಿಗೆ ತರಲಾಗಿದೆ ಇದುವರೆವೂ ರಾಜ್ಯದಲ್ಲಿ 26,93,24,446 ಅಜಿಗಳನ್ನು ಸ್ವೀಕರಿಸಲಾಗಿದ್ದು ಅದರಲ್ಲಿ 26,85,41,053 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದರು.

ಸಕಾಲ ಸೇವೆಗಳನ್ನು ನಾಗರೀಕರಿಗೆ ನಿಗದಿತ ಕಾಲಮೀತಿಯೊಳಗೆ ಒದಗಿಸುವುದೇ ಒಂದು ಗುರಿಯಾಗಿದ್ದು ಪ್ರಸ್ತುತ ಸಕಾಲ ಯೋಜನೆಗೆ ಒಳಪಟ್ಟ ಸೇವೆಗಳನ್ನು ಪಡೆಯಲು ಕೆಳಕಂಡ ವಿಧಾನಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು ಕಛೇರಿಯ ಚೀಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ ಸಕಾಲದಲ್ಲಿ ಸಲ್ಲಿಸಿರುವ ಅರ್ಜಿ ದಿನಾಂಕದೊಳಗೆ ನೀಡದಿದ್ದರೇ ಸಂಬಂಧಪಟ್ಟ ಅಧಿಕಾರಿಗಳಿಂದ ಪ್ರತಿ ದಿನಕ್ಕೆ 20ರೂಪಾಯಿಯಂತೆ ದಂಡದ ರೂಪದಲ್ಲಿ ಗರಿಷ್ಟ 500ರೂಪಾಯಿ ದಂಡ ಹಣ ಪಡೆಯಬಹುದು ಹಾಗೂ ಕೇಸು ದಾಖಲಿಸಬಹುದೆಂದು ಹೇಳಿದ್ದು ಪ್ರತಿಯೊಬ್ಬರು ಈ ಸಕಾಲಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಈ ಸಂದರ್ಭದಲ್ಲಿ ಗ್ರೇಡ್2 ತಹಶೀಲ್ದಾರ್ ರಾಕೇಶ್, ಶಿರಾಸ್ಥೆದಾರ್ ಸುಧೀಂದ್ರಕುಮಾರ್, ಶ್ರೀಕಾಂತ್ ಹೆಗಡೆ, ಪ್ರಥಮ ದರ್ಜೆ ಗುಮಾಸ್ಥರಾದ ವಿನಯ್ ಎಂ ಆರಾಧ್ಯ, ಚಿರಾಗ್, ಮಂಜುಳ, ಚಾಂದಿನಿ, ಸುರೇಶ್, ಆರ್.ಐ ವೆಂಕಟೇಶ ಮುರ್ತಿ, ನವೀನ್ ವಿನಯ್, ಗ್ರಾಮ ಲೆಕ್ಕಾಧಿಕಾರಿ ಚಂದಿನಿ, ಶಿವಪ್ಪ, ನಾಗರಾಜ್ ಕಿಣಿ, ಗಣೇಶ್, ಭಾಷ, ಸುಷ್ಮಿತಾ, ಸೌಮ್ಯ, ಜಾಗೃತಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here