ಸರ್ವ ಜನಾಂಗದ ಶಾಂತಿಯ ತೋಟದಂತೆ ಬೆಂಗಳೂರು ಬೆಳೆಯಲು ಕೆಂಪೇಗೌಡರವರೇ ಕಾರಣ‌ ; ಹಾಲಗದ್ದೆ ಉಮೇಶ್

0
251

ಹೊಸನಗರ: ವೇಗವಾಗಿ ಬೆಳೆಯುತ್ತಿರುವ ರಾಜ್ಯ ರಾಜಧಾನಿ ಬೆಂಗಳೂರು ಸುರಕ್ಷಿತ ಮತ್ತು ಆಹ್ಲಾದಕರ ವಾತಾವರಣದ ಸ್ಥಳದಲ್ಲಿ ನಿರ್ಮಾಣಗೊಂಡಿದ್ದು ಇಲ್ಲಿ ಎಲ್ಲ ಜಾತಿ, ಮತ, ಪಂಥ, ಧರ್ಮದ ಜನರು ಬದುಕು ಕಟ್ಟಿಕೊಂಡಿದ್ದಾರೆ ಇಂಥಹ ಸುಂದರ ನಗರ ನಿಮಾಣವಾಗಲು ಒಂದನೇ ಕೆಂಪೇಗೌಡರ ವಿವೇಚನೆ ಮತ್ತು ದೂರದೃಷ್ಠಿಯೇ ಕಾರಣ. ಇಂದು ಬೆಂಗಳೂರು ನಗರ ಸರ್ವ ಜನಾಂಗದ ಶಾಂತಿಯ ತೋಟದಂತೆ ಕೆಂಪೇಗೌಡರ ಕನಸು ನನಸಾಗಿದೆ ಮುಂದೆಯು ಸಹ ಅವರು ಹಾಕಿಕೊಟ್ಟ ದಾರಿಯಲ್ಲಿ ನಾವು ಹೋಗೋಣ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಹಾಲಗದ್ದೆ ಉಮೇಶ್‌ರವರು ಹೇಳಿದರು.

ಹೊಸನಗರ ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಒಕ್ಕಲಿಗ ಸಮಘದ ಆಶ್ರಯದಲ್ಲಿ ತಾಲ್ಲೂಕು ಪಂಚಾಯಿತಿಯ ಆವರಣದಲ್ಲಿ ಕೆಂಪೇಗೌಡರವರ 513ನೇ ಜಯಂತಿಯನ್ನು ಆಚರಿಸಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ಸಮಾರಂಭದ ಅದ್ಯಕ್ಷತೆಯನ್ನು ತಾಲ್ಲೂಕು ಅಧ್ಯಕ್ಷರಾದ ಗರುಡಪ್ಪ ಗೌಡರವರು ವಹಿಸಿದ್ದರು.

ವಿಜಯನಗರ ಸಾಮ್ರಾಜ್ಯದ ಸಾವಂತರಾಗಿದ್ದ ಕೆಂಪೇಗೌಡರವರು 1537ರಲ್ಲೇ ನಗರವನ್ನು ಕಟ್ಟಿದ್ದರು ತದ ನಂತರ ಕೆಂಪೇಗೌಡರ ರಾಜದಾನಿಯು ಯಲಹಂಕದಿಂದ ಬೆಂಗಳೂರಿಗೆ ಸ್ಥಳಾಂತರವಾಯಿತು. ಬೆಂಗಳೂರು ನಗರವನ್ನು ಪ್ರಮುಖ ವಾಣಿಜ್ಯ ಕೇಂದ್ರವನ್ನಾಗಿ ಮಾಡಬೇಕೆಂಬುದು ಅವರ ಆಸೆಯಾಗಿದ್ದು ಅದರಂತೆಯೇ ತಮ್ಮ ಕೋಟೆಯೊಳಗೆ ಆಯಾ ಕುಲ ಕಸಬುದಾರರಿಗೆ ಅನುಗುಣವಾಗಿ ಪೇಟೆಗಳನ್ನು ಕಟ್ಟಿಕೊಂಡು ವ್ಯಾಪಾರ ವಹಿವಾಟಿಗೆ ಅನುವು ಮಾಡಿಕೊಟ್ಟರು ಅಂದು ನಿರ್ಮಾಣಗೊಂಡ 54 ಪೇಟೆಗಳನ್ನು ನವ ನಿರ್ಮಾಣ ಮಾಡಿ ಇಡೀ ಬೆಂಗಳೂರು ವ್ಯಾಪಾರಿ ಕೇಂದ್ರವಾಗಿ ರಾಜಧಾನಿಯಾಗಿ ಮಾರ್ಪಟಿದೆ ಎಂದರು.

ಮುಖ್ಯ ಅತಿಥಿಯಾಗಿ ತಾಲ್ಲೂಕು ಕಛೇರಿಯ ಗ್ರೇಡ್ 2 ತಹಶೀಲ್ದಾರ್ ರಾಕೇಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಾಲಚಂದ್ರಪ್ಪ, ಶಿರಾಸ್ಥೆದಾರ್ ಶ್ರೀಕಾಂತ್ ಹೆಗಡೆ, ಸುರೇಶ್ ಪ್ರಥಮ ದರ್ಜೆ ಗುಮಾಸ್ಥರಾದ ವಿನಯ್ ಎಂ ಆರಾಧ್ಯ, ಚಿರಾಗ್, ತೀರ್ಥಹಳ್ಳಿಯ ಶಿಕ್ಷಕರಾದ ಸ್ವಾಮಿ, ನಾಡಹಬ್ಬಗಳ ಸಮಿತಿಯ ಸದಸ್ಯರಾದ ಶ್ರೀಧರ ಉಡುಪ, ಶ್ರೀನಿವಾಸ್ ಕಾಮತ್, ಅಂಜನ್ ಟೆಕ್ಸ್ ಟೈಲ್ ರಾಜಮೂರ್ತಿ, ಮೈನಾವತಿ, ವಾಣಿ, ನಾಗೇಶ್, ಅಶೋಕ ಹೋಟೆಲ್ ರತ್ನಾಕರ್, ಮಹಾಬಲ, ಪೂರ್ಣೇಶ್, ವರ್ತಕರ ಸಂಘದ ಅಧ್ಯಕ್ಷ ವಿಜೇಂದ್ರ ಶೇಟ್, ಉದಯಗೌಡ, ಅಶೋಕಗೌಡ, ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here