ಸರ್ಕಾರಿ ನೌಕರರಿಗೆ ಮಾನಸಿಕ ಸದೃಡತೆ ಬಹಳ ಮುಖ್ಯ: ಜಿಲ್ಲಾಧಿಕಾರಿ ಕೆ.ಎನ್.ರಮೇಶ್

0
276

ಚಿಕ್ಕಮಗಳೂರು: ಸರ್ಕಾರಿ ನೌಕರರಿಗೆ ಮಾನಸಿಕ ಸದೃಡತೆ ಬಹಳ ಮುಖ್ಯ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಹೇಳಿದರು.

ಕುವೆಂಪು ಕಲಾ ಮಂದಿರದಲ್ಲಿ ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯ ಹಾಗೂ ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ನೌಕರರಿಗೆ ಮಾನಸಿಕ ಒತ್ತಡ, ನಿರ್ವಹಣೆ, ಏಕಾಗ್ರತೆ, ಮನೋಬಲವೃದ್ಧಿ, ಕೆಲಸದಲ್ಲಿ ದಕ್ಷತೆ ಹೆಚ್ಚಿಸುವ ಆಧ್ಯಾತ್ಮಿಕ ಶಿಕ್ಷಣ ಹಾಗೂ ರಾಜಯೋಗ ಶಿಬಿರದ ೩ ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನು ಪ್ರಪಂಚದಲ್ಲಿರುವಂತಹ ಎಲ್ಲವನ್ನು ಗೆದ್ದಿದ್ದಾನೆ, ಆದರೆ ಆತನ ಮನಸ್ಸನ್ನು ಇನ್ನೂ ಕೂಡ ಗೆಲ್ಲಲು ಸಾಧ್ಯವಾಗಿಲ್ಲಾ , ನೌಕರರ ಮನೋಬಲ ವೃದ್ಧಿಯಾದರೆ ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ.

ಮಾನಸಿಕ ಸ್ಥಿತಿ ಉತ್ತಮವಾಗಿದ್ದಾಗ ತಮ್ಮ ಕಾರ್ಯಕ್ಷೇತ್ರದಲ್ಲಿ ದಕ್ಷತೆ, ಏಕಾಗ್ರತೆ ಹಾಗೂ ವೈಯಕ್ತಿಕ ಬದುಕಿನಲ್ಲಿ ಮನಸ್ಸಿನ ನೆಮ್ಮದಿ, ಪ್ರಶಾಂತತೆ ಮತ್ತು ಶಾಂತಿಯ ಮೂಲಕ ಉತ್ತಮವಾದ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಇದರ ಸದುಪಯೋಗವನ್ನು ಎಲ್ಲಾ ಇಲಾಖೆಯ ನೌಕರರು ಭಾಗವಹಿಸುವ ಮೂಲಕ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಬ್ರಹ್ಮಕುಮಾರೀಸ್ ಜಿಲ್ಲಾ ಸಂಚಾಲಕರಾದ ರಾಜಯೋಗಿನಿ ಬಿ.ಕೆ.ಭಾಗ್ಯಕ್ಕ ಮಾತನಾಡಿ ಸರ್ಕಾರಿ ನೌಕರರು ದಿನನಿತ್ಯದ ಕೆಲಸದ ಸಂದರ್ಭದಲ್ಲಿ ಹಲವಾರು ಒತ್ತಡಗಳಿಂದ ಅವರ ಮನಸ್ಸು ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ರಾಜಯೋಗದ ಮೂಲಕ ಶಾಂತಿ ಮತ್ತು ಆರೋಗ್ಯಕರವಾದ ಸಂತೋಷದ ಜೀವನ ನಡೆಸಲು ಸಾಧ್ಯ.

ಮನುಷ್ಯನಲ್ಲಿ ಎಲ್ಲಾ ರೋಗಗಳ ಕೇಂದ್ರ ಸ್ಥಾನವು ಮನಸ್ಸೇ ಆಗಿದ್ದು, ಹಾಗೆಯೇ ಆರೋಗ್ಯದ ಕೇಂದ್ರ ಸ್ಥಾನವು ಕೂಡ ಮನಸ್ಸೇ ಆಗಿರುವುದ್ದರಿಂದ ಮನಸ್ಸನ್ನು ಸದೃಡತೆಯಿಂದ ಕಾಪಾಡಿಕೊಳ್ಳುವುದು ಮುಖ್ಯವಾಗಿದ್ದು, ಇದರ ಮೂಲಕ ಕೆಲಸ ಕಾರ್ಯಗಳಲ್ಲಿ ದಕ್ಷತೆ ಹಾಗೂ ಏಕಾಗ್ರತೆಯಿಂದ ಕಾರ್ಯ ನಿರ್ವಹಿಸಬಹುದು ಎಂದು ಹೇಳಿದರು.

ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಡಾ.ಹೆಚ್.ಎಲ್.ನಾಗರಾಜ್ ಮಾತನಾಡಿ ಸರ್ಕಾರಿ ನೌಕರರಿಗೆ ಹಾಗೂ ಅಧಿಕಾರಿಗಳಿಗೆ ದಿನನಿತ್ಯದ ಕೆಲಸದ ಕಾರ್ಯ ಒತ್ತಡದಿಂದ ಮಾನಸಿಕವಾಗಿ ಕುಗ್ಗುತ್ತಾರೆ, ಬ್ರಹ್ಮಕುಮಾರೀಸ್ ವಿಶ್ವ ವಿದ್ಯಾನಿಲಯವು ನೌಕರರಿಗಾಗಿ ರಾಜಯೋಗ ಶಿಬಿರವನ್ನು ಏರ್ಪಡಿಸಿರುವುದು ಅತ್ಯುತ್ತಮ ಕಾರ್ಯವಾಗಿದೆ.

ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರಿ ಮಹಾವಿಶ್ವವಿದ್ಯಾನಿಲಯದ ರಾಜಯೋಗವು ತನ್ನ ಉತ್ತಮ ಚಟುವಟಿಕೆಗಳಿಂದ ವಿಶ್ವ ಸಂಸ್ಥೆಯವರೆಗೂ ತನ್ನ ಖ್ಯಾತಿಯನ್ನು ಗಳಿಸಿದೆ, ಸಂಸ್ಥೆಯು ವಿಶ್ವ ಶಾಂತಿ ಸ್ಥಾಪನೆಯಾಗಬೇಕು ಹಾಗೂ ವಿಶ್ವದ ಪರಿವರ್ತನೆಯಾಗಬೇಕಾದರೆ ಮೊದಲು ವ್ಯಕ್ತಿ ಪರಿವರ್ತನೆ ಮುಖ್ಯ ಎಂಬುದು ಇದರ ಮುಖ್ಯ ದ್ಯೆಯವಾಗಿದೆ.

ಮೂರು ದಿನದ ರಾಜಯೋಗ ತರಬೇತಿ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿ ನೌಕರರು ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಮೂಲಕ ಆರೋಗ್ಯವಂತರಾಗಿ ಉತ್ತಮ ಜೀವನ ರೂಪಿಸಿಕೊಳ್ಳಲು ಸಲಹೆ ನೀಡಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದೇವೆಂದ್ರಪ್ಪ ಮಾತನಾಡಿ ಬ್ರಹ್ಮಕುಮಾರಿ ಈಶ್ವರಿ ಮಹಾವಿಶ್ವವಿದ್ಯಾನಿಲಯವು ನೌಕರರಿಗಾಗಿ ಆಯೋಜಿಸಿರುವ ಈ ಶಿಬಿರವು ನೌಕರರಿಗೆ ಅತ್ಯುಪಯುಕ್ತವಾಗಿದ್ದು ಎಲ್ಲಾ ಇಲಾಖೆಯ ನೌಕರರು ಭಾಗವಹಿಸುವ ಮೂಲಕ ಶಿಬಿರವನ್ನು ಯಶಸ್ವಿಗೊಳಿಸುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ತಹಸಿಲ್ದಾರ್ ಕೆ.ಜೆ.ಕಾಂತರಾಜು. ಯುವ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ.ಮಂಜುಳ ಹುಲ್ಲಹಳ್ಳಿ, ಕನ್ನಡ ಮತ್ತ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್, ಗೌರವಧ್ಯಕ್ಷ ಓಂಕಾರಸ್ವಾಮಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here