ಸರ್ಕಾರ ರೈತರಿಗೆ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಬೆದರಿಕೆ ನೀಡಿದೆ ; ಉಮ್ಮಾರ್ ಫಾರೂಕ್

0
185

– ಬೆಲೆ ಏರಿಕೆ ವಿರುದ್ಧ ಆಕ್ರೋಶ

ತರೀಕೆರೆ: ಅನ್ನದಾತ ರೈತನಿಗೆ ಬೆಲೆ ಏರಿಕೆ ಬೆದರಿಕೆ ಹಾಕಿದ್ದಾರೆ. ಮನಮೋಹನ್ ಸಿಂಗ್ ರವರ ಸರ್ಕಾರ ಇದ್ದಾಗ ಈ ರೀತಿ ಸಾರ್ವಜನಿಕರ ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಸಮಸ್ಯೆ ಇರಲಿಲ್ಲ ಸಾರ್ವಜನಿಕರ ಬಗ್ಗೆ ಅತಿ ಹೆಚ್ಚಿನ ಕಾಳಜಿ ಉಳ್ಳಂತದು ಅಂತ ಇದ್ದರೆ ಅದು ಕಾಂಗ್ರೆಸ್ ಸರ್ಕಾರ ಎಂದು ಮಾಜಿ ಶಾಸಕ ಎಸ್. ಎಂ. ನಾಗರಾಜ್ ಕಾಂಗ್ರೆಸ್ ಪಕ್ಷದಿಂದ ಬೃಹತ್ ಪ್ರತಿಭಟನೆಯ ಬಹಿರಂಗ ಸಭೆಯಲ್ಲಿ ಹೇಳಿದರು.

ತರೀಕೆರೆ ತಾಲ್ಲೂಕು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮ್ಮಾರ್ ಫಾರೂಕ್ ಮಾತನಾಡಿ, ಧರ್ಮ ಧರ್ಮಗಳ ಮಧ್ಯೆ ಬಿ. ಜೆ. ಪಿ. ಸರ್ಕಾರ ಸಂಘರ್ಷ ಸೃಷ್ಠಿಸುತ್ತಿದೆ ಎಂದು ಆರೋಪಿಸದರು ಯುವ ಕಾಂಗ್ರೆಸ್‍ನ ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೈತ್ರ ಮಾತನಾಡಿ, ಬಿ. ಜೆ. ಪಿ. ಸರ್ಕಾರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ದಿನನಿತ್ಯ ದೇಶದಲ್ಲಿ ಸಾವಿರಾರು ಮಹಿಳೆಯರು ವಿವಿಧ ರೀತಿಯ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದರು.

ಮಾಜಿ ಪುರಸಭಾ ಅಧ್ಯಕ್ಷರಾದ ಧರ್ಮರಾಜ್ ಮಾತನಾಡಿ, ತರೀಕೆರೆ ಕ್ಷೇತ್ರದಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರೇ ಇರಲಿ ಬಹುಮತಗಳೊಂದಿಗೆ ಗೆಲವು ಸಾಧಿಸುತ್ತೇವೆ ಎಂದು ಹೇಳಿದರು. ಹಿರಿಯ ಕಾಂಗ್ರೆಸ್ ಮುಖಂಡರಾದ ಟಿ. ವಿ. ಶಿವಶಂಕರಪ್ಪ ಮಾತನಾಡಿ ರಾಜ್ಯ ರಾಜಕಾರಣದಲ್ಲಿ ಮತ್ತು ಈ ಕ್ಷೇತ್ರದ ಕಾಂಗ್ರೆಸ್ ಮುಖಂಡರುಗಳಲ್ಲಿ ಒಗ್ಗಟ್ಟಿನ ಸಮಸ್ಯೆ ಇದೆ. ಎಲ್ಲರೂ ಒಮ್ಮತದಿಂದ ಚುನಾವಣೆ ಎದುರಿಸಲು ಸಿದ್ದರಾಗಬೇಕು ಎಂದರು. ಮಾಜಿ ಶಾಸಕರಾದ ಜಿ. ಹೆಚ್. ಶ್ರೀನಿವಾಸ್ ಮಾತನಾಡಿ ಅತ್ಯಂತ ಕ್ರೂರವಾದ ಸರ್ಕಾರವನ್ನು ನಾವು ಇತಿಹಾಸದಲ್ಲಿಯೇ ಕಂಡರಿಯದ ಸರ್ಕಾರವಾಗಿದೆ ಇದರು ಜನ ಸಾಮಾನ್ಯರು ದಿನನಿತ್ಯದ ಬಳಕೆ ವಸ್ತುಗಳಾದ ಪೆಟ್ರೋಲ್ ಡಿಸೆಲ್, ಗ್ಯಾಸ್ ಸಿಲಿಂಡರ್, ಆಹಾರ ಸಾಮಾಗ್ರಿಗಳ ಬೆಲೆ ಗಗನಕ್ಕೇರಿಸಿ ಸಾರ್ವಜನಿಕ ಜೀವನದಲ್ಲಿ ಚಲ್ಲಾಟವಾಡುತ್ತಿದೆ ಈ ಸರ್ಕಾರ ಎಂದರು.

ಸಮಾಜ ಸೇವಕ ಗೋಪಿಕೃಷ್ಣ ಮಾತನಾಡಿ, ಸಾಮಾಜಿಕ ಚಿಂತನೆಗಳು ಸಾರ್ವಜನಿಕ ಸಮಾಜದ ಶೋಷಿತರ ಪರವಾಗಿ ಹೋರಾಟ ಮಾಡುತ್ತಿರುವುದು ಕಾಂಗ್ರೆಸ್ ಪಕ್ಷದ ಧ್ಯೇಯವಾಗಿದೆ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವುದು ಬಿ.ಜೆ.ಪಿ. ಸರ್ಕಾರದವರ ಹುಟ್ಟು ಗುಣವಾಗಿದೆ ಎಂದರು. ಈ ಬೃಹತ್ ಪ್ರತಿಭಟನೆಯಲ್ಲಿ ವರ್ಮಪ್ರಕಾಶ್, ಭೈಟು ರಮೇಶ್, ಹೇಮಲತಾ ರೇವಣ್ಣ, ಟಿ. ಎನ್. ಗೋಪಿನಾಥ್, ಗುರುಕಿರಣ್, ಪುರಸಭಾ ಸದಸ್ಯರಾದ ಪರಮೇಶ್, ಶಶಾಂಕ್, ಮುಖಂಡರಾದ ದೋರನಾಳು ಪರಮೇಶ್, ಜಯಕರ್ನಾಟಕ ಸಂಘಟನೆಯ ಜಗದೀಶ್, ಗೌರೀಶ ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here