ಸಾಕಲು ಕಷ್ಟವೆಂದು ನವಜಾತ ಶಿಶುವನ್ನು ಪೊದೆಯೊಳಗೆ ಎಸೆದು ಹೋದ ಹೆತ್ತವರು! ಮಗು ಯಾರದ್ದು ಅನ್ನೋದರ ಸುಳಿವನ್ನ ಸ್ವತಃ ಆ ಮಗುವೇ ನೀಡಿದೆ..!! ಹೇಗೆ ಗೊತ್ತಾ?

0
46998

ಮೂಡಿಗೆರೆ: ನವಜಾತ ಶಿಶುವನ್ನು ಸಾಕಲು ಕಷ್ಟವೆಂದು ಕ್ರೂರಿಗಳು ಪೊದೆಗೆ ಎಸೆದು ಹೋದ ಮನಕಲುಕುವ ಘಟನೆ ತಾಲೂಕಿನ ಬಿಳಗುಳದಲ್ಲಿ ನಡೆದಿದ್ದು, ಪೊದೆಯೊಳಗಿನಿಂದ ಹಸುಗೂಸಿನ ಕೂಗು ಕೇಳಿದ ಸ್ಥಳೀಯರು ಮಗುವನ್ನು ರಕ್ಷಣೆ ಮಾಡಿ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಿಳಗುಳ ವಾಸಿ ಚಂದ್ರು ಎನ್ನುವವರು ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಪೊದೆಯೊಳಗಿನಿಂದ ಮಗು ಅಳುವ ಶಬ್ಧವನ್ನ ಕೇಳಿ ಮಗುವಿನ ರಕ್ಷಣೆ ಮಾಡಿದ್ದಾರೆ. ಮಗುವನ್ನ ಸುರಕ್ಷಿತವಾಗಿ ರಕ್ಷಣೆ ಮಾಡಿ, ಸಮೀಪದಲ್ಲಿರುವ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಸದ್ಯ ಮೂಡಿಗೆರೆ ಆಸ್ಪತ್ರೆಯಲ್ಲಿ ಗಂಡು ಮಗುವಿನ ಆರೈಕೆ ಮಾಡಲಾಗ್ತಿದ್ದು, ದೊಡ್ಡ ಗಂಡಾಂತರದಿಂದ ಮುದ್ದು ಕಂದಮ್ಮ ಪಾರಾಗಿದೆ.

ಮಗು ಯಾರದ್ದು ಅನ್ನೋದರ ಸುಳಿವನ್ನ ಸ್ವತಃ ಆ ಮಗುವೇ ನೀಡಿದೆ!

ಹೌದು, ಈ ಮಧ್ಯೆ ಮಗು ಯಾರದ್ದು ಅನ್ನೋದರ ಸುಳಿವನ್ನ ಸ್ವತಃ ಆ ಮಗುವೇ ನೀಡಿದೆ. ಮಗುವಿನ ಕೈಗೆ ಕಟ್ಟಿದ ಗುರುತಿನ ಚೀಟಿ ಹಾಗೆ ಇದ್ದು, ಅದರಲ್ಲಿ ಮಗುವಿನ ತಾಯಿ ಯಾರು?, ತಂದೆ ಯಾರು? ಎಲ್ಲಿಯವರು? ಅನ್ನೋ ವಿಳಾಸ ಗೊತ್ತಾಗಿದೆ. ಮಗುವಿನ ಕೈಯಲ್ಲಿದ್ದ ಗುರುತಿನ ಚೀಟಿಯಿಂದ ಸುಲಭವಾಗಿ ಪೋಷಕರನ್ನ ಗುರುತಿಸಲು ಸಾಧ್ಯವಾಗಿದೆ.

ಮಗುವನ್ನ ಸಾಕಲು ಕಷ್ಟ ಎಂದು ಎಸೆದು ಹೋದರು!:

ಪೊದೆಯೊಳಗೆ ಬಿದ್ದು ನರಳಾಟ ನಡೆಸುತ್ತಿದ್ದ ಮಗುವನ್ನು ಎಸೆದವರು ಯಾರೆಂದು ಪತ್ತೆಯಾಗಿದೆ. ಮೂಡಿಗೆರೆ ತಾಲೂಕಿನ ಗ್ರಾಮವೊಂದರ 25 ವರ್ಷದ ವ್ಯಕ್ತಿಗೆ ಇಬ್ಬರು ಪತ್ನಿಯರಿದ್ದು (ಅಕ್ಕ-ತಂಗಿಯನ್ನ ಮದುವೆಯಾಗಿದ್ದಾರೆ), ಇಬ್ಬರಿಗೂ ಕೂಡ ಒಂದೊಂದು ಗಂಡು ಮಗು ಇದೆ. ಅಕ್ಕ-ತಂಗಿಯರನ್ನ ವರಿಸಿದ್ದ ಆತ, ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮೊದಲ ಪತ್ನಿಗೆ 3 ವರ್ಷದ ಗಂಡು ಮಗುವಿದ್ದು, ಎರಡನೇ ಪತ್ನಿಗೆ ಎರಡು ವರ್ಷದ ಗಂಡು ಮಗುವಿದೆ. ಇದೀಗ ಮತ್ತೆ ಎರಡನೇ ಪತ್ನಿ 12 ದಿನದ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆದ್ರೆ ನಿನ್ನೆ ಆಸ್ಪತ್ರೆಗೆ ಮಗುವನ್ನ ಕರೆದುಕೊಂಡು ಬಂದಿದ್ದ ದಂಪತಿ, ಮಗುವನ್ನ ಬಿಳಗುಳ ಸಮೀಪದ ಪೊದೆಯೊಂದರಲ್ಲಿ ಬಿಸಾಕಿ ಊರಿಗೆ ಹೋಗಿದ್ದಾರೆ. ಅಕ್ಕಪಕ್ಕದ ಮನೆಯವರಿಗೆ ಮಗು ಆಸ್ಪತ್ರೆಯಲ್ಲಿ ಸಾವನ್ನಪ್ಪಿತು ಅಂತಾ ತಿಳಿಸಿದ್ದಾರೆ. ಸಂಜೆ ಮಗು ಸಿಕ್ಕ ಬಳಿಕ ವಿಚಾರಣೆ ಮಾಡಿದಾಗ, ಈಗಾಗಲೇ ಇಬ್ಬರು ಮಕ್ಕಳಿದ್ದು ಮಗು ಸಾಕಲು ಕಷ್ಟ ಆಗುತ್ತದೆ ಎಂದು ಎಸೆದು ಬಂದಿರುವುದಾಗಿ ಹೇಳಿಕೆ ನೀಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here