ಸಚಿವ ಕೆ.ಎಸ್ ಈಶ್ವರಪ್ಪ ತಕ್ಷಣ ರಾಜೀನಾಮೆ ನೀಡಲಿ: ತಾಪಂ ಸದಸ್ಯ ಚಂದ್ರಮೌಳಿಗೌಡ ಆಗ್ರಹ

0
496

ಹೊಸನಗರ: ಅನೇಕ ವರ್ಷಗಳಿಂದಲೂ ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ಅವರ ವಿರುದ್ಧ ಷಡ್ಯಂತ್ರ ನಡೆಸುತ್ತ ಬಂದಿದ್ದು ಬಿಜೆಪಿ ಪಕ್ಷಕ್ಕಾಗಿ ಜನರ ಕಲ್ಯಾಣಕ್ಕಾಗಿ ತಮ್ಮ ಇಳಿ ವಯಸ್ಸಿನಲ್ಲಿಯು ರಾಜ್ಯದ ಚುಕ್ಕಾಣಿ ಹಿಡಿದು ಆಡಳಿತ ನಡೆಸುತ್ತಿರುವ ಯಡಿಯೂರಪ್ಪನವರ ವಿರುದ್ದ ಷಡ್ಯಂತ್ರ ಮಾಡುತ್ತಿರುವ ಕೆ.ಎಸ್ ಈಶ್ವರಪ್ಪನವರನ್ನು ಸಚಿವ ಸ್ಥಾನದಿಂದ ವಜಾ ಮಾಡಿ ಎಂದು ಬಿಜೆಪಿ ಪಕ್ಷಕ್ಕೆ ಹೊಸನಗರ ತಾಲ್ಲೂಕು ಪಂಚಾಯಿತಿಯ ಸದಸ್ಯ ಬಿ.ಜಿ. ಚಂದ್ರಮೌಳಿಗೌಡ ಆಗ್ರಹಿಸಿದ್ದಾರೆ.

ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಇನ್ನೂ ಎರಡು ವರ್ಷ ಈ ಸರ್ಕಾರದ ಭವಿಷ್ಯ ಉಳಿದಿದ್ದು ಮುಂದೆ ಯಾವುದೇ ಕಾರಣದಿಂದಲೂ ಬಿಜೆಪಿ ಆಡಳಿತ ಕರ್ನಾಟಕದಲ್ಲಿ ಬರುವುದಿಲ್ಲ. ಅದಕ್ಕಾಗಿ ಈ ಎರಡು ವರ್ಷದಲ್ಲಿಯಾದರೂ ಈಶ್ವರಪ್ಪ ಮುಂಖ್ಯಮಂತ್ರಿಯಾಗಬೇಕು ಎಂಬ ಕಾರಣದಿಂದ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ತಾವೇ ಮುಖ್ಯಮಂತ್ರಿಯಾಗಬೇಕೆಂದು ಷಡ್ಯಂತ್ರ ರೂಪಿಸುತ್ತಿದ್ದಾರೆ. ಇವರು ಕೆಲವು ಆರ್.ಎಸ್.ಎಸ್. ಮುಖಂಡರ ಬೆಂಬಲದೊಂದಿಗೆ ಅಪ್ಪ-ಮಕ್ಕಳು ಷಡ್ಯಂತ್ರ ರೂಪಿಸುತ್ತಿದ್ದಾರೆ. ತಕ್ಷಣ ಈಶ್ವರಪ್ಪನವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಇಲ್ಲವಾದರೆ ಬಿಜೆಪಿ ಪಕ್ಷದಿಂದ ಇವರನ್ನು ವಜಾ ಮಾಡಬೇಕೆಂದು ಆಗ್ರಹಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here