ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ನಿರ್ಲಕ್ಷ್ಯ ರೋಗಿಯ ಖಾಸಗಿ ಅಂಗಕ್ಕೆ ಗಾಯ !!

0
1136

ಮೂಡಿಗೆರೆ: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹರ್ನಿಯಾ ಆಪರೇಷನ್ ವೇಳೆ ಸಿಬ್ಬಂದಿ ನಿರ್ಲಕ್ಷ್ಯದಿಂದ ರೋಗಿಯ ಖಾಸಗಿ ಅಂಗಕ್ಕೆ ಗಾಯ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಪ್ರಕರಣ ಗಂಭೀರ ಸ್ವರೂಪ ತಳೆದಿದೆ.

ಈ ಬಗ್ಗೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾದ ವ್ಯಕ್ತಿ ದೂರು ದಾಖಲಿಸಿದ್ದು, ಕಳೆದ ಸೋಮವಾರ ಮೂಡಿಗೆರೆ ಆಸ್ಪತ್ರೆಗೆ ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದ ಯೋಗೇಂದ್ರ ಎಂಬ ವ್ಯಕ್ತಿ ದಾಖಲಾಗಿದ್ದು ಮಂಗಳವಾರ ಆಪರೇಷನ್ ಮಾಡಲಾಗಿದೆ. ಈ ವೇಳೆ ತನ್ನ ಖಾಸಗಿ ಅಂಗಕ್ಕೆ ಗಾಯಗಳಾಗಿದ್ದು, ಇದಕ್ಕೆ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ರೋಗಿ ದೂರಿದ್ದಾರೆ.

ಈ ಕುರಿತು ಆಸ್ಪತ್ರೆ ಮುಖ್ಯಾಧಿಕಾರಿಗಳಿಗೆ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದೂ ಅವರು ಆರೋಪಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here