ಸರ್ಕಾರಿ ಬಸ್ ಮತ್ತು ಕಾರಿನ ನಡುವೆ ಅಪಘಾತ: ಓರ್ವನ ಸ್ಥಿತಿ ಚಿಂತಾಜನಕ !

0
17763

ಚಿಕ್ಕಮಗಳೂರು: ಚಿಕ್ಕಮಗಳೂರಿನಿಂದ ಬಾಳೆಹೊನ್ನೂರಿಗೆ ಹೋಗುತ್ತಿದ್ದ ಕೆ.ಎಸ್.ಆರ್.ಟಿ ಬಸ್ ಹಾಗೂ ಕಾರಿನ ನಡುವೆ ಆಲ್ದೂರು ಹತ್ತಿರದ ತೋರಣಮಾವು ಗ್ರಾಮದ ಬಳಿ ಇಂದು ರಾತ್ರಿ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಕಾರಿನಲ್ಲಿ ಒಟ್ಟು ಐವರು ಪ್ರಯಾಣಿಸುತ್ತಿದ್ದು ಧರ್ಮಸ್ಥಳದಿಂದ ಆಲ್ದೂರು ಮೂಲಕ ಚಿಕ್ಕಮಗಳೂರು ಕಡೆ ಬರುತ್ತಿದ್ದರು ಎಂಬ ಮಾಹಿತಿ ದೊರೆತ್ತಿದ್ದು ಕಾರು ಚಾಲಕನ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ತಿಳಿಸಿದ್ದಾರೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ಬಸ್ಸಿನಲ್ಲಿ ಸುಮಾರು 35 ರಿಂದ 40 ಪ್ರಯಾಣಿಕರಿದ್ದು ಬಸ್ಸಿನ ಬಲ ಭಾಗವು ಜಜ್ಜಿ ಹೊಗ್ಗಿದ್ದು ಬಸ್ಸಿನಲ್ಲಿದ್ದವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.

ವಿಷಯ ತಿಳಿದು ಆಲ್ದೂರು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಗಾಯಗಳನ್ನು ಆಸ್ಪತ್ರೆಗೆ ಸೇರಿಸಿ ಪ್ರಕರಣ ದಾಖಲಿಸಿಕೊಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here