ಸರಸ್ವತಮ್ಮಗೆ ಅಂಬೇಡ್ಕರ್ ಪ್ರಶಸ್ತಿ

0
175

ಚಿಕ್ಕಮಗಳೂರು: ನಗರದಲ್ಲಿ ವಾಸವಾಗಿದ್ದ ಆರ್.ಎಸ್. ಸರಸ್ವತಮ್ಮ ಅವರಿಗೆ ರಾಜ್ಯಸರ್ಕಾರ ಅಂಬೇಡ್ಕರ್ ಪ್ರಶಸ್ತಿ ಘೋಷಿಸಿದೆ.

ಹಾಸನ ಜಿಲ್ಲೆಯ ರುದ್ರಪಟ್ಟಣ ಗ್ರಾಮದ ಕಡು ಬಡತನದಲ್ಲಿ ಜನಿಸಿದ ಸರಸ್ವತಮ್ಮ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿವರೆಗೆ ವಿದ್ಯಾಭ್ಯಾಸ ಮುಗಿಸಿ ಬಳಿಕ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಮುನ್ಸಿಪಲ್ ಹೈಸ್ಕೂಲಿನಲ್ಲಿ ಚಿಕ್ಕಪ್ಪನ ಮನೆಯಲ್ಲಿದ್ದುಕೊಂಡು ವಿದ್ಯಾಭ್ಯಾಸ ಮುಗಿಸಿದರು.

ಚಿಕ್ಕಮಗಳೂರಿನ ವಿದ್ಯಾರ್ಥಿನಿ ನಿಲಯದ ಮೇಲ್ವಿಚಾರಕಿಯಾಗಿ ನೇಮಕವಾದರು. ಮಾಜಿ ಸಚಿವೆ ಮೋಟಮ್ಮ 1961ರಲ್ಲಿ 5ನೇ ತರಗತಿಗೆ ಹಾಸ್ಟೆಲ್‍ಗೆ ಸೇರಿಕೊಂಡಿದ್ದರು. ಹಾಸ್ಟೆಲ್ ವಾರ್ಡನ್ ಕೆಲಸದಿಂದ ಸಮಾಜಕಲ್ಯಾಣ ಇಲಾಖೆ ಕಚೇರಿಗೆ ವರ್ಗಾವಣೆಯಾಯಿತು. 2000ನೇ ಮಾರ್ಚ್ 31 ರಂದು ನಿವೃತ್ತಿಗೊಂಡರು.

ತರೀಕೆರೆ ತಾಲೂಕು ರಂಗೇನಹಳ್ಳಿಯ ಪೋಷಕರಿಲ್ಲದ ಇಬ್ಬರು ಹೆಣ್ಣುಮಕ್ಕಳನ್ನು ಮನೆಯಲ್ಲಿಟ್ಟುಕೊಂಡು ಬಿಇಡಿವರೆಗೆ ವಿದ್ಯಾಭ್ಯಾಸಕೊಡಿಸಿದ್ದಾರೆ. ಇವರಿಗೆ ಮದುವೆಯನ್ನು ಮಾಡಿಸಿದ್ದಾರೆ. ಈಗ ಅವರುಗಳು ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಂತಹ ಹತ್ತು ಹಲವು ಸೇವಾಕಾರ್ಯಗಳನ್ನು ಸದ್ದಿಲ್ಲದೆ ನಿರ್ವಹಿಸಿರುವ ಇವರನ್ನು ಸಮಾಜ ಕಲ್ಯಾಣ ಇಲಾಖೆ ಗುರುತಿಸಿ ಗುರುವಾರ ವಿಧಾನಸೌಧದ ಬ್ಯಾಂಕೆಟ್‍ಹಾಲ್‍ನಲ್ಲಿ ನಡೆಯುವ ಅಂಬೇಡ್ಕರ್ ದಿನಾಚರಣೆಯಲ್ಲಿ ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸಲಿದೆ.

ಜಾಹಿರಾತು

LEAVE A REPLY

Please enter your comment!
Please enter your name here