ಸಚಿವ ಡಾ.ಆಶ್ವತ್ಥ ನಾರಾಯಣ ರಾಜೀನಾಮೆಗೆ ಜೆಡಿಎಸ್ ಆಗ್ರಹ

0
105


ರಿಪ್ಪನ್‌ಪೇಟೆ: ಬಿಎಂಎಸ್  ಶಿಕ್ಷಣ ಸಂಸ್ಥೆಗೆ ಟ್ರಸ್ಟಿಗಳನ್ನು ನೇಮಕ ಮಾಡುವಲ್ಲಿ ಮತ್ತು ಎಂಜಿನಿಯರಿಂಗ್ ಸೀಟು ಮತ್ತು ಶುಲ್ಕ ಸಂಗ್ರಹ  ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ರಾಜ್ಯ ಮಾಜಿ ಪ್ರಧಾನ ಕಾರ್ಯದರ್ಶಿ ಆರ್.ಎ.ಚಾಬುಸಾಬ್ ಆಗ್ರಹಿಸಿದ್ದಾರೆ.


ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಶಿಕ್ಷಣ ಸಂಸ್ಥೆ ಕಾಲಕ್ರಮೇಣ ಸಾರ್ವಜನಿಕ ಟ್ರಸ್ಟ್ ಬದಲು ಒಂದು ಕುಟುಂಬದ ಟ್ರಸ್ಟ್ ಆಗಿ ಪರಿವರ್ತಿಸಲಾಗುತ್ತದೆ ಇದಕ್ಕೆ ಸಚಿವರೇ ಕಾರಣರಾಗುತ್ತಾರೆ. ಆದ್ದರಿಂದ ಈ ವಿಚಾರವನ್ನು ಸಿಬಿಐ ತನಿಖೆ ನಡೆಸಿ ಸಚಿವ ಆಶ್ವತ್ಥನಾರಾಯಣ ವಿರುದ್ದ ಕ್ರಮ ಕೈಗೊಂಡು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here