ಸದ್ಯದಲ್ಲಿಯೇ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೆರೆ-ಹೊರೆ ಗುಂಪು, ಪ್ರದೇಶ ಸಭಾ ಮತ್ತು ವಾರ್ಡ್ ಸದಸ್ಯರ ನೇಮಕ: ಬಾಲಚಂದ್ರಪ್ಪ

0
483

ಹೊಸನಗರ: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅತೀ ಶೀಘ್ರದಲ್ಲಿಯೇ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೆರೆ-ಹೊರೆ ಗುಂಪು ಪ್ರದೇಶಗಳ ಸಭಾ ಮತ್ತು ವಾರ್ಡ್ ಸದಸ್ಯರ ನೇಮಕ ಕಾರ್ಯ ನಡೆಯಲಿರುವುದು ಎಂದು ಹೊಸನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಟಿ. ಬಾಲಚಂದ್ರಪ್ಪನವರು ಹೇಳಿದರು.

ಹೊಸನಗರ ಪಟ್ಟಣ ಪಂಚಾಯಿತಿ ಆವರಣದಲ್ಲಿ ಕಛೇರಿಯಲ್ಲಿ ಮಾನ್ಯ ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ದಿ ಕೋಶ, ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ರವರ ಸರ್ಕಾರದ ಸುತ್ತೋಲೆಯನ್ವಯ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೆರೆ ಹೊರೆ ಗುಂಪು, ಪ್ರದೇಶ ಸಭಾ ಮತ್ತು ವಾರ್ಡ್ ಸಮಿತಿಗಳನ್ನು ರಚಿಸುವ ಸಂಬಂಧ ತರಬೇತಿ ಕಾರ್ಯಗಾರವನ್ನು ಆಯೋಜಿಸಲಾಗಿದ್ದು, ಈ ಸಭೆಯಲ್ಲಿ ಮಾತನಾಡಿದರು.

ಶಿವಮೊಗ್ಗ ಯೋಜನಾಧಿಕಾರಿಯಾದ ಶ್ರೀ ಮೋಹನ್ ಕುಮಾರ್ ಎಲ್ ರವರು ಆಗಮಿಸಿ ಸರ್ಕಾರದ ಆದೇಶದನ್ವಯ ವಾರ್ಡ್ ಸದಸ್ಯರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಲಿದೆ ಎಂದು ಮಾನ್ಯ ಸರ್ಕಾರದ ಅಧೀನ ಕಾರ್ಯದರ್ಶಿ, ನಗರಾಭಿವೃದ್ದಿ ಇಲಾಖೆ ಬೆಂಗಳೂರು ರವರಿಂದ ಬಂದ ಅಧಿಸೂಚನೆ ಪತ್ರ ಸಂಖ್ಯೆ:ಸಂವ್ಯಶಾಇ 9 ಶಾಸನ 2019, ಬೆಂಗಳೂರು ದಿನಾಂಕ: 19.10.2020 ರ ಅಧಿಸೂಚನೆಯ ಕುರಿತು ಸಂಕ್ಷಿಪ್ತವಾಗಿ ತರಬೇತಿಯನ್ನು ನೀಡಿದರು.

ಈ ಕಾರ್ಯಗಾರದಲ್ಲಿ ಪಟ್ಟಣ ಪಂಚಾಯಿತಿ ಇಂಜಿನಿಯರ್ ಗಣೆಶ್ ಪರಮೇಶ್ವರ ಹೆಗ್ಡೆ, ಬಸವರಾಜ್, ಸುಮೀತ್ರಾ ಜಿ.ಟಿ, ಗಿರೀಶ್, ಪರಶುರಾಮ್, ಆಸ್ಮಬಾನು, ನೇತ್ರಾವತಿ, ಲಕ್ಷ್ಮಣ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಮರಿಯಪ್ಪ, ಗುರುರಾಜ್, ಉಪಾಧ್ಯಕ್ಷೆ ಕೃಷ್ಣವೇಣಿ, ಸುರೇಂದ್ರ, ಗಾಯಿತ್ರಿ ನಾಗರಾಜ್, ನಾಗಪ್ಪ, ಸಿಂಥಿಯಾ, ಶಾಹಿನಾ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here