ಸರ್ವಜ್ಞಾನ ಸಮಾಗಮ ಕವನ ಸಂಕಲನ ಲೋಕಾರ್ಪಣೆ

0
286

ರಿಪ್ಪನ್‌ಪೇಟೆ: ವ್ಯಕ್ತಿ ತನ್ನ ಜ್ಞಾನ ಬರಹವನ್ನು ಪುಸ್ತಕ ರೂಪದಲ್ಲಿ ತರುವುದರೊಂದಿಗೆ ಎಲ್ಲರ ಮನಮನಸ್ಸಿನಲ್ಲಿ ಉಳಿಯುವಂತಾಗಲು ಇಂತಹ ಕವನ ಸಂಕಲಗಳಿಂದ ಸಾಧ್ಯವೆಂದು ಸರ್ಕಾರಿ ಪ್ರೌಢಶಾಲೆಯ ಉಪಪ್ರಾಚಾರ್ಯ ಕೆಸಿನಮನೆ ನಾ.ರತ್ನಾಕರ್ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಹೊಸನಗರ ಘಟಕ ಮತ್ತು ರಿಪ್ಪನ್‌ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜ್ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸರ್ವಜ್ಞಾನ ಸಮಾಗಮ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಕೊಡಸೆ ಜಿ.ಎಸ್.ವಿನಯ ಇವರ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿ, ವಿದ್ಯಾರ್ಥಿ ದಶೆಯಲ್ಲಿಯೇ ಉತ್ತಮ ಪದಗಳ ಸಂಯೋಜನೆ ಸಮ್ಮೀಳಿತವನ್ನು ಮೈಗೊಡಿಸಿಕೊಳ್ಳುವುದರೊಂದಿಗೆ ಭಾವನೆಗಳ ರಾಶಿಗಳಿಗೆ ಭಾಷಾ ಪಾಂಡಿತ್ಯವೂ ಸೇರಿಕೊಂಡರೆ ಲೇಖಕ ಸೃಷ್ಟಿಯಾಗಬಲ್ಲ ಎಂಬುದಕ್ಕೆ ಈ ಕವನ ಸಂಕಲನವೇ ಸಾಕ್ಷಿ. ಕ್ಷಣದಲ್ಲಿ ರಚಿಸಿ ಜನಮಾನಸದಲ್ಲಿ ಉಳಿಯುವಂತಹ ಕವನಗಳನ್ನು ಬರೆದಿರುವ ವಿದ್ಯಾರ್ಥಿ ಕೇವಲ ಕವನಗಳಿಗಾಗಿ ಸಮಯವನ್ನು ಮೀಸಲಿಡದೆ ವ್ಯಾಸಂಗದಲ್ಲಿಯೂ ಅತ್ಯುನ್ನತ ಶ್ರೇಣಿಯಲ್ಲಿ ಎಸ್.ಎಸ್.ಎಲ್.ಸಿ ವಾರ್ಷಿಕ ಪಬ್ಲಿಕ್ ಪರೀಕ್ಷೆಯಲ್ಲಿ 616 ಅಂಕಗಳನ್ನು ಪಡೆದು ಶಾಲೆಯ ಕೀರ್ತಿ ಪತಾಕೆಯನ್ನು ಹಾರಿಸಿರುವ ವಿದ್ಯಾರ್ಥಿಯ ಈ ಸಾಧನೆ ಇನ್ನೊಬ್ಬರಿಗೆ ಪ್ರೇರಣೆಯಾಗಲೆಂದು ಹಾರೈಸಿ, ಪ್ರಶಂಸೆಯನ್ನು ವ್ಯಕ್ತಪಡಿಸಿದರು .ಕವನಗಳ ಮೂಲಕ ಸಾಹಿತ್ಯದ ಕೃಷಿಯಲ್ಲಿ ಸದಾ ಸಾಹಿತ್ಯಾಭಿಮಾನಿಗಳ ಮನಸ್ಸಿನಲ್ಲಿ ಉಳಿಯುವಂತಾಗಬೇಕು ಎಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಪ್ರೌಢಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷ ಈಶ್ವರ ಮಳಕೊಪ್ಪ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಯುವ ಕವಿ ಕೊಡಸೆ ಜಿ.ಎಸ್.ವಿನಯರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಿದ್ದಿವಿನಾಯಕ ದೇವಸ್ಥಾನ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಎನ್.ಸತೀಶ್, ಕೊಡಸೆ ವೀಣಾ ನಾಗರಾಜ್, ತ.ಮ.ನರಸಿಂಹ ಇನ್ನಿತರರು ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು.

ವಿದ್ಯಾರ್ಥಿ ಕು.ವೈಷ್ಣವಿ ಸ್ವಾಗತಿಸಿದರು. ಕುಮಾರಿ ಪಂಚಮಿ ರವಿಕುಮಾರ್ ನಿರೂಪಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here