ಸರಳ, ಸಾಂಪ್ರದಾಯಿಕವಾಗಿ ನಡೆದ ಮಾರಿಕಾಂಬಾ ಜಾತ್ರೆ

0
369

ಶಿಕಾರಿಪುರ : ತಾಲ್ಲೂಕಿನಲ್ಲಿ ಸರ್ಕಾರದ ನೀತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸರಳ ಹಾಗೂ ಸಾಂಪ್ರದಾಯಿಕವಾಗಿ ನಾಡಿನ ಶಕ್ತಿ ದೇವತೆಯಾದ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ನಡೆಸಲಾಯಿತು.

ನಾಡಿನಲ್ಲಿ ದುಷ್ಟ ಶಕ್ತಿಗಳನ್ನು ಸದೆಬಡಿಯಲು ಶ್ರೀ ದೇವಿಯು ವಿವಿಧ ರೀತಿಯ ರೂಪತಾಳುವ ಇತಿಹಾಸ ಪ್ರಸಿದ್ಧವಾದ ಹಿನ್ನೆಲೆಗಳಿವೆ. ಅದೇ ರೀತಿ ಶಿಕಾರಿಪುರ ತಾಲ್ಲೂಕಿನ ಗ್ರಾಮದೇವತೆ ಶಕ್ತಿದೇವತೆ ಹಾಗೂ ಅನೇಕರಿಗೆ ಆರಾಧ್ಯ ದೇವತೆಯಾದ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವವು ಸರ್ಕಾರದ ನೀತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲಾಗಿದೆ.

ಪೂರ್ವಿಕರ ಕಾಲದಿಂದಲೂ ಪ್ರತಿ ಮೂರು ವರ್ಷಗಳಿಗೊಮ್ಮೆ ವಿಜೃಂಭಣೆಯಿಂದ ನಡೆದುಕೊಂಡು ಬಂದಿರುವ ಶ್ರೀ ಮಾರಿಕಾಂಬಾ ಜಾತ್ರೆಯು ಈ ಬಾರಿ ಕೊರೋನದಂತಹ ಸಂಕಷ್ಟದ ಸಮಯದಲ್ಲಿಯೂ ಯಾವುದೇ ರೀತಿಯ ಆಟಿಕೆ ಅಂಗಡಿ, ಸಿಹಿ ತಿನಿಸುಗಳ ಅಂಗಡಿಗಳಿಗೆ ಅವಕಾಶವನ್ನು ಕೊಡದೆ, ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಕೇವಲ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲಾಯಿತು

ಶ್ರೀ ಮಾರಿಕಾಂಬಾ ದೇವಿಗೆ ಜಿಲ್ಲೆಯ ಸಂಸದ ಬಿ.ವೈ. ರಾಘವೇಂದ್ರರವರು ತಮ್ಮ ಕುಟುಂಬದವರೊಂದಿಗೆ ಆಗಮಿಸಿ ಅಮ್ಮನವರಿಗೆ ಉಡಿತುಂಬುವ ಮೂಲಕ ಸರಳ ಹಾಗೂ ಸಾಂಪ್ರದಾಯಿಕವಾಗಿ ಪೂಜಾ ವಿಧಿ ವಿಧಾನಗಳಿಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ನಾಡಿನ ಶಕ್ತಿ ದೇವತೆಯಾದ ಶ್ರೀ ಮಾರಿಕಾಂಬಾ ದೇವಿಗೆ ಉಡಿ ತುಂಬುವ ಮತ್ತು ದರ್ಶನಕ್ಕೆ ಬರುವ ಭಕ್ತರಿಗೆ ತಾಲ್ಲೂಕು ಆಡಳಿತ ಹಾಗೂ ಪೋಲೀಸ್ ಇಲಾಖೆ ದರ್ಶನ ಭಾಗ್ಯವನ್ನು ಕಲ್ಪಿಸಬೇಕು. ಅದೇರೀತಿ ಉಡಿತುಂಬಲು ದರ್ಶನಕ್ಕೆ ಬರುವಂತಹಾ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸುವುದರ ಜೊತೆಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಸರ್ಕಾರದ ನೀತಿ ನಿಯಮಗಳನ್ನು ಪಾಲಿಸಬೇಕು ಎಂದರು.

ಪ್ರತಿ ಮೂರು ವರ್ಷಗಳಿಗೊಮ್ಮೆ ವಿಜೃಂಭಣೆಯಿಂದ ನಡೆದುಕೊಂಡು ಬಂದಿರುವ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಈ ಬಾರಿ ಕೊರೋನ ಸಂಕಷ್ಟದ ಸಂದರ್ಭದಲ್ಲಿಯೂ ಕೂಡ ಸರಳ ಮತ್ತು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದೆ. ತಾಯಿ ಶ್ರೀ ಮಾರಿಕಾಂಬಾ ದೇವಿಯ ಅನುಗ್ರಹದಿಂದ ಕೊರೋನದಂತಹ ಮಹಾಮಾರಿ ದೂರವಾಗಿ ನಾಡಿನಾದ್ಯಂತ ಉತ್ತಮ ಮಳೆ ಬೆಳೆಗಳು ಬಂದು ದೇಶ ಸುಭೀಕ್ಷೆಯಾಗಿರಲಿ ಎಂದು ಎಲ್ಲರೂ ತಾಯಿಯಲ್ಲಿ ಪ್ರಾರ್ಥನೆ ಸಲ್ಲಿಸೋಣ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಂಎಡಿಬಿ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ, ಜಾತ್ರಾ ಮಹೋತ್ಸವದ ಅಧ್ಯಕ್ಷ ಹಾಗೂ ಪುರಸಭಾ ಸದಸ್ಯರಾದ ಹುಲ್ಮಾರ್ ಮಹೇಶ್, ಗೋಣಿ ಪ್ರಕಾಶ್, ಪ್ರಶಾಂತ್, ರಮೇಶ್ (ಗುಂಡ), ಪ್ರಮುಖರಾದ ಕೆ ಹಾಲಪ್ಪ, ಸುಕೇಂದ್ರಪ್ಪ, ಪಚ್ಚಿಗಿಡ್ಡಪ್ಪ ಬೆಣ್ಣೆ ಪ್ರವೀಣ್, ತೇಜಸ್ವಿನಿ ರಾಘವೇಂದ್ರ, ಚಂದ್ರಪ್ಪ, ಶ್ರೀಧರ್ ನಾಡಿಗೆರ್, ಸೇರಿದಂತೆ ಅನೇಕರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here