ಸಡಗರ ಸಂಭ್ರಮದಿಂದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಹುಟ್ಟುಹಬ್ಬ ಆಚರಣೆ

0
619

ಶಿವಮೊಗ್ಗ/ಚಿಕ್ಕಮಗಳೂರು: ಸಡಗರ ಸಂಭ್ರಮದಿಂದ ಮಹಾತ್ಮ ಗಾಂಧೀಜಿಯವರ 153ನೇ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ 117ನೇ ಹುಟ್ಟುಹಬ್ಬವನ್ನು ಇಂದು ಸರಳ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ರಿಪ್ಪನ್‌ಪೇಟೆ ವರದಿ:

ಗ್ರಾಮ ಪಂಚಾಯತಿ, ನಾಡಕಛೇರಿ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಸರಕಾರಿ ಪದವಿ ಪೂರ್ವ ಕಾಲೇಜು, ಮೇರಿ ಮಾತಾ ಕಾಲೇಜು, ಸರಕಾರಿ ಪ್ರೌಢ ಶಾಲೆ, ಬಸವೇಶ್ವರ ಶಿಕ್ಷಣ ಸಂಸ್ಥೆ, ಗುಡ್ ಶೇಫರ್ಡ್ ಶಾಲೆ, ಸರಕಾರಿ ಪ್ರಾಥಮಿಕ ಶಾಲೆಗಳು ಸೇರಿದಂತೆ ವಿವಿಧಡೆ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಹೊಸನಗರ ವರದಿ:

ಗಾಂಧಿ ಜಯಂತಿ ಅಂಗವಾಗಿ ಹೊಸನಗರ ವರ್ತಕರ ಸಂಘದವರು ಹಾಗೂ ಶ್ರೀ ದುರ್ಗಾಂಬ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಯುವ ಶಕ್ತಿಗಳೊಂದಿಗೆ ಸಂಘಟಿತರಾಗಿ ಪಟ್ಟಣದ ಹಳೆ ಸಾಗರ ರಸ್ತೆಯಲ್ಲಿರುವ ಶ್ರೀ ದುರ್ಗಾಂಬಾ (ಶ್ರೀ ಮಾರಿಕಾಂಬ ಅಮ್ಮನವರ) ದೇವಸ್ಥಾನದ ಆವರಣ ಹಾಗೂ ದೇವಸ್ಥಾನದ ಒಳಭಾಗವನ್ನು ಸ್ವಚ್ಛಗೊಳಿಸುವ ಮೂಲಕ ಗಾಂಧೀಜಿಯವರ ಕನಸಾದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು.

ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಂಜಪ್ಪನವರ ನೇತೃತ್ವದಲ್ಲಿ ಕೆಇಬಿ ಕಛೇರಿಯ ಮುಂಭಾಗದಲ್ಲಿರುವ ಬಿಸಿಎಂ ಹಾಸ್ಟಲ್ ಆವರಣವನ್ನು ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳು ಹಾಗೂ ಅಡಿಗೆ ಸಿಬ್ಬಂದಿಯವರ ಸಹಾಯ ಹಸ್ತದಿಂದ ಇಂದು ಗಾಂಧಿ ಜಯಂತಿಯ ಪ್ರಯುಕ್ತ ಸ್ವಚ್ಛತಾ ಅಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಚ್ಛ ಗೊಳಿಸಿದರು.

ಕೋಡೂರು ವರದಿ:

ಇಲ್ಲಿನ ಗ್ರಾಪಂಯಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಗ್ರಾಪಂ ವ್ಯಾಪ್ತಿಯ ಬಸ್ ನಿಲ್ದಾಣಗಳನ್ನು ಸ್ವಚ್ಛಗೊಳಿಸಿ, ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ತ್ಯಾಜ್ಯ ವಸ್ತುಗಳನ್ನು ಕಸ ವಿಲೇವಾರಿ ವಾಹನಕ್ಕೆ ತುಂಬಿ ವಿಲೇವಾರಿ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಸುನಂದ, ಉಪಾಧ್ಯಕ್ಷ ಜಯಪ್ರಕಾಶ್, ಸದಸ್ಯರಾದ ಶೇಖರಪ್ಪ, ಮಂಜಪ್ಪ, ಉಮೇಶ್, ಪ್ರೀತಿ, ಅನ್ನಪೂರ್ಣ, ಸವಿತಾ, ಪಿಡಿಒ ಪ್ರವೀಣ್, ಸ್ವಸಹಾಯ ಸಂಘದ ಸದಸ್ಯರು, ಗ್ರಾಮಸ್ಥರು ಮತ್ತು ಗ್ರಾಪಂ ಸಿಬ್ಬಂದಿಗಳು ಹಾಜರಿದ್ದರು.

ಚಂದ್ರಗುತ್ತಿ ವರದಿ:

ಸೊರಬ ತಾಲೂಕಿನ ಚಂದ್ರಗುತ್ತಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ಹಿರಿಯ ಆರೋಗ್ಯ ಸುರಕ್ಷಾಧಿಕಾರಿಗಳಾದ ಮಲ್ಲಮ್ಮರವರು ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜೀವನ ಚರಿತ್ರೆ ಕುರಿತು ಮಾತನಾಡಿದರು. ಆರೋಗ್ಯ ಸಿಬ್ಬಂದಿ ವರ್ಗದ ವೀಣಾ ಪಿ, ಉಷಾ ಮಡಿವಾಳ, ವೀಣಾ ಈಶ್ವರ್ ನಾಯ್ಕ್, ಚೇತನಾ, ಬೇಬಿ, ಹೇಮಲತಾ ನಾಯ್ಕ್, ಚೇತನಾ ರಮೇಶ್, ಪ್ರವೀಣ್, ಸಿದ್ದರಾಜು ಇದ್ದರು.

ಚಿಕ್ಕಮಗಳೂರು ವರದಿ:

ಚಿಕ್ಕಮಗಳೂರು ತಾಲ್ಲೂಕಿನ ಖಾಂಡ್ಯ ಹೋಬಳಿಯ ಬಿದರೆ ಗ್ರಾಮದಲ್ಲಿ ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಕಾರ್ಯ ಮಾಡಿ ಕಸವನ್ನು ಪಂಚಾಯಿತಿಯ ಕಸ ವಿಲೇವಾರಿ ಘಟಕದ ವಾಹನಕ್ಕೆ ತುಂಬಿ ಕಸ ವಿಲೇವಾರಿ ಮಾಡಲಾಯಿತು.

ಶಾಲೆ, ಅಂಗನವಾಡಿ ಕೇಂದ್ರ, ರಸ್ತೆ, ಬಸ್ಟ್ಯಾಂಡ್ ನಲ್ಲಿ ಇದ್ದ ಕಸವನ್ನು ಬಿದರೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸೇರಿ ಕಸ ವಿಲೇವಾರಿ ಮಾಡಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಖಾಂಡ್ಯ ವಲಯದ ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ಚಂದ್ರಶೇಖರ್ ರೈ, ಸ್ವಯಂಸೇವಕರಾದ ರಘುಪತಿ ವಿ‌.ಸಿ ಬಿದರೆ, ಸಂಪತ್ ಮಾಗಲು ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಮಾಹಿತಿ ಕೈಪಿಡಿಯನ್ನು ಗ್ರಾಮ ಪಂಚಾಯಿತಿಗೆ ನೀಡಲಾಯಿತು.

ಜಾಹಿರಾತು

LEAVE A REPLY

Please enter your comment!
Please enter your name here