ಸಹಕಾರಿ ತತ್ವ ಮೈಗೂಡಿಸಿಕೊಳ್ಳಿ: ವೀರೇಶ್

0
173

ಚಿಕ್ಕಮಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ಸಹಕಾರಿ ತತ್ವವನ್ನು ಮೈಗೂಡಿಸಿಕೊಳ್ಳಬೇಕೆಂದು ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ಟಿ. ವೀರೇಶ್ ಸಲಹೆ ಮಾಡಿದರು.

ನಗರದ ರಾಜ್ಯ ರಸ್ತೆ ಸಾರಿಗೆ ನಿಗಮದ ಡಿಪೋದಲ್ಲಿ ನಡೆದ ನಿಗಮದ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ನಾಲ್ಕನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರಿ ತತ್ವವನ್ನು ಮೈಗೂಡಿಸಿಕೊಂಡು ಒಬ್ಬರಿಗೊಬ್ಬರು ಸಹಕರಿಸಿದಲ್ಲಿ ಎಂತಹ ಸಮಸ್ಯೆಯಿದ್ದರೂ ನಿವಾರಣೆಯಾಗುತ್ತದೆ ಸಹಕಾರಿ ಸಂಘಗಳಲ್ಲಿ ಸದಸ್ಯರಾದರೆ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಕಾರ್ಯದರ್ಶಿ ಹೆಚ್. ಎಸ್. ಶಿವಪ್ರಕಾಶ್ ಮಾತನಾಡಿ, ಕಳೆದ ನಾಲ್ಕು ವರ್ಷಗಳ ಹಿಂದೆ ಆರಂಭದಲ್ಲಿ ನಷ್ಟದಲ್ಲಿದ್ದ ಸಂಘ ನಂತರ 2018-19ನೇ ಸಾಲಿನಲ್ಲಿ 12.580 ರೂ., 19-20ನೇ ಸಾಲಿನಲ್ಲಿ 15.598 ರೂ. ಹಾಗೂ ಪ್ರಸಕ್ತ ಸಾಲಿನಲ್ಲಿ 16.589 ರೂ. ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಉಪಾಧ್ಯಕ್ಷ ಹಾಲಪ್ಪ ನಿಗಮದ ನೌಕರರನ್ನು ಆರ್ಥಿಕವಾಗಿ ಸಧೃಡಗೊಳಿಸುವುದು ಸಂಘದ ಗುರಿಯಾಗಿದೆ, ಅದಕ್ಕಾಗಿ ನಿರಂತರ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಆರ್ಥಿಕವಾಗಿ ಸಬಲರಾಗುವ ನಿಟ್ಟಿನಲ್ಲಿ ನಿಗಮದ ನೌಕರರೆಲ್ಲರೂ ಸಂಘದ ಸದಸ್ಯತ್ವ ಪಡೆದುಕೊಳ್ಳಬೇಕೆಂದು ಎಂದು ಮನವಿ ಮಾಡಿದರು.

ನಿಗಮದ ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಂಶುಪಾಲ ವಿ. ಬಸವರಾಜು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕಿ ಎಂ. ಭಾರತಮ್ಮ, ಸಂಘದ ಅಧ್ಯಕ್ಷ ಟಿ. ಆರ್. ಸುಂದರೇಶ್, ನಿಗಮದ ವಿಭಾಗೀಯ ತಾಂತ್ರಿಕ ಅಧಿಕಾರಿ ಬಿ. ಎಸ್. ರಮೇಶ್, ವಿಭಾಗೀಯ ಸಂಚಲನಾಧಿಕಾರಿ ದಿನೇಶ್ ಕುಮಾರ್ ಚನ್ನಗಿರಿ, ಸಹಾಯಕ ಆಡಳಿತಾಧಿಕಾರಿ ಶಿವಪ್ರಸಾದ್, ಸಹಾಯಕ ಸಂಖ್ಯಾಧಿಕಾರಿ ಚಲುವೇಗೌಡ, ಸಹಾಯಕ ಲೆಕ್ಕಾಧಿಕಾರಿ ಕೆ. ಜಯಣ್ಣ, ಘಟಕದ ವ್ಯವಸ್ಥಾಪಕ ಚನ್ನಬಸವೇಗೌಡ, ಮೋಹನಕುಮಾರಿ ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here