ಸರ್ಕಾರದ ಯೋಜನೆಗಳನ್ನು ತಲುಪಿಸಲು ಸಹಕಾರ, ಹೊಂದಾಣಿಕೆ ಅತ್ಯಗತ್ಯ ; ಸಿ.ಆರ್.ಪಿ ಚಿರಂಜೀವಿ ಎಲ್

0
566

ರಿಪ್ಪನ್‌ಪೇಟೆ: ಸರ್ಕಾರದ ಯೋಜನೆಗಳನ್ನು ತಲುಪಿಸಲು ಸಹಕಾರ, ಹೊಂದಾಣಿಕೆ ಅತ್ಯಗತ್ಯವೆಂದು ಕೋಡೂರು ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ ಚಿರಂಜೀವಿ ಎಲ್. ಹೇಳಿದರು.

ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಡೂರಿನಲ್ಲಿ ನಡೆದ ಬೀಳ್ಕೊಡುಗೆ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳನ್ನು ಹಾಗೂ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಅಧಿಕಾರಿಗಳ ಹಾಗೂ ನೌಕರರ ಹೊಂದಾಣಿಕೆ ಮತ್ತು ಸಹಕಾರ ಅವಶ್ಯಕವಾಗಿ ಬೇಕಾಗುತ್ತದೆ. ಮೇಲ್ವರ್ಗದಲ್ಲಿ ಜಾರಿಯಾದ ಯೋಜನೆಯನ್ನು ಕೆಳಹಂತದ ವರ್ಗದವರಿಗೆ ತಲುಪಿಸಲು ನೌಕರರ ಕಾರ್ಯ ಶ್ಲಾಘನೀವಾದದ್ದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ನಾಗರಾಜಪ್ಪ ಬಿ., ಎಲ್ಲರೊಳಗೆ ಒಂದಾದಾಗ ಮಾತ್ರ ಕಾರ್ಯಗಳನ್ನು ಪೂರ್ಣಗೊಳಿಸಲು ಸಾಧ್ಯ ಎನ್ನುವ ವಿಷಯವನ್ನು ವ್ಯಕ್ತಪಡಿಸಿದರು.

ಕ್ಲಸ್ಟರ್ ನ ಎಲ್ಲಾ ಶಿಕ್ಷಕರು ಭಾಗವಹಿಸಿದ್ದರು ಕಾರ್ಯಕ್ರಮದಲ್ಲಿ, ಅಧ್ಯಕ್ಷತೆಯನ್ನು ಕೋಡೂರು ಶಾಲೆಯ ಮುಖ್ಯ ಶಿಕ್ಷಕರಾದ ತೀರ್ಥಪ್ಪ ರವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ನೌಕರರ ಸಂಘದ ಗೌರವಾಧ್ಯಕ್ಷರಾದ ಜಗದೀಶ್ ಕಾಗಿನೆಲೆ ಹಾಗೂ ಕೋಡೂರು ಪ್ರೌಢ ಶಾಲೆ ಮುಖ್ಯ ಶಿಕ್ಷಕರಾದ ಚೇತನ ಭಾಗವಹಿಸಿದ್ದರು.

ಲೀಲಾವತಿ ಶಿಕ್ಷಕರು ಕಾಗೆಮರಡು ನಿರೂಪಿಸಿದರು. ಬುಲ್ಡೋಜರ್ ಗುಡ್ಡ ಶಾಲೆಯ ಶಿಕ್ಷಕ ಸಂತೋಷ್ ಎಚ್ ಸ್ವಾಗತಿಸಿದರು. ಗೌಡಕೊಪ್ಪ ಶಾಲೆಯ ಶಿಕ್ಷಕಿ ಅಂಬಿಕಾ ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here