ಸಚಿವ ಈಶ್ವರಪ್ಪ ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ಕೊಡಬೇಕು ; ಗೋಪಾಲಕೃಷ್ಣ ಬೇಳೂರು

0
164

ಶಿವಮೊಗ್ಗ: ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ನೇರ ಕಾರಣವಾದ ಸಚಿವ ಈಶ್ವರಪ್ಪ ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಕಾಂಗ್ರೆಸ್ ವಕ್ತಾರ ಗೋಪಾಲಕೃಷ್ಣ ಬೇಳೂರು ಹೇಳಿದರು.

ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗುತ್ತಿಗೆದಾರ ಹಿಂದೂ ಯುವಕನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನಿಗೆ ಬರಬೇಕಾದ ಕಾಮಗಾರಿ ಹಣ ಬಂದಿರಲಿಲ್ಲ. ಈ ಬಗ್ಗೆ ಪ್ರಧಾನಿಗೂ ಅವರು ಪತ್ರ ಬರೆದಿದ್ದಾರೆ ಆದರೂ ಯಾರು ಸ್ಪಂದಿಸಲಿಲ್ಲ. ವಿಧಿಯಿಲ್ಲದೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದು ಇಡಿ ರಾಜ್ಯ ತಲೆತಗ್ಗಿಸುವ ವಿಷಯವಾಗಿದೆ. ಸರ್ಕಾರದ ನಿರ್ಲಕ್ಷ್ಯವಾಗಿದೆ. ಒಂದು ರೀತಿಯಲ್ಲಿ ಇದು ಕೊಲೆ ಎಂದ ಅವರು, ಇದಕ್ಕೆ ಈಶ್ವರಪ್ಪನವರೇ ನೇರ ಹೊಣೆಯಾಗುತ್ತಾರೆ. ಅವರು ತಕ್ಷಣ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.

ಶಿವಮೊಗ್ಗದಲ್ಲಿ ಹರ್ಷ ಕೊಲೆಯಾದಾಗ ಸ್ವಾಮೀಜಿಗಳು ಸೇರಿದಂತೆ ಎಲ್ಲಾ ಬಿಜೆಪಿ ಮುಖಂಡರು ಆತನ ಮನೆಗೆ ಬಂದು ಸಾಂತ್ವನ ಹೇಳಿದ್ದಾರೆ. ಅದೇ ರೀತಿ ಸಂತೋಷ್ ಪಾಟೀಲ್ ಮನೆಗು ಕೂಡ ಬಿಜೆಪಿ ಮುಖಂಡರು, ಸ್ವಾಮೀಜಿಗಳು ಸಾಂತ್ವನ ಹೇಳಬೇಕು. ಆತನ ಕುಟುಂಬಕ್ಕೆ ಸರ್ಕಾರಿ ನೌಕರಿ ಕೊಡಬೇಕು. ಇಡಿ ಪ್ರಕರಣದ ತನಿಖೆಯಾಗಬೇಕು ಎಂದರು.

ರೇಣುಕಾಚಾರ್ಯ, ಯತ್ನಾಳ್‌ರಂತಹ ಮೂರ್ಖರು ಗುತ್ತಿಗೆದಾರನ ಆತ್ಮಹತ್ಯೆಗೆ ಕಾಂಗ್ರೆಸ್ ಕಾರಣ ಎಂದು ಹೇಳುತ್ತಾರೆ. ಯತ್ನಾಳ್ ಕೂಡ ಮನಸ್ಸು ಸರಿಯಿಲ್ಲದವರಂತೆ ಮಾತನಾಡುತ್ತಾರೆ. ಮೊದ ಮೊದಲು ಈಶ್ವರಪ್ಪ ಮತ್ತು ಸರ್ಕಾರದ ವಿರುದ್ಧ ಮಾತನಾಡುತ್ತಿದ್ದ ಯತ್ನಾಳ್ ಇಂದು ಪರವಾಗಿ ಮಾತನಾಡುತ್ತಾನೆ ಎಂದ ಏಕವಚನದಲ್ಲಿಯೇ ಇಬ್ಬರನ್ನು ತರಾಟೆಗೆ ತೆಗೆದುಕೊಂಡರು.

ಸಬ್ ಇನ್ಸ್‌ಪೆಕ್ಟರ್ ಆಯ್ಕೆಯಲ್ಲಿ ಯುವಕರಿಗೆ ಅನ್ಯಾಯವಾಗಿದೆ. ಇದಕ್ಕೆ ಗೃಹ ಮಂತ್ರಿ ಮತ್ತು ಎಡಿಜಿಪಿ ಕಾರಣರು. ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಬೇಕು ಮತ್ತು ಗೃಹ ಮಂತ್ರಿ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.

ಸಾಗರದಲ್ಲಿ ಶ್ರೀಪಾದ್ ಹೆಗಡೆ ಎಂಬುವವರ ಮೇಲೆ ಶಾಸಕ ಹಾಲಪ್ಪನವರಿದಂತೆ ಅವರ ಗುಂಪು ಹಲ್ಲೆ ಮಾಡಿ ನೀಚತನ ಮೆರೆದಿದೆ. ದೂರು ಕೊಟ್ಟರು ಕೂಡ ಇದುವರೆಗೂ ಎಫ್‌ಐಆರ್ ದಾಖಲಿಸಿಲ್ಲ. ತಕ್ಷಣವೇ ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here