24.3 C
Shimoga
Friday, December 9, 2022

ಸಹಕಾರಿ ತತ್ವದಡಿ ಸಂಘಟನೆ ಆರ್ಥಿಕ ಸಬಲತೆಗೆ ಅಡಿಪಾಯ ; ಕುವೆಂಪು ವಿದ್ಯಾಸಂಸ್ಥೆಯ ಸಂಸ್ಥಾಪಕ ಡಾ. ಶ್ರೀನಿವಾಸ್ ಸೊನಲೆ


ಹೊಸನಗರ: ಸಮಾಜ ಬಾಂಧವರು ಸಂಘಟಿತರಾಗುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕಿದೆ ಎಂದು ಕುವೆಂಪು ವಿದ್ಯಾಸಂಸ್ಥೆಯ ಸಂಸ್ಥಾಪಕ ಡಾ. ಸೊನಲೆ ಶ್ರೀನಿವಾಸ್ ತಿಳಿಸಿದರು.


ಪಟ್ಟಣದ ಶ್ರೀ ಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ನಡೆದ ಶ್ರೀ ಜೇನುಕಲ್ಲಮ್ಮ ಸೌಹಾರ್ದ ಸಹಕಾರಿ ಸಂಘದ ಸರ್ವ ಸದಸ್ಯರ ಪ್ರಥಮ ಸಭೆಯನ್ನು ಉದ್ಘಾಟಿಸಿ ಉಪನ್ಯಾಸ ನೀಡಿ ಅವರು ಮಾತನಾಡಿದರು.


ಹಿಂದುಳಿದ ವರ್ಗದ ಸಹಕಾರಿ ಸಂಘವೊಂದರ ಅಭಿವೃದ್ದಿಗೆ ಜನಪರ ಯೋಜನೆಗಳ ಅನುಷ್ಠಾನ ಅಗತ್ಯವಾಗಿದೆ. ಶೇರುದಾರರು ಸಹಕಾರಿ ತತ್ವದಡಿಯಲಿ ವ್ಯವಹರಿಸಬೇಕು. ಆಡಳಿತ ಪಾರದರ್ಶಕತೆಯೇ ಸಂಘದ ಶ್ರೇಯೋಭಿವೃದ್ದಿಗೆ ಅಡಿಪಾಯವಾಗಿದೆ. ಸಂಪನ್ಮೂಲ ಸದ್ಬಳಕೆಗೆ ಸೌಹಾರ್ದ ಸಹಕಾರಿ ಉತ್ತಮ ವೇದಿಕೆಯಾಗಿದ್ದು, 69ನೇ ಸಹಕಾರಿ ಸಪ್ತಾಹ ಸುಸಂದರ್ಭದಲ್ಲಿ ನೂತನ ಸಂಸ್ಥೆ ಪ್ರಾರಂಭಗೊಂಡಿರುವುದು ಸ್ವಾಗತರ್ಹ ಸಂಗತಿ ಎಂದರು.


ಸಂಘದ ಅಧ್ಯಕ್ಷ ಬಿ.ಜಿ.ಸತ್ಯನಾರಾಯಣ ಸಭೆಯ ಅಧ್ಯಕ್ಷತೆವಹಿಸಿದ್ದು, ಮುಖ್ಯ ಅತಿಥಿಗಳಾಗಿ ತಾಳಗುಪ್ಪ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ವಾರಂಬಳ್ಳಿ ಹಾಲಪ್ಪ ಹಾಗೂ ಸ್ಥಳೀಯ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಮಂಜಪ್ಪ ಉಪಸ್ಥಿತರಿದ್ದು, ಸಭೆಗೆ ಸೂಕ್ತ ಸಲಹೆ, ಮಾರ್ಗದರ್ಶನ ನೀಡಿದರು.


ಸಂಘದ ವ್ಯವಸ್ಥಾಪಕ ಸುಮಂತ್ ಮಾತನಾಡಿ, ಸಂಸ್ಥೆಯು 300 ಷೇರುದಾರರಿಂದ ಆರಂಭಗೊಂಡಿದ್ದು, 17 ನಿರ್ದೇಶಕರ ಆಡಳಿತ ಮಂಡಳಿಯೊಂದಿಗೆ ರೂ. 4.25 ಲಕ್ಷ ಠೇವಣಿ ಹೊಂದಿದೆ ಎಂದು ವರದಿ ವಾಚಿಸಿದರು.


ವೇದಿಕೆಯಲ್ಲಿ ಉಪಾಧ್ಯಕ್ಷೆ ಕೊಳಗಿ ಪೂರ್ಣಿಮಾ, ನಿರ್ದೇಶಕರಾದ ಟಿ.ಎಮ್. ದಿನೇಶ್, ಕೆ.ಈ. ಯೋಗೇಂದ್ರ, ಎಸ್.ಕೆ. ನಾಗಪ್ಪ, ಎನ್.ಪಿ. ರಮೇಶ್, ಹೆಚ್.ಎನ್.ನಾಗೇಶ್, ಗಂಗಮ್ಮ ಹಾಗು ಸಲಹ ಸಮಿತಿ ಸದಸ್ಯರಾದ ಎಂ.ಪಿ. ಲೋಕೆಶ್ವರ, ದಿವಾಕರ, ನಿತ್ಯಾನಂದ, ಟೀಕಪ್ಪ, ಜಗದೀಶ್ ಮೊದಲಾದವರು ಇದ್ದರು.


ಇದೇ ಸಂದರ್ಭದಲ್ಲಿ ಸಿಆರ್‌ಪಿಎಫ್ ನಿವೃತ್ತ ಯೋಧ ಹಿಲ್ಕುಂಜಿ ರವಿ ಅವರನ್ನು ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.


ವಿನೋದ ಪ್ರಾರ್ಥಿಸಿ, ಮಧುಸೂಧನ್ ಸ್ವಾಗತಿಸಿದರು.ಟಿ.ಎನ್. ಶ್ರೀಪತಿ ಪ್ರಾಸ್ಥಾವಿಕ ಮತನಾಡಿದರು. ಮಂಡಾನಿ ಧನಂಜಯ ನಿರೂಪಿಸಿ, ನೇರಲೆ ರಮೇಶ್ ವಂದಿಸಿದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!