23.2 C
Shimoga
Sunday, November 27, 2022

ಸಹಕಾರಿ ಕ್ಷೇತ್ರ ಬೆಳೆಯಬೇಕಾದರೆ ರಾಜಕೀಯ, ಹೆಣ್ಣು-ಗಂಡು ತಾರತಮ್ಯ, ಜಾತಿ ಎಂಬ ಗೋಡೆ ಇರಬಾರದು ; ಆರ್.ಎಂ ಮಂಜುನಾಥ ಗೌಡ


ಹೊಸನಗರ: ನಾನು ಸುಮಾರು 30 ವರ್ಷದಿಂದ ಸಹಕಾರಿ ಕ್ಷೇತ್ರದಲ್ಲಿದ್ದು ಸಹಕಾರಿ ಕ್ಷೇತ್ರದಲ್ಲಿ ಎಂದು ರಾಜಕೀಯ, ಹೆಣ್ಣು-ಗಂಡು ತಾರತಮ್ಯ ಹಾಗೂ ರಾಜಕೀಯ ತಂದಿಲ್ಲ ಆದರೆ ಈ ಮೂರು ಗುಣಗಳನ್ನು ಸಹಕಾರಿ ಸಂಸ್ಥೆಗಳು ಬೆಳೆಸಿಕೊಂಡಿದೆ ಎಂದು ಹಿರಿಯ ಸಹಕಾರಿ ಧುರೀಣ ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ ಮಂಜುನಾಥ್‌ಗೌಡ ಹೇಳಿದರು.


ಹೊಸನಗರ ತಾಲ್ಲೂಕು ಬಟ್ಟೆಮಲ್ಲಪ್ಪದ ಬಸ್ ಸ್ಟ್ಯಾಂಡ್ ಮುಂಭಾಗ ಕರ್ನಾಟಕ ರಾಜ್ಯ ಸಹಕಾರ ಮಂಡಳ ನಿಯಮಿತ, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ, ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಹಾಗೂ ಸಹಕಾರಿ ಹಾಲು ಒಕ್ಕೂಟ ನಿಯಮಿತ ಸಹಕಾರ ಇಲಾಖೆ ಹಾಗೂ ವಿವಿಧ ಸಹಕಾರಿ ಸಂಘ ಆಶ್ರಯದಲ್ಲಿ 14ರಿಂದ 20ರವರೆಗೆ ಆರಂಭವಾಗಿರುವ 69ನೇ ಸಹಕಾರಿ ಸಪ್ತಾಹದ ಮುಕ್ತಾಯ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ನಾನು ಸಹಕಾರಿ ಕ್ಷೇತ್ರಕ್ಕೆ ಬರುವಾಗ ಸಹಕಾರಿ ಸಂಸ್ಥೆಗಳು ಮುಚ್ಚುವ ಹಂತಕ್ಕೆ ಬಂದಿತ್ತು ಡಿಸಿಸಿ ಬ್ಯಾಂಕ್‌ನಲ್ಲಿಯೂ ಯಾವುದೇ ವ್ಯವಹಾರಗಳು ಹಣಕಾಸುಗಳು ಇರಲಿಲ್ಲ ನಾನು 25ವರ್ಷ ಸಹಕಾರಿ ಕ್ಷೇತ್ರಕ್ಕಾಗಿ ದುಡಿದಿದ್ದೇನೆ ಅಂದು ನಾನು ಸಹಕಾರಿ ಕ್ಷೇತ್ರದಲ್ಲಿ ಇರುವಾಗ ನನ್ನ ಶಿಷ್ಯರಾಗಿ ಬೆಳೆಸಿದವರು ಇಂದು ನನ್ನ ವಿರುದ್ಧ ಮಾತನಾಡುವ ಮಟ್ಟಕ್ಕೆ ಬೆಳೆದಿದ್ದಾರೆ ಅದಕ್ಕಾಗಿ ನಾನು ಜಗ್ಗುವುದಿಲ್ಲ ಬಗ್ಗುವುದಿಲ್ಲ ಅವರ ಪಿತೂರಿಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.


ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಸಲ್ಲ:

ಇತ್ತಿಚೀನ ದಿನದಲ್ಲಿ ಸಹಕಾರಿ ಕ್ಷೇತ್ರಕ್ಕೆ ರಾಜಕೀಯ ಎಂಟ್ರಿಯಾಗಿದ್ದು ಇದರ ಜೊತೆಗೆ ಜಾತಿ ರಾಜಕೀಯವು ತಾಂಡವವಾಡುತ್ತಿದೆ ಇದು ಸರಿಯಲ್ಲ. ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಮತ್ತು ಜಾತಿ ಎಂಟ್ರಿಯಾದರೆ ಸಹಕಾರಿ ಕ್ಷೇತ್ರ ಹೆಚ್ಚು ಕಾಲ ಉಳಿಯುವ ಸಾಧ್ಯತೆ ಕಡಿಮೆ. ಸಹಕಾರಿ ಸದಸ್ಯರು ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಮತ್ತು ಜಾತಿಗೆ ಬೆಂಬಲಿಸಬೇಡಿ ಎಂದರು.


ಸಹಕಾರಿ ಸಂಸ್ಥೆ 106 ವರ್ಷಗಳ ಹಿಂದೆ ಪ್ರಾರಂಭವಾಗಿದ್ದು ಸಹಕಾರಿ ಸಂಸ್ಥೆಯಲ್ಲಿ ಸಾಲ ಪಡೆಯುವವರು ಬಡವರು- ಮಾಧ್ಯಮ ವರ್ಗದವರು ಸಾಲ ಪಡೆಯುತ್ತಿದ್ದರು ಈ ಸಹಕಾರಿ ಸಂಸ್ಥೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಕಷ್ಟಕರವಾದ ಸಂದರ್ಭದಲ್ಲಿ ಸಹಕಾರಿ ಸಂಸ್ಥೆಗಳು ಸುಲಭವಾಗಿ ಸಾಲ ನೀಡುತ್ತಿದ್ದವು ಈ ಸಹಕಾರಿ ಸಂಸ್ಥೆಯ ಉದ್ದೇಶವೇ ಅದಗಿತ್ತು ಮಾಜಿ ಪ್ರದಾನಿ ಹೆಚ್.ಡಿ.ದೇವೆಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಯಡಿಯೂರಪ್ಪನವರು ಮುಖ್ಯಮಂತ್ರಿಗಳಾದ ಸಂದರ್ಭದಲ್ಲಿ ಸಹಕಾರಿ ಸಂಸ್ಥೆಗಳಿಗೆ ಸಹಕಾರ ನೀಡುತ್ತಿದ್ದರು ಇತ್ತೀಚಿಗೆ ಒಣ ರಾಜಕೀಯ ಹಾಗೂ ಜಾತಿ ಲೆಕ್ಕಚಾರದಿಂದ ಸಹಕಾರಿ ಸಂಸ್ಥೆಗಳಲ್ಲಿ ಹಿರಿಯ ಸಹಕಾರಿ ಧುರೀಣರನ್ನು ತುಳಿಯುವ ಯತ್ನ ನಡೆಯುತ್ತಿದೆ ಎಂದರು.


ಜಿಲ್ಲಾ ಯುನಿಯನ್ ಸಹಕಾರಿ ಬ್ಯಾಂಕ್ ನಿರ್ದೆಶಕರಾದ ವಾಟಗೋಡು ಸುರೇಶ್‌ರವರು ಪ್ರಸ್ತಾವಿಕವಾಗಿ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ 1268 ಸಹಕಾರಿ ಸಂಸ್ಥೆಗಳು ಇದ್ದು ಅದರಲ್ಲಿ 1206 ಸಂಸ್ಥೆಗಳು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ 6 ಸಂಸ್ಥೆಗಳನ್ನು ನಿಷ್ಕ್ರೀಯ ಹಂತ ತಲುಪಿದ್ದು ಅದನ್ನು ಲಾಭದತ್ತ ತೆಗೆದುಕೊಂಡು ಹೋಗುತ್ತೇವೆ ಸಹಕಾರಿ ಸಂಸ್ಥೆ ಗಟ್ಟಿಯಾಗಿದ್ದು ಇನ್ನೂ ಗಟ್ಟಿ ಮಾಡಲು ಸಹಕಾರಿ ಸದಸ್ಯರ ಸಹಕಾರ ಅಗತ್ಯವಾಗಿದೆ ಅದರಲ್ಲೂ ಸಹಕಾರಿ ಧುರೀಣ ಮಂಜುನಾಥ್ ಗೌಡರವರು ರಾಜಕೀಯದ ಬಗ್ಗೆ ಹೆಚ್ಚು ಒಲವು ತೋರಿಸುತ್ತಿದ್ದು ರಾಜಕೀಯ ಯಾವಾಗ ಬೇಕಾದರೂ ಮಾಡಬಹುದು ಆದರೆ ಸಹಕಾರಿ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದ್ದು ಸಹಕಾರಿ ಕ್ಷೇತ್ರದಲ್ಲಿಯೇ ಇದ್ದು ಸಹಕಾರಿ ಕ್ಷೇತ್ರವನ್ನು ಬೆಳೆಸಬೇಕೆಂದರು.


ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಯೂನಿಯನ್ ಬ್ಯಾಂಕ್ ಅಧ್ಯಕ್ಷರಾದ ಕೆ.ಎಲ್ ಜಗದೀಶ್ವರ್, ಸಹಕಾರ ರತ್ನ ಹೆಚ್.ಎನ್ ವಿಜಯದೇವ್, ಹೆಚ್.ಎಲ್ ಷಡಾಕ್ಷರಿ, ಡಿಸಿಸಿ ಬ್ಯಾಂಕ್ ವ್ಯಸ್ಥಾಪಕರಾದ ಮಂಜಪ್ಪ, ನಿರ್ದೆಶಕರಾದ ಎಂ.ಎಂ ಪರಮೇಶ್, ಸುಧೀಂದ್ರ, ಹೆಚ್.ಎಸ್ ಸಂಜೀವಕುಮಾರ್, ಹರತಾಳು ನಾಗರಾಜ್, ಹೆಚ್.ಪಿ ನಂಜುಂಡಪ್ಪ, ವಿನಯ್‌ಕುಮಾರ್ ದುಮ್ಮ, ಹಾಲಗದ್ದೆ ಉಮೇಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!