Home Crime News ಸಾಗರ: ಆಭರಣ ವ್ಯಾಪಾರಿಯಿಂದ 7.5 ಲಕ್ಷ ರೂ. ದೋಚಿ ಪರಾರಿಯಾಗಿದ್ದ ಆರೋಪಿಗಳ ಬಂಧನ
ಸಾಗರ: ಇತ್ತೀಚೆಗೆ ಆಭರಣ ವ್ಯಾಪಾರಿಯೊಬ್ಬರಿಂದ ನಾಲ್ವರು ಅಪರಿಚಿತ ತಂಡವೊಂದು ಬಂಗಾರದ ಆಭರಣಕೊಡುವುದಾಗಿ ನಂಬಿಸಿ ಸುಮಾರು 7.50 ಲಕ್ಷ ರೂ. ದರೋಡೆ ಮಾಡಿ ಸಾಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಶಿರವಾಳ ಗ್ರಾಮದಿಂದ ಪರಾರಿಯಾದ ಘಟನೆ ನಡೆದಿತ್ತು.
ದೂರು ದಾಖಲಾಗುತ್ತಿದ್ದಂತೆ ಸಾಗರ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿ, ಆರೋಪಿಗಳ ಜಾಡು ಹಿಡಿದು ರಾಜಧಾನಿ ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿತ್ತು.
ಪ್ರಕರಣದಲ್ಲಿ ಸಾಗರದ ಜೈವಿರ್, ಬೆಂಗಳೂರಿನ ಬ್ಯಾಟರಾಯನಪುರ ನಿವಾಸಿಗಳಾದ ಶಶಿಕುಮಾರ್, ಶರತ್ ಎಂಬುವವರನ್ನು ಬಂಧಿಸಿ ಆರೋಪಿಗಳಿಂದ 1,40,000 ರೂ.ಗಳನ್ನು ವಶಪಡಿಸಿ ಕೃತ್ಯಕ್ಕೆ ಬಳಸಲಾಗಿದ್ದ ಟೊಯೊಟಾ ಕಂಪನಿಯ 5 ಲಕ್ಷ ರೂ. ಮೌಲ್ಯದ ಇಟಿಯೋಸ್ ಕಾರನ್ನು ಜಪ್ತಿ ಮಾಡಿ ಸಾಗರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದುರುತ್ತದೆ.
ಈ ಕಾರ್ಯಾಚರಣೆಗೆ ನೂತನ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮಿ ಪ್ರಸಾದ್, ಅಡಿಷನಲ್ ಎಸ್ಪಿ ಶೇಖರ್ ತೆಕ್ಕಣ್ಣನವರ್ ಸಾಗರ ಪೊಲೀಸ್ ಉಪಾಧಿಕ್ಷಕರಾದ ವಿನಾಯಕ್ ಶೇಟಗೆರಿರವರ ಮಾರ್ಗದರ್ಶನದಲ್ಲಿ, ಸಾಗರ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಗಿರೀಶ್ ಹಾಗೂ ಸಾಗರ ಗ್ರಾಮಾಂತರ ಸಬ್ ಇನ್ಸ್ಪೆಕ್ಟರ್ ಭರತ್ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿಲಾಗಿತ್ತು. ಸಾಗರ ಗ್ರಾಮಾಂತರ ಮತ್ತು ಟೌನ್ ಪೋಲಿಸ್ ಸಿಬ್ಬಂದಿಗಳಾದ ಫೈರೋಜ್,ಅಶೋಕ್ ಸಂತೋಷ್, ಹಜರತ್ ಅಲಿ, ರವಿ, ಶಿವಮೊಗ್ಗ ಎಸ್ಪಿ ಕಚೇರಿಯ ಎಎನ್ ಸಿ ವಿಭಾಗದ ಸಿಬ್ಬಂದಿಗಳಾದ ಗುರುರಾಜ್ ಇಂದ್ರೇಶ್ ವಿಜಯ್ ಮೊದಲಾದವರು ಭಾಗವಹಿಸಿದ್ದರು.
Related