23.2 C
Shimoga
Sunday, November 27, 2022

ಸಹೋದರನ ಮಗನ ಕೊಲೆ ಸುದ್ದಿ ಕೇಳಿ ದೊಡ್ಡಪ್ಪ ಹೃದಯಾಘಾತದಿಂದ ಸಾವು !

ತರೀಕೆರೆ: ಅತ್ತೆಯ ಸಾವಿನ ಸುದ್ದಿ ಕೇಳಿ ಅಳಿಯ ಹೃದಯಾಘಾತದಿಂದ ಸಾವನ್ನಪ್ಪಿದ ಸುದ್ದಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಭಾನುವಾರ ನಡೆದಿತ್ತು. ಅದರ ಬೆನ್ನಲ್ಲೇ ಸಹೋದರನ ಮಗನ ಕೊಲೆಯಾದ ಸುದ್ದಿ ಕೇಳಿ ದೊಡ್ಡಪ್ಪ ಹೃದಯಾಘಾತದಿಂದ ಮೃತಪಟ್ಟಿರುವ ದಾರುಣ ಘಟನೆ ಪಟ್ಟಣದಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಭಾನುವಾರ ಹಣಕಾಸಿನ ವಿಚಾರಕ್ಕೆ ಓಂಕಾರ್ ಎಂಬ 30 ವರ್ಷದ ಯುವಕನನ್ನು ಐವರು ಸ್ನೇಹಿತರು ಕೊಲೆ ಮಾಡಿದ್ದಾರೆ. ಆರೋಪಿಗಳು ಹಾಗೂ ಕೊಲೆಯಾಗಿದ್ದ ಓಂಕಾರ್‌ ಫೈನಾನ್ಸ್ ವ್ಯವಹಾರ ಮಾಡುತ್ತಿದ್ದರು. ವ್ಯವಹಾರದ ವಿಚಾರವಾಗಿ ಮಾತುಕತೆಗೆ ಭಾನುವಾರ ರಾತ್ರಿ ಕರೆದುಕೊಂಡು ಹೋಗಿದ್ದರು. ಈ ವೇಳೆ ಮಾತಿಗೆ ಮಾತಿಗೆ ಬೆಳೆದು ಓಂಕಾರ್‌ರನ್ನು ಸ್ನೇಹಿತರೆಲ್ಲರೂ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಇನ್ನು ಓಂಕಾರ್‌ ಕೊಲೆಯಾದ ವಿಷಯ ತಿಳಿದ ಆಘಾತದಲ್ಲೇ ಸೋಮವಾರ ಅವರ ದೊಡ್ಡಪ್ಪ ಪ್ರಕಾಶ್ (55) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಮನೆಮಗನನ್ನು ಕಳೆದುಕೊಂಡಿದ್ದ ಕುಟುಂಬಕ್ಕೆ ಮತ್ತೊಂದು ಸಾವು ತೀವ್ರ ಆಘಾತವನ್ನುಂಟು ಮಾಡಿದೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!