ಸರ್ಕಾರಿ ನೌಕರಿಯಲ್ಲಿ ಶಿಕ್ಷಣ ಇಲಾಖೆಯಲ್ಲಿ ವಿಶೇಷವಾಗಿ ಸಾರ್ಥಕ ಸೇವೆ ಸಲ್ಲಿಸಿದ ಕೀರ್ತಿ ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ, ದೈಹಿಕ ಅಧಿನಿರೀಕ್ಷಕ ಚಂದ್ರಬಾಬುರವರಿಗೆ ಸಲ್ಲುತ್ತದೆ: ಡಿಡಿಪಿಐ ಪರಮೇಶ್ವರಪ್ಪ

0
433

ಹೊಸನಗರ: ಶಿಕ್ಷಣ ಇಲಾಖೆಗೆ 28 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ವೀರಭದ್ರಪ್ಪನವರು ಅದರಲ್ಲಿಯೂ 13 ವರ್ಷಗಳ ಕಾಲ ಹೊಸನಗರದಲ್ಲಿಯೇ ಸೇವೆ ಸಲ್ಲಿಸಿ ಎಲ್ಲ ಶಿಕ್ಷಕ ವರ್ಗದವರಿಗೆ ಪ್ರೀತಿ ಪಾತ್ರರಾಗಿ ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ವಯೋನಿವೃತ್ತಿ ಪಡೆದ ವೀರಭದ್ರಪ್ಪನವರನ್ನು ಸನ್ಮಾನಿಸಿ ಗೌರವಿಸುತ್ತಿರುವುದು ನಮ್ಮ ಶಿಕ್ಷಣ ಕ್ಷೇತ್ರಕ್ಕೆ ಹೆಮ್ಮೆ ಎನಿಸುತ್ತಿದೆ ಎಂದು ಶಿವಮೊಗ್ಗ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೆಶಕರಾದ ಪರಮೇಶ್ವರಪ್ಪನವರು ಹೇಳಿದರು.

ಹೊಸನಗರದ ಗಣಪತಿ ದೇವಸ್ಥಾನದ ಆವರಣದಲ್ಲಿ ಸುದೀರ್ಘ 28 ವರ್ಷ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ ಹಾಗೂ ಶಿಕ್ಷಣ ಇಲಾಖೆಯ ದೈಹಿಕ ಪರಿವೀಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿದ ಚಂದ್ರಬಾಬುರವರು ವಯೋನಿವೃತ್ತಿ ಪಡೆದಿದ್ದು ಇವರನ್ನು ಅದ್ಧೂರಿಯಾಗಿ ಸನ್ಮಾನಿಸಿ ಮಾತನಾಡಿದರು.

ವೀರಭದ್ರಪ್ಪನವರು ಹೊಸನಗರ ತಾಲ್ಲೂಕಿನಲ್ಲಿಯೇ ಹುಟ್ಟಿ ತಾಲ್ಲೂಕಿಗಾಗಿಯೇ ತಮ್ಮ ಸರ್ಕಾರಿ ಸೇವೆ ಸಲ್ಲಿಸಿದ್ದು ಇವರು ಶಿಕ್ಷಕ ವರ್ಗದವರಿಗೆ ಮಾದರಿಯಾಗಿದ್ದಾರೆ ಇವರ ನಿವೃತ್ತಿ ಶಿಕ್ಷಣ ಇಲಾಖೆಗೆ ತುಂಬಲಾರದ ನಷ್ಟವಾಗಿದೆ. ಇವರು ಇನ್ನೂ ಐದು ವರ್ಷಗಳ ಕಾಲ ಸೇವೆ ಸಲ್ಲಿಸಬೇಕೆಂಬ ಹಂಬಲ ಎಲ್ಲ ಶಿಕ್ಷಕರ ಬೇಡಿಕೆಯಾಗಿದ್ದು ಆದರೆ ಸರ್ಕಾರದ ನಿಯಮದ ಪ್ರಕಾರ 60ವರ್ಷಕ್ಕೆ ನಿವೃತ್ತಿ ಪಡೆಯಬೇಕಾಗಿರುವುದರಿಂದ ನಮಗೆ ನಮ್ಮ ಶಿಕ್ಷಣ ಇಲಾಖೆಗೆ ಅನಿವಾರ್ಯವಾಗಿ ಬೀಳ್ಕೊಡಬೇಕಾಗಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಹೆಚ್.ಆರ್.ಸುರೇಶ್‌ರವರು ಹೇಳಿದರು.

ಶಿಕ್ಷಣ ಇಲಾಖೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆಗೆ ಸೇರಿದ ಚಂದ್ರಬಾಬು ಇವರು 36 ವರ್ಷ ಉತ್ತಮ ಸೇವೆ ಸಲ್ಲಿಸಿ ಬಿ.ಇ.ಓ ಕಛೇರಿಯಲ್ಲಿ ದೈಹಿಕ ಪರಿವೀಕ್ಷಕರಾಗಿ ಕಳೆದ ಮೂರು ವರ್ಷಗಳಿಂದ ಮರೆಯಲಾಗದ ಸೇವೆ ಸಲ್ಲಿಸಿದ್ದಾರೆ ಎಂದು ಶಿವಮೊಗ್ಗ ಡಿಡಿಪಿಐ ಕಛೇರಿಯ ಶಿಕ್ಷಣಾಧಿಕಾರಿ ರಾಮಪ್ಪಗೌಡ ಹೇಳಿದರು.

ಸುದೀರ್ಘ ಸೇವೆ ಸಲ್ಲಿಸಲು ಸಹಕಾರಿಸಿದ ಶಿಕ್ಷಣ ಇಲಾಖೆಯ ಶಿಕ್ಷಕರು ಮತ್ತು ಕಛೇರಿಯ ಸಿಬ್ಬಂದಿಗಳ ಸಹಕಾರ ಎಂದಿಗೂ ಮರೆಯುವಂತಿಲ್ಲ ಎಂದು ಸನ್ಮಾನ ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ ಹಾಗೂ ದೈಹಿಕ ಅಧೀನಿರಿಕ್ಷಕರಾದ ಚಂದ್ರಬಾಬುರವರು ಮಾತನಾಡಿದರು.

ಈ ಸಮಾರಂಭದ ಅಧ್ಯಕ್ಷತೆಯನ್ನು ಅಕ್ಷರ ದಾಸೋಹ ಸಂಯೋಜನಾಧಿಕಾರಿ ಹಾಗೂ ಇಂದಿನ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್‌ರವರು ವಹಿಸಿ ಮಾತನಾಡಿದರು.

ಈ ಸಮಾರಂಭದಲ್ಲಿ ಶಿವಮೊಗ್ಗ ಶಿಕ್ಷಣಾಧಿಕಾರಿ ಉಮಾಮಹೇಶ್ವರ, ಗೃಹ ಮಂಡಳಿಯ ಅಧ್ಯಕ್ಷರಾದ ಮಹಾಬಲೇಶ್ವರ ಹೆಗಡೆ, ಶಿಕ್ಷಕರ ಸಂಘದ ಅಧ್ಯಕ್ಷರಾದ ಹೆಚ್.ಆರ್ ಸುರೇಶ್, ಬಡ್ತಿ ಶಿಕ್ಷಕರ ಸಂಘದ ಅಧ್ಯಕ್ಷರಾದ ಕುಬೇರಪ್ಪ, ಮಹಮದ್ ಅಲ್ತಾಫ್, ಕಾರ್ಯದರ್ಶಿ ಗಂಗಾಧರಯ್ಯ, ರವಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಹೊಸನಗರದ ಸರ್ಕಾರಿ ನೌಕರರ ವಿವಿಧ ಸಂಘಗಳ ಮೂಲಕ ಈ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಜಾಹಿರಾತು

LEAVE A REPLY

Please enter your comment!
Please enter your name here