ಸಮಾಜಮುಖಿ ಸಾರದ ಹೆಜ್ಜೆ ಒಂದು ಉತ್ತಮ ಮಾದರಿ: ಶ್ರೀ ಪ್ರಭು ನೀಲಕಂಠ ಮಹಾಸ್ವಾಮಿಗಳು

0
236

ಹೊಸನಗರ : ಸಾರ ಕೇಂದ್ರವು ಸುಸ್ಥಿರ ಗ್ರಾಮಾಭಿವೃದ್ದಿಯ ಆಶಯ ಹಾಗೂ ಕಲೆಯ ನೆಲೆಯಿಂದ ನೆಲದ ಜಾಗೃತಿ ಮೂಡಿಸುವ ಮೂಲಕ ಜಿಲ್ಲೆಯ ಗಮನ ಸೆಳೆಯುತ್ತಿದೆ. ಈ ನಿಟ್ಟಿನಲ್ಲಿ ನಾಡಿನ 40ಕ್ಕೂ ಹೆಚ್ಚು ಮಠಾಧೀಶರುಗಳು ಸಾರ ಕೇಂದ್ರಕ್ಕೆ ಭೇಟಿ ನೀಡಿ ಕೇಂದ್ರದ ಕಾರ್ಯ ಚಟುವಟಿಕೆ ವೀಕ್ಷಣೆ ಮಾಡಿ ಮಾಹಿತಿ ಪಡೆದು ಪ್ರಶಂಸೆ ವ್ಯಕ್ತಪಡಿಸಿದರು.

ಸಾರ ಸಂಸ್ಥೆ ಗೋಡೆಯ ಮೇಲೆ ಚಿತ್ತಾಕರ್ಷಕ ಚಿತ್ರಣಗೊಂಡಿರುವ ನಾಡಿನಾ ವಿವಿಧ ರಾಜ್ಯಗಳ ಬುಡಕಟ್ಟಿನ ಸಾಂಪ್ರದಾಯಿಕ ಚಿತ್ರಕಲೆಗಳು. ದೇಶದ ವಿವಿಧ ಹೆಸರಾಂತ ಚಿತ್ರ ಕಲಾವಿದರ ಭಿತ್ತಿ ಚಿತ್ರಗಳು ಹಾಗೂ ಸಾರ ಸಂಸ್ಥೆ ಹಾಗೂ ವಿವಿಧ ಸಂಸ್ಥೆಗಳ ಹಾಗೂ ಪರಿಸರಾಸಕ್ತರ ಜೊತೆಗೂಡಿ ಜಿಲ್ಲಾದ್ಯಂತ ನಡೆಸಿದ ಪರಿಸರ ಜಾಗೃತಿ ಜಾಥಾ, ನಾಡಿನ ನೆಲ, ಜಲ, ಪರಿಸರ ಹಾಗೂ ಜೀವವೈವಿಧ್ಯ ಕಾರ್ಯಗಾರ, ಸಾವಯವ ಕೃಷಿ ವಿಚಾರಗೋಷ್ಠಿ, ತಜ್ಞರಿಂದ ರೈತರಿಗೆ ಕೃಷಿ ಮಾಹಿತಿ, ಸ್ಥಳೀಯ ರೈತರಿಗೆ ಬಿದಿರು ಬೆಳೆ ಕುರಿತು ರಾಜ್ಯದ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಕಾರ್ಯಗಾರ ಹಾಗೂ ರೈತರಿಗೆ 12 ಸಾವಿರ ಉಚಿತ ಸಸಿಗಳ ವಿತರಣೆ, ನೂರಕ್ಕೂ ಹೆಚ್ಚು ಭತ್ತದ ಬೀಜ ಸಂಗ್ರಹಣೆ, ಅಲ್ಲದೆ ಸಾಮುದಾಯಿಕ ಪಾಲ್ಗೊಳ್ಳುವಿಕೆ ಇಂದ ಸುಸ್ಥಿರ ಗ್ರಾಮ ನಿರ್ಮಾಣದ ಪರಿಕಲ್ಪನೆಯ ಸ್ವಗ್ರಾಮ ಯೋಜನೆ ಅಡಿಯಲ್ಲಿ ನಡೆದ ಜಲಭದ್ರತೆ, ಕೆರೆ, ಅರಣ್ಯ, ಕಲೆ, ಆರೋಗ್ಯ, ಶಿಕ್ಷಣ, ಇನ್ನಿತರ ಕಾಮಗಾರಿಯನ್ನು ಮುಕ್ತ ಕಂಠದಿಂದ ಮೆಚ್ಚುಗೆ ವ್ಯಕ್ತಪಡಿಸಿ, ಇದೊಂದು ಸಮುದಾಯದ ಸಹಭಾಗಿತ್ವದಲ್ಲಿ ಸುಸ್ಥಿರ ಗ್ರಾಮ ಅಭಿವೃದ್ದಿಗೆ ಮಾದರಿ ಕಾರ್ಯ ಎಂದ ಅವರು ಇತ್ತೀಚೆಗೆ ಎಲ್ಲವೂ ಕಲುಷಿತ ಹಾಗೂ ನಾಶ ಆಗುತ್ತಿರುವ ಈ ಸಂದರ್ಭದಲ್ಲಿ ನಾಡಿನ ನೆಲ ಜಲ ಪರಿಸರ ರಕ್ಷಣೆ ಕಾರ್ಯ ಪ್ರತಿಯೊಬ್ಬ ಭಕ್ತರ ಹಾಗೂ ನಾಗರಿಕರ ಆದ್ಯ ಕರ್ತವ್ಯವಾಗಬೇಕು ಅದು ನಿಜಕ್ಕೂ ದೇವರು ಮೆಚ್ಚುವ ಕೆಲಸ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅವರೊಂದಿಗೆ ನಾಡಿನ ಡಾ. ಅಭಿನವ ಕುಮಾರ ಶ್ರೀಗಳು, ಓಲೇಮಠ, ಜಮಖಂಡಿ. ಶಿವಯೋಗಿ ಸ್ವಾಮೀಜಿ, ಕಾರಂಜಿ ಮಠ, ಬೆಳಗಾವಿ, ವಿವೇಕಾನಂದ ಸ್ವಾಮೀಜಿ, ಹಿರೇಮಠ ಗುಣದಳ ತಾ. ವಿಜಯಪುರ ಜಿಲ್ಲೆ, ಸಿದ್ದಬಸವ ಸ್ವಾಮೀಜಿ ಹಳೇಕೋಟೆ, ವಿಜಯ ಮಹಾಂತ ಸ್ವಾಮೀಜಿ ಚನ್ನಮ್ಮನ ಕಿತ್ತೂರು, ಅಭಿನವ ಚನ್ನಬಸವ ಮಹಾಸ್ವಾಮಿಗಳು ಹಿರೇಮಲಕೆರೆ, ಪ್ರಭು ಕುಮಾರ ಶಿವಾಚಾರ್ಯಸ್ವಾಮಿಗಳು ಬೇಲೂರು, ಗುರುದೇವ ಸ್ವಾಮಿಗಳು, ಪ್ರಭಾಲಿಂಗೇಶ್ವರ ಮಠ ಬೆಳಗಾವಿ, ಸದಾಶಿವ ಸ್ವಾಮಿಗಳು ಹಾವೇರಿ, ಗುರು ಬಸವಲಿಂಗ ಸ್ವಾಮಿಗಳು, ದುರದುಂಡಿಶ್ವರ ಮಠ ಕಡೋಲಿ, ಅಭಿನವ ರಾಚೂಡೇಶ್ವರ ಶಿವಾಚಾರ್ಯ ಸ್ವಾಮಿಗಳು, ಅಭಿನವ ಪ್ರಭಾಲಿಂಗ ಮಹಾಸ್ವಾಮಿಗಳು ವಿರಕ್ತಮಠ ಅದರಬೇಡ, ಸಿದ್ದಲಿಂಗ ಸ್ವಾಮಿಗಳು ಯಡ್ರಾಮಿ, ಶಂಭುಲಿಂಗ ಸ್ವಾಮಿಗಳು ಕಲ್ಲೂರು, ನೀಲಕಂಠ ಶಿವಚಾರ್ಯ ಮಹಾಸ್ವಾಮಿಗಳು ಚೌಕಿ ಮಠ, ಹಾರನಹಳ್ಳಿ, ಚನ್ನಬಸವ ಮಹಾ ಸ್ವಾಮಿಗಳು ವಿರಕ್ತಮಠ ಹಿರೇಮಲ್ಲನಕೆರೆ, ಅಲ್ಲಮ ಪ್ರಭು ಮಹಾಸ್ವಾಮಿಗಳು, ರುದ್ರಾಕ್ಷಿಮಠ, ನಾಗನೂರು, ಬೆಳಗಾವಿ, ಶಿವಬಸವ ಮಹಾಸ್ವಾಮಿಗಳು, ವಿರಕ್ತಮಠ, ಅಕ್ಕಿ ಆಲೂರು, ಪಂಚಮ ಸಿದ್ದಲಿಂಗ ಮಹಾಸ್ವಾಮೀಗಳು ಪಶ್ಚಿಮಾದ್ರಿ ವಿರಕ್ತಮಠ ನೇರಡ ಗುಂಭ ತೆಲಂಗಾಣ, ಪ್ರಭು ರಾಜ ಮಹಾ ಸ್ವಾಮಿಗಳು ಸೊಲ್ಲಾಪುರ, ಪ್ರಭು ಮಹಾಸ್ವಾಮಿಗಳು ಗುತ್ತಲ ಗುರುದೇವರು, ಅನ್ನವ್ರೆನೇಶ್ವರ ದೇವರು, ವಿವೇಕಾನಂದ ದೇವರು ಗುಣವಾಳ, ಆನಂದ ದೇವರು ಹುಣಶಾಳ, ಶಿವಪ್ರಸಾದ ದೇವರು ಉಟಗಿ, ಚಂದ್ರಶೇಖರ ದೇವರು ದೋಟಿಹಾಳ, ಬಸವರಾಜ ದೇವರು ಹುಣಸೀಕಟ್ಟೆ, ಶಿವಬಸವ ದೇವರು ಧಾರವಾಡ, ವಿರೂಪಾಕ್ಷ ದೇವರು ಆಂಧ್ರಪ್ರದೇಶ, ವೀರಬಸವ ದೇವರು ಆಸಂಗಿ, ಶಿವಪ್ರಸಾದ ದೇವರು ಯರನಾಳ, ಮುರುಗೇಂದ್ರ ದೇವರು ವಿಜಯಪುರ, ವಿಜಯ ಮಹಾತ ದೇವರು ಕಿತ್ತೂರು, ವಿರೂಪಾಕ್ಷ ದೇವರು ಘಟಪ್ರಭ, ಶಶಿಕುಮಾರ್ ದೇವರು ಘಟಪ್ರಭ, ಮಲ್ಲಿಕಾರ್ಜುನ ದೇವರು ಟೆಂಕಿನ ಮಠ ಬಾಗಲಕೋಟೆ, ವೀರಭಸವ ದೇವರು ಆಸಂಗಿ, ಶಿವಬಸವ ದೇವರು ಉಪ್ಪಿನಬೆಟಗೇರಿ, ರೇಣುಕಾಚಾರ್ಯ ದೇವರು ಬೆಳ್ಳುಬ್ಬಿ ತೊನಿಶ್ಯಾಳ, ಮಹಾಂತ ದೇವರು ಶೇಗುಣಸಿ, ಮಲ್ಲಿಕಾರ್ಜುನ ದೇವರು ಕಿತ್ತೂರು ಮುಂತಾದ ನಾಡಿನ ವಿವಿಧ ಕ್ಷೇತ್ರಗಳ 44 ಮಠಾಧೀಶರು ಹಾಜರಿದ್ದರು.

ಇವರೊಂದಿಗೆ ಯೇಸು ಪ್ರಕಾಶ್, ಸಂಚಾಲಕರು ಸ್ವ ಗ್ರಾಮ ಯೋಜನೆ ಹಾಗೂ ಸಾರ ಕೇಂದ್ರದ ಕುಮಾರ್, ಧನುಷ್, ಶಿವಕುಮಾರ್ ಮತ್ತಿತರರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here