ಸರ್ಕಾರಿ ಬಸ್ ಮತ್ತು ಓಮ್ನಿ ನಡುವೆ ಅಪಘಾತ ; ಓರ್ವ ಸ್ಥಳದಲ್ಲೇ ಸಾವು !

0
542

ಸಾಗರ : ತಾಲ್ಲೂಕಿನ ಜೋಗದ ಶಿರೂರು ಕೆರೆ ಸೇತುವೆ ಮೇಲೆ ಕೆ.ಎಸ್.ಆರ್.ಟಿ.ಸಿ. ಬಸ್ ಮತ್ತು ಓಮ್ನಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ವ್ಯಕ್ತಿ ಮೃತಪಟ್ಟ ಘಟನೆ ಗುರುವಾರ ನಡೆದಿದೆ.


ಶ್ರೀಕ್ಷೇತ್ರ ವಡನ್‌ಬೈಲ್ ಧರ್ಮದರ್ಶಿ ಎಚ್.ಎಂ.ವೀರರಾಜ ಜೈನ್ ಮತ್ತು ಅವರ ಸಹೋದರ ಎಚ್.ಎಂ. ದೇವಯ್ಯ ಅವರು ಕಾರ್ಗಲ್‌ನ ಸಹಕಾರಿ ಸಂಸ್ಥೆಯೊಂದರ ಸರ್ವಸದಸ್ಯರ ಸಭೆಗೆ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು ಎಚ್.ಎಂ. ದೇವಯ್ಯ (70) ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ.

ಶ್ರೀಕ್ಷೇತ್ರ ವಡನ್‌ಬೈಲ್ ಧರ್ಮದರ್ಶಿ ಎಚ್.ಎಂ.ವೀರರಾಜ ಜೈನ್ ಅವರಿಗೆ ಕಾಲು ಮುರಿದಿದ್ದು ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ. ಅಪಘಾತದಲ್ಲಿ ಓಮ್ನಿ ಸಂಪೂರ್ಣ ನಜ್ಜುಗುಜ್ಜಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here