ಸಹಕಾರಿ ಕ್ಷೇತ್ರದಲ್ಲಿ ಕಾರ್ಪೋರೇಟ್ ಮಾದರಿಯಲ್ಲಿ ಕೆಲಸ ಮಾಡಿ ಸಂಸ್ಥೆಯನ್ನು ಎತ್ತರಕ್ಕೆ ಬೆಳೆಸಲು ಸಾಧ್ಯ

0
93

ರಿಪ್ಪನ್‌ಪೇಟೆ: ಸಹಕಾರಿ ಕ್ಷೇತ್ರದಲ್ಲಿ ಕಾರ್ಪೋರೇಟ್ ಮಾದರಿಯಲ್ಲಿ ಕೆಲಸ ಮಾಡಿ ಸಂಸ್ಥೆಯನ್ನು ಎತ್ತರಕ್ಕೆ ಬೆಳಸುವುದು ಸವಾಲಿನ ಕೆಲಸವಾಗಿದ್ದು ಈ ದೃಷ್ಠಿಯಿಂದ ಶಾರದಾ ವಿವಿದೋದ್ಯೇಶ ಸೌಹಾರ್ದ ಸಹಕಾರಿ ಸಂಸ್ಥೆಯು ರಾಜ್ಯದಲ್ಲಿಯೇ ಮಾದರಿ ಸಂಸ್ಥೆಯಾಗಿ ಮೂಡಿ ಬಂದಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಶಾರದಾ ಸಹಕಾರಿಯ ವ್ಯವಸ್ಥಾಪಕ ನಿರ್ದೇಶಕ ಶರವಣಗೌಡ ಜಿ,ಪಾಟೀಲ್ ಹೇಳಿದರು.

ರಿಪ್ಪನ್‌ಪೇಟೆಯಲ್ಲಿನ ಶಾರದಾ ಕೋಲ್ಡ್ ಸ್ಟೋರೇಜ್ ಘಟಕವನ್ನು ವೀಕ್ಷಿಸಿ ನಂತರ ಮಾತನಾಡಿ, ಸಹಕಾರಿ ವ್ಯವಸ್ಥೆಯಲ್ಲಿ ಕೋಲ್ಡ್ ಸ್ಟೋರೇಜ್ ಘಟಕದಂತಹ ಬೃಹತ್ ಮೊತ್ತದ ಹೂಡಿಕೆಗೆ ಧೈರ್ಯಬೇಕು. ಹೂಡಿಕೆಯ ಬಳಿಕೆ ಇದನ್ನು ಸಮರ್ಥವಾಗಿ ಬೆಳಸುವುದು ಕೂಡ ಸುಲಭದ ಕೆಲಸವಲ್ಲ ಅದರೆ ಸಹಕಾರಿ ಸಂಸ್ಥೆಯ ಅಧ್ಯಕ್ಷರು ಮತ್ತು ನಿರ್ದೇಶಕರು ಈ ನಿಟ್ಟಿನಲ್ಲಿ ಇಡೀ ಸಹಕಾರಿ ವಲಯ ಮೆಚ್ಚುವಂತಹ ಕೆಲಸ ಮಾಡಿದ್ದಾರೆ ಇದೊಂದು ರೂಲ್ ಮಾಡೆಲ್ ಎಂದು ಶ್ಲಾಘಿಸಿದರು.

ಸೌಹಾರ್ದ ಸಹಕಾರಿ ವ್ಯವಸ್ಥೆಯ ಬಗ್ಗೆ ಸರ್ಕರ ಕೂಡ ಇಂದು ಹೆಚ್ಚು ಆಸಕ್ತವಾಗಿದೆ.ಈ ವಲಯಕ್ಕೆ ಆದ್ಯತೆ ನೀಡಲು ಉತ್ಸುಕವಾಗಿದೆ ಅದರೆ ಸೌಹಾರ್ದ ಸಹಕಾರಿ ವಲಯಕ್ಕೆ ನೀಡಲಾಗಿರುವ ಸ್ವಾತಂತ್ರ್ಯವನ್ನು ಸಮರ್ಥವಾಗಿ ಬಳಕೆ ಮಾಡಿ ಷೇರುದಾರರಿಗೆ ನ್ಯಾಯ ಒದಗಿಸಬೇಕು. ಕೆಲವು ಕಡೆ ಅಡಳಿತ ಮಂಡಳಿಯ ಅಸಮರ್ಪಕ ನಿರ್ಧಾರಗಳಿಗೆ ಸಮಸ್ಯೆಯಾಗಿದೆ ಆದರೆ ಶಾರದಾ ಸಹಕಾರಿಯ ಪ್ರತಿಯೊಬ್ಬ ನಿರ್ದೇಶಕರು ಮತ್ತು ಸಿಬ್ಬಂದಿಗಳು ತಮ್ಮನ್ನು ತೊಡಗಿಸಿಕೊಂಡಿರುವ ರೀತಿ ಅನುಕರಣೀಯ ರೈತರ ಉತ್ಪನ್ನಗಳನ್ನು ಶೀಥಲೀಕರಣ ಘಟಕದಲ್ಲಿ ಇಟ್ಟುಕೊಂಡು ಅವರಿಗೆ ನೆರವಾಗುವುದರ ಜೊತೆಗೆ ಇಲ್ಲಿ ಸೋಲಾರ್ ವಿದ್ಯುತ್ ಅಳವಡಿಕೆ ಕೂಡ ಅನುಕರಣಿಯ ಒಟ್ಟಾರೆ ಇಡೀ ಸಹಕಾರಿಯ ಸಂಸ್ಥೆಯ ಬೆಳವಣಿಗೆ ಉತ್ತಮ ರೀತಿಯಲ್ಲಿದೆ ಎಂದು ಬಣ್ಣಿಸಿದರು.

ಸಹಕಾರಿಯ ಬಾಹ್ಯ ತಜ್ಞ ಗೋಪಾಲ ಯಡಗೆರೆ ಮಾತನಾಡಿ, ಸಹಕಾರಿ ಬೆಳದು ಬಂದ ದಾರಿ ಎದುರಿಸಿದ ಸವಾಲು ಗೆಲುವು ಸಾಧಿಸಿದ ರೀತಿ ಎಲ್ಲವನ್ನು ವಿವರಿಸಿದರು.

ಸಹಕಾರಿಯ ಸಮರ್ಥ ಅಧ್ಯಕ್ಷ ಹೆಚ್.ಎಸ್.ಶಿವಶಂಕರ್, ಸಾರಥ್ಯದಲ್ಲಿ ಎಲ್ಲ ನಿರ್ದೇಶಕರು ಜೊತೆಗೆ ನಿಂತಿದ್ದು ಸಹಕಾರಿಯ ಸಿಇಓ ಮಂಜುನಾಥ ಶರ್ಮ ನೇತೃತ್ವದಲ್ಲಿ ಸಿಬ್ಬಂದಿಗಳ ಕಾರ್ಯ ನಿರ್ವಹಣೆ ಸಂಸ್ಥೆಯ ಸಾಧನೆಗೆ ಕಾರಣ ಎಂದರು.

ಸಹಕಾರಿಯ ಉಪಾಧ್ಯಕ್ಷ ರಮಾಕಾಂತ್, ನಿರ್ದೇಶಕ ರಾಮಚಂದ್ರ, ಸಿಇಓ ಮಂಜುನಾಥ, ರಿಪ್ಪನ್‌ಪೇಟೆ ಕೋಲ್ಡ್ ಸ್ಟೋರೇಜ್ ಘಟಕದ ವ್ಯವಸ್ಥಾಪಕ ಗಿರೀಶ್ ಇನ್ನಿತರ ಸಿಬ್ಬಂದಿ ವರ್ಗ ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here