ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ಖಂಡಿಸಿ ಪ್ರತಿಭಟನೆ ; ಮನವಿ ಸಲ್ಲಿಕೆ

0
325

ಶಿಕಾರಿಪುರ : ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ರವರ ಹೇಳಿಕೆಯನ್ನು ಖಂಡಿಸಿ ಶಿಕಾರಿಪುರ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿ ತಾಲ್ಲೂಕು ಕಛೇರಿ ಎದುರು ತಹಶೀಲ್ದಾರ್ ಮೂಲಕ ರಾಜ್ಯದ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

.

ಮನವಿ ಸಲ್ಲಿಸುತ್ತಾ ಮಾತನಾಡಿದ ಕೆಪಿಸಿಸಿ ಸದಸ್ಯ ಮತ್ತು ಪಶ್ಚಿಮ ಘಟ್ಟದ ಮಾಜಿ ಅಧ್ಯಕ್ಷ ಚಂದ್ರಶೇಖರ್, ರಾಷ್ಟ್ರ ಭಕ್ತರು ಎಂದು ಪ್ರಚಾರಕ್ಕೆ ಸೀಮಿತವಾಗಿರುವ ರಾಜ್ಯದ ಉನ್ನತ ಹುದ್ದೆಯನ್ನು ಅಲಂಕರಿಸಿದ ಕೆ.ಎಸ್ ಈಶ್ವರಪ್ಪ ರಾಷ್ಟ್ರ ಧ್ವಜವನ್ನು ತೆಗೆದು ಕೇಸರಿ ಧ್ವಜವನ್ನು ಹಾರಿಸುವುದಾಗಿ ಹೇಳಿಕೆ ನೀಡಿದ್ದಾರೆ ಇಂತಹಾ ದೇಶ ದ್ರೋಹಿ ಹೇಳಿಕೆ ನೀಡಿರುವ ಅವರಿಗೆ ರಾಜ್ಯ ಸರ್ಕಾರ ಕೂಡಲೇ ಕೈಬಿಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟದ ಹಾದಿ ಹಿಡಿಯಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಅವರು, ಇತ್ತೀಚೆಗಿನ ಬಿಜೆಪಿ ಪಕ್ಷದ ದುರಾಡಳಿತ ಮತ್ತು ಸರ್ಕಾರದ ಸಚಿವರು ನೀಡುತ್ತಿರುವ ದೇಶ ವಿರೋಧಿಯ ಹೇಳಿಕೆಗಳ ವಿರುದ್ಧ, ಕಾಂಗ್ರೆಸ್ ಪಕ್ಷವು ದೇಶದ ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ 1940 ರ ಮೊದಲು ಹೋರಾಟ ನಡೆಸಿ ಹೇಗೆ ದೇಶವನ್ನು ಸ್ವಾತಂತ್ರವನ್ನಾಗಿಸದರೋ ಅದೇ ರೀತಿಯಲ್ಲಿ ಮತ್ತೆ ದೇಶ ಮತ್ತು ರಾಜ್ಯದಲ್ಲಿ ಪ್ರತಿಭಟನೆ, ಹೋರಾಟ ನಡೆಸುವ ಪ್ರಸಂಗ ಬಂದೊದಗಿದೆ. ಸ್ವಾತಂತ್ರ್ಯ ನಂತರ ದೇಶಕ್ಕೆ ಒಂದು ರಾಷ್ಟ್ರಧ್ವಜ ಬೇಕೆಂದು ಸಂವಿಧಾನಾತ್ಮಕವಾಗಿ, ದೇಶದ ಸರ್ವ ಧರ್ಮಗಳ ಸಂಕೇತವಾಗಿ ರಾಷ್ಟ್ರಧ್ವಜವನ್ನ ಎಲ್ಲಾ ಗಣ್ಯಮಾನ್ಯರ ಸಮ್ಮುಖದಲ್ಲಿ ಸರ್ವ ಧರ್ಮಗಳ ಸಂಕೇತವಾಗಿ ಕೇಸರಿ ಬಿಳಿ ಹಸಿರು ಬಣ್ಣದ ಮದ್ಯದಲ್ಲಿ ಅಶೋಕ ಚಕ್ರದ ಬಾವುಟವನ್ನು ನಮ್ಮ ದೇಶದ ದ್ವಜವೆಂದು ಅಧಿಕೃತವಾಗಿ ಒಪ್ಪಿಗೆ ಸೂಚಿಸುವುದರ ಮೂಲಕ ರಾಷ್ಟ್ರ ಧ್ವಜವನ್ನು ದೇಶದ ಎಲ್ಲೆಡೆ ಹಾರಿಸಲಾಯಿತು.

ಆದರೀಗ ಬಿಜೆಪಿ ಪಕ್ಷದ ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ ಎಸ್ ಈಶ್ವರಪ್ಪ ರವರು, ರಾಷ್ಟ್ರ ಧ್ವಜವನ್ನು ತೆಗೆದು ಕೇಸರಿ ಧ್ವಜವನ್ನು ಹಾರಿಸುವುದಾಗಿ ಹೇಳಿಕೆ ನೀಡಿದ್ದಾರೆ. ತ್ರಿವರ್ಣ ಧ್ವಜವು ನಮ್ಮ ರಾಷ್ಟ್ರದ ಸ್ವಾತಂತ್ರ್ಯ, ಅಖಂಡತೆ ಸಾರ್ವಭೌಮತ್ವ, ಅಸ್ಮಿತೆ ಮತ್ತು ಸಂವಿಧಾನದ ಸಂಕೇತವಾಗಿದೆ. ಇಂತಹ ದೇಶ ದ್ರೋಹಿ ಹೇಳಿಕೆ ನೀಡಿರುವ ಸಚಿವರನ್ನ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರು ತಮ್ಮ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.

ನಂತರ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್, ಬಿಜೆಪಿ ಪಕ್ಷದವರು ಇನ್ನೂ ಕೆಲವೇ ದಿನಗಳಲ್ಲಿ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಬರಲಿದ್ದು, ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆಯದೆ ಇರುವುದರಿಂದ ಇದನ್ನು ರಾಜ್ಯದ ಜನತೆಯಿಂದ ಮರೆಮಾಚಿಸಲು ಹಿಜಾಬ್ ವಿರುದ್ಧ ಹೋರಾಟದ ಹಾದಿ ಹಿಡಿದಿದ್ದಾರೆ.

ಮುಸ್ಲಿಂ ಜನಾಂಗದವರು ಹುಟ್ಟಿನಿಂದಲೂ ತಮ್ಮ ಮನೆಯಲ್ಲಾಗಲೀ ಹೊರಗಡೆ ಹೋಗುವಾಗಾಗಲೀ ಹಿಜಾಬ್ ಧರಿಸುವುದು ಸರ್ವೇ ಸಾಮಾನ್ಯವಾಗಿದೆ. ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರ ಸ್ವೀಕರಿಸಿದಾಗಿನಿಂದ ಇಲ್ಲಿಯ ವರೆಗೆ ಯಾವುದೇ ಒಬ್ಬ ವಿದ್ಯಾವಂತ ಯುವಕರಿಗೆ ಸರ್ಕಾರಿ ಉದ್ಯೋಗ ಕೊಡಿಸುವ, ಅಥವಾ ದೇಶದ ಅಭಿವೃದ್ಧಿ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗದೆ, ದೇಶದಲ್ಲಿ ನಿರುದ್ಯೋಗ ಸೃಷ್ಟಿಸುವುದರ ಜೊತೆಗೆ ದೇಶದ ಆರ್ಥಿಕ ಪರಿಸ್ಥಿತಿಯನ್ನು ಅಧೋಗತಿಗೆ ತಂದಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಹುಲ್ಮಾರ್ ಮಹೇಶ್ ಗೋಣಿ ಪ್ರಕಾಶ್, ನಾಗರಾಜ್ ಗೌಡ, ಶಕುಂತಲಾ ಗೋಣಿ ಶಿವಪ್ಪ, ಹುಲ್ಮಾರ್ ಕಮಲಮ್ಮ ಮಾಜಿ ಕಾಡಾದ್ಯಕ್ಷ ನಗರದ ಮಹಾದೇವಪ್ಪ, ಪಕ್ಷದ ತಾಲ್ಲೂಕು ವೀಕ್ಷಕರಾದ ಎಸ್ ಪಿ ದಿನೇಶ್, ಜಿಲ್ಲಾ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ಭಂಡಾರಿ ಮಾಲತೇಶ್, ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕ್ ನಾಯ್ಕ್, ಮುಖಂಡರಾದ ಶಿವು ನಾಯ್ಕ್, ಮಾರವಳ್ಳಿ ಉಮೇಶ್, ಕೋಡಿಹಳ್ಳಿ ಉಮೇಶ್, ತಿಮ್ಮಣ್ಣ ಸೇರಿದಂತೆ ಅನೇಕರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here