ಸರ್ಕಾರಿ ಕಛೇರಿಗಳಲ್ಲಿ ಡಾ|| ಶಿವಕುಮಾರ ಶ್ರೀಗಳ ಭಾವಚಿತ್ರ ಇಡುವಂತೆ ಆಗ್ರಹ

0
309

ರಿಪ್ಪನ್‌ಪೇಟೆ: ನಡೆದಾಡುವ ದೇವರು ತ್ರಿವಿಧ ದಾಸೋಹಿ ಡಾ|| ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರವನ್ನು ಸರ್ಕಾರಿ ಕಛೇರಿಗಳಲ್ಲಿ ಇಡುವುದು ಮತ್ತು ಸ್ವಾಮೀಜಿಗೆ ಮುಂಬರುವ ದಿನಗಳಲ್ಲಿ ಭಾರತ ರತ್ನ ಪ್ರಶಸ್ತಿ ನೀಡುವಂತೆ ಸರ್ವರೂ ಒಕ್ಕೊರಲಿನಿಂದ ಆಗ್ರಹಿಸಿದರು.

ರಿಪ್ಪನ್‌ಪೇಟೆಯ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಆಯೋಜಿಸಲಾಗಿದ್ದ ತ್ರಿವಿಧ ದಾಸೋಹಿ ಶತಾಯುಷಿ ಕಾಯಕ ಯೋಗಿ ಲಿಂಗೈಕ್ಯ ಡಾ|| ಶಿವಕುಮಾರ ಮಹಾಸ್ವಾಮೀಜಿ ಅವರ 115ನೇ ವರ್ಷದ ಜನ್ಮದಿನಾಚರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತರಾಧ್ಯ ಶಿವಚಾರ್ಯ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿ, ಹೆಸರು ವ್ಯಕ್ತಿತ್ವದೊಂದಿಗೆ ಮಲೆನಾಡಿನ ವ್ಯಾಪ್ತಿಯಲ್ಲದೆ ದೇಶವ್ಯಾಪಿ ಚಾಪು ಮೂಡಿಸಿದ ಮಹಾನ್ ಸಂತ ಶಿವಕುಮಾರ ಸ್ವಾಮೀಜಿ ಅದಮ್ಯ ಚೇತನರಾಗಿದ್ದರು ಅವರ ಆದರ್ಶಗಳು ಇಂದಿನ ಭಕ್ತ ಸಮೂಹ ಬದುಕಿನಲ್ಲಿ ಅಳವಡಿಸಿಕೊಂಡು ಜ್ಞಾನಾರ್ಜನೆಯೊಂದಿಗೆ ಸಮಾಜದ ಸರ್ವ ಶ್ರೇಷ್ಠ ಸಮಾಜ ಸಂತರಾಗಿದ್ದರು ಎಂದರು.

ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ.ಉಪಾಧ್ಯಕ್ಷೆ ಮಹಾಲಕ್ಷ್ಮಿ ವಹಿಸಿದ್ದರು.

ಈ ಸಭೆಯಲ್ಲಿ ಗ್ರಾ.ಪಂ.ಅಧ್ಯಕ್ಷೆ ಮಂಜುಳಾ, ಗ್ರಾಮದ ಹಿರಿಯರಾದ ಬೆಳಕೋಡು ಹಾಲಸ್ವಾಮಿಗೌಡ್ರು, ಟಿ.ಆರ್.ಕೃಷ್ಣಪ್ಪ, ಎಂ.ಡಿ.ಇಂದ್ರಮ್ಮ, ಆರ್.ಎನ್.ಮಂಜುನಾಥ, ಹೆಚ್.ವಿ.ಈಶ್ವರಪ್ಪಗೌಡ ಹಾರೋಹಿತ್ಲು, ಕಗ್ಗಲಿ ಲಿಂಗಪ್ಪ, ಬೆಳ್ಳೂರು ತಿಮ್ಮಪ್ಪ, ಜೆ.ಜಿ.ಸದಾನಂದ, ಆರ್ಯಮಿತ್ರ ಇನ್ನಿತರರು ಹಾಜರಿದ್ದು ಮಾತಾನಾಡಿದರು.

ಇದೆ ಸಂದರ್ಭದಲ್ಲಿ ಸಮಾಜ ಸೇವಕ ಹೆಚ್.ಎಲ್.ಚಂದ್ರಶೇಖರ್ (ಮಂಜಣ್ಣ) ಮತ್ತು ರಾಷ್ಟ್ರ ಮಟ್ಟದ ಯೋಗಪಟು ಕು|| ಕೆ.ಎನ್.ಕಾವ್ಯ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾವ್ಯಳಿಂದ ಯೋಗ ಪ್ರದರ್ಶನ ನಡೆಯಿತು.

ಪ್ರಣತಿ ಅಣ್ಣಪ್ಪ ಪ್ರಾರ್ಥಿಸಿದರು. ಸೋಮಶೇಖರ್ ದೂನ ಸ್ವಾಗತಿಸಿದರು. ಆರ್ಯಮಿತ್ರ ಪ್ರಾಸ್ತವಿನವಾಗಿ ಮಾತಾನಾಡಿದರು. ಕಗ್ಗಲಿ ಶಿವಪ್ರಕಾಶ್ ನಿರೂಪಿಸಿದರು. ರಿ.ರಾ.ಸೋಮಶೇಖರ್ ವಂದಿಸಿದರು. ನಂತರ ಸಾಮೂಹಿಕ ಅನ್ನ ಸಂತರ್ಪಣೆ ಜರುಗಿತು.

ಜಾಹಿರಾತು

LEAVE A REPLY

Please enter your comment!
Please enter your name here