ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನೆಟ್ಟಿರುವ ಅಡಿಕೆ ಗಿಡಗಳ ತೆರವಿಗೆ ತಹಶೀಲ್ದಾರ್‌ಗೆ ಮನವಿ

0
1031

ಹೊಸನಗರ: ತಾಲ್ಲೂಕಿನ ಟೆಂಕಬೈಲ್ ಸರ್ವೆನಂಬರ್ 9 ರಲ್ಲಿ ಅಕ್ರಮವಾಗಿ ಸರ್ಕಾರಿ ಜಾಗಕ್ಕೆ ಅಡಿಕೆ ಸಸಿಗಳನ್ನು ನೆಟ್ಟಿದ್ದು ಅದನ್ನು ಕಿತ್ತು ಹಾಕಲು ಕಲ್ಲು ಗಣಿಗಾರಿಕೆಗೆ ಅರ್ಜಿ ಸಲ್ಲಿಸಿದ ಕುಮಾರರವರು ತಹಶೀಲ್ದಾರ್‌ರವರಿಗೆ ಮನವಿ ಸಲ್ಲಿಸಿದ್ದು ತಕ್ಷಣ ನೆಟ್ಟಿರುವ ಅಡಿಕೆ ಸಸಿಗಳನ್ನು ತೆಗೆಸಬೇಕೆಂದು ತಹಶೀಲ್ದಾರ್‌ರವರನ್ನು ಒತ್ತಾಯಿಸಿದ್ದಾರೆ.

ಅವರು ತಹಶೀಲ್ದಾರ್‌ರವರಿಗೆ ಅರ್ಜಿ ಸಲ್ಲಿಸಿ ಮಾತನಾಡಿ, ತಾಲ್ಲೂಕಿನ ಕಸಬಾ ಹೋಬಳಿ ಟೆಂಕಬೈಲ್ ಸರ್ವೆನಂಬರ್ 9ರಲ್ಲಿ ಕಲ್ಲುಗಣಿಗಾರಿಕೆ ಗುತ್ತಿಗೆ ಪಡೆಯಲು 2014ರಲ್ಲಿ ಅರ್ಜಿ ಸಲ್ಲಿಸಿದ್ದು ಹಾಗೂ 2018ರಲ್ಲಿ ಕೋರ್ಟ್ ಆದೇಶದಂತೆ ಸರ್ವೆ ಕಾರ್ಯ ಮುಗಿದಿದ್ದು 2022ರಲ್ಲಿ ಸ್ತಳ ಪರಿಶೀಲನಾ ವರದಿಯನ್ನು ಹೊಸನಗರ ತಾಲ್ಲೂಕು ಕಛೇರಿಯಿಂದ ಸಾಗರ ಉಪ ವಿಭಾಗಾಧಿಕಾರಿಗಳಿಗೆ ಮಂಜೂರಾತಿಗಾಗಿ ಕಳುಹಿಸಲಾಗಿದೆ.

ಆದರೆ ಇದೇ ಸರ್ವೇನಂಬರಿನ ಜಾಗದಲ್ಲಿ ಅನಾಮಧೇಯ ವ್ಯಕ್ತಿಗಳು ಜೂ. 08 ರಾತ್ರಿ ಸುಮಾರು 25 ಅಡಿಕೆ ಗಿಡಗಳನ್ನು ನೆಟ್ಟಿದ್ದಾರೆ. ಅಡಿಕೆ ಗಿಡಗಳನ್ನು ತಕ್ಷಣ ಕಿತ್ತು ಹಾಕಬೇಕು ಹಾಗೂ ಉಪ ವಿಭಾಗಾಧಿಕಾರಿಗಳಿಂದ ಕಲ್ಲು ಗಣಿಗಾರಿಕೆಗೆ ಮಂಜೂರಾತಿ ಆಗುವವರೆಗೆ ಆ ಜಾಗವನ್ನು ಖಾಲಿ ಇಡಬೇಕೆಂದು ಕುಮಾರರವರು ತಹಶೀಲ್ದಾರ್‌ರವರಲ್ಲಿ ಮನವಿ ಮಾಡಿದ್ದು, ಅದರಂತೆ ಅಕ್ರಮವಾಗಿ ನೆಟ್ಟಿರುವ ಅಡಿಕೆ ಗಿಡಗಳನ್ನು ತಕ್ಷಣ ಕಿತ್ತು ಹಾಕಬೇಕೆಂದು ಅವರು ಒತ್ತಾಯಿಸಿದ್ದಾರೆ

ಜಾಹಿರಾತು

LEAVE A REPLY

Please enter your comment!
Please enter your name here