ಸಮಾಜದ ಅಂಕು-ಡೊಂಕು ತಿದ್ದಿದ ಮಹಾಸಂತ ಕನಕದಾಸರು

0
205

ಚಿಕ್ಕಮಗಳೂರು: ದಾಸ ಸಾಹಿತ್ಯ, ಕೀರ್ತನೆಗಳ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿದ ಮಹಾಸಂತ ಭಕ್ತ ಕನಕದಾಸರು, ಸರ್ವಕಾಲಕ್ಕೂ ಶ್ರೇಷ್ಟರು ಎಂದು ಚಿಂತಕ, ವಾಗ್ಮಿ ನಿಕೇತ್‌ರಾಜ್ ಮೌರ್ಯ ಅಭಿಪ್ರಾಯಿಸಿದರು.

ನಗರದ ಕನಕ ಭವನದ ಅವರಣದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಕುರುಬ ಸಮಾಜದಿಂದ 534 ನೇ ಕನಕ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ತಂಬೂರು, ಹಿಡಿದು ಕಂಬಳಿ ಹೊದ್ದು ಸಾಹಿತ್ಯ, ಕೀರ್ತನೆಗಳ ಮೂಲಕ ಜಾತ್ಯಾತೀತತೆ ನಿರ್ಮಾಣ ಮಾಡಲು ಮುಂದಾದ ಶ್ರೇಷ್ಟ ಸಂತರಲ್ಲಿ ಭಕ್ತ ಕನಕದಾಸರು ಅಗ್ರಗಣ್ಯರು. ರಾಮಧಾನ್ಯಚರಿತೆ, ಹರಿಭಕ್ತಿಸಾರ, ಮೋಹನ ತರಂಗಿಣಿ ಸೇರಿದಂತೆ ಅನೇಕ ಕೃತಿಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.

ಶ್ರೀಮಂತ ಕುಟುಂಬದಲ್ಲಿ ಹುಟ್ಟಿದರೂ ಸಮಾಜದ ಅವ್ಯವಸ್ಥೆಗಳನ್ನು ದೂರಮಾಡುವ ನಿಟ್ಟಿನಲ್ಲಿ ವೈರಾಗ್ಯವನ್ನು ತಳೆದು ದಾಸರಾದವರು. ವಿಜಯನಗರದ ಅರಸರ ಮೆಚ್ಚಿನ ಪಾಳೇಗಾರರಾಗಿದ್ದರು, ಗದ್ಯ ಸಾಹಿತ್ಯದ ಮೂಲಕ ದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು ಅಪಾರ ಆದರ್ಶಗಳು ಪರಿಪಾಲನೆಯಾಗಬೇಕು ಎಂದು ಕರೆ ನೀಡಿದರು.

ಕನ್ನಡ ವಾಗ್ಮಿ ಹಿರೇಮಗಳೂರು ಕಣ್ಣನ್ ಮಾತನಾಡಿ, ಜಾತೀಯತೆಯಲ್ಲಿ ಬದುಕುತ್ತಿದ್ದ ಅಂದಿನ ಸಮಾಜವನ್ನು ಕೀರ್ತನೆ, ಸಾಹಿತ್ಯದ ಮೂಲಕ ಬದಲಾವಣೆ ತರುವ ನಿಟ್ಟಿನಲ್ಲಿ ಶ್ರಮಿಸಿದವರು, ಮಹಿನೀಯರು ಚರಿತೆ, ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿ ಅನುಸರಿಸುವ ಕೆಲಸವಾಗಬೇಕು ಎಂದರು. ಕನಕದಾಸರು ಶ್ರೀಕೃಷ್ಣನನ್ನು ಭಕ್ತಿಯಿಂದ ಒಲಿಸಿಕೊಂಡ ರೀತಿ ನಿಜಕ್ಕೂ ಅನನ್ಯವಾದುದು ಜಾತ್ಯಾತೀತತೆಯನ್ನು ಪ್ರತಿಬಿಂಬಿಸಿದ ಮಹಾನ್ ದಾಸ ಶ್ರೇಷ್ಟ ಎಂದು ಕೊಂಡಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಎನ್. ಮಹೇಶ್ ಮಾತನಾಡಿ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಸಮಾಜ ನಿರ್ಮಾಣಕ್ಕೆ ಮುಂದಾದವರು, ಅವರು ಪ್ರತಿಪಾದಿಸಿದ ಜಾತ್ಯಾತೀತತೆ ಎಂಬುದು ಸಂವಿಧಾನದಲ್ಲಿನ ಪೀಠಿಕೆ ಇದ್ದಂತೆ ಎಂದು ಸ್ಮರಿಸಿದರು. ಜನಸಾಮಾನ್ಯರ ಕಷ್ಟಗಳನ್ನು ಅರಿತು, ತಮ್ಮ ಕೀರ್ತನೆ, ಸಾಹಿತ್ಯದ ಮೂಲಕ ತಿಳಿಸುವ ಕೆಲಸ ಮಾಡಿದವರು. ರಾಮಧಾನ್ಯ ಚರಿತೆ, ಹರಿಭಕ್ತಿ ಸಾರ, ಸೇರಿದಂತೆ ಅನೇಕ ಸಾಹಿತ್ಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

ಕುರುಬ ಸಂಘದ ರಾಜ್ಯ ಉಪಾಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ ಭಕ್ತಿಯಿಂದ ದೇವರನ್ನು ಒಲಿಸಿಕೊಳ್ಳುವುದು ಹೇಗೆ ಎಂಬುದನ್ನು ವಿಶ್ವಕ್ಕೆ ಪರಿಚಯಿಸಿಕೊಟ್ಟ ಮಹಾನ್ ಸಂತ ಕನಕದಾಸರು ಎಂದರು. ಕನಕದಾಸರ ಜಯಂತಿ ಕೇವಲ ದಿನಕ್ಕಷ್ಟೇ ಸೀಮಿತವಾಗಬಾರದು ಅವರ ಆದರ್ಶ, ಗುಣಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಕುರುಬ ಸಮಾಜವು ಸಾವಿರಾರು ವರ್ಷಗಳು ಇತಿಹಾಸ ಹೊಂದಿದೆ. ಸಮಾಜಸೇವೆ ಮೂಲಕ ಅನೇಕ ಗಣ್ಯರು ಪ್ರಾಣತ್ಯಾಗ ಮಾಡಿದ್ದಾರೆ ಅವರನ್ನು ಸ್ಮರಿಸುವ ಕೆಲಸವಾಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಎಂ ಮಂಜುನಾಥ್, ಕಾರ್ಯದರ್ಶಿ ಶಾಂತೇಗೌಡ, ಖಜಾಂಚಿ ಪುಟ್ಟೇಗೌಡ, ನಿದೇಶಕರಾದ ವಕೀಲಪುಟ್ಟೇಗೌಡ, ತಾಲ್ಲೂಕು ಅಧ್ಯಕ್ಷ ಚಂದ್ರೇಗೌಡ,

ಸಮಾಜದ ಮುಖಂಡರಾದ ಮುಖಂಡ ಮಂಜೇಗೌಡ, ಭದ್ರೇಗೌಡ, ಕೆ.ವಿ. ಮಂಜುನಾಥ್, ಪ್ರಹ್ಲಾದ್, ಚಂದ್ರಪ್ಪ, ಬೆಳವಾಡಿರವೀಂದ್ರ, ಈಶ್ವರಹಳ್ಳಿಮಹೇಶ್, ಪುಷ್ಪರಾಜ್‌ ಮೋಹನ್, ಮೂರ್ತಿ, ಸೋಮಶೇಖರ್, ಸುರೇಶ್, ಬಿ.ಹೆಚ್. ಹರೀಶ್ ಸೇರಿದಂತೆ ಮತ್ತಿತರರು ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here