ಸಾಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಜಿ. ನಾಗೇಶ್ ಪುನರಾಯ್ಕೆ

0
168

ಸಾಗರ: ಸಾಗರ ತಾಲ್ಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಜಿ. ನಾಗೇಶ್ ರವರು ಪುನರಾಯ್ಕೆಯಾಗಿದ್ದಾರೆ.

ಸಾಗರದ ಪ್ರತಿಷ್ಠಿತ ಸಂಸ್ಥೆಯಾಗಿರುವ ಸಾಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸಾಗರದ ಸಾಗರ ಸುತ್ತ ಪತ್ರಿಕೆಯ ಸಂಪಾದಕರಾದ ಜಿ.ನಾಗೇಶ್ ಅವರು ಅವಿರೋಧವಾಗಿ ಪುನರಾಯ್ಕೆ ಆಗಿದ್ದು ಅವರ ಕಾರ್ಯ ತತ್ಪರತೆಗೆ ಸಂದ ಗೌರವವಾಗಿದೆ.

ಕಳೆದ ಅವಧಿಯಲ್ಲಿ ಪತ್ರಕರ್ತರ ಸಂಘದಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದಾರೆ, ಪತ್ರಿಕಾ ಭವನದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಲೇಖಕರು ಆಗಿರುವ ನಾಗೇಶ್, ಈಗಾಗಲೇ 15ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ, ಪತ್ರಿಕೋದ್ಯಮದಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಬಂದಿದ್ದು ಹಲವು ಸಂಘಟನೆಗಳಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡು ಬಂದವರಾಗಿದ್ದಾರೆ.

ಜಿಲ್ಲೆ ರಾಜ್ಯ ಮಟ್ಟದ ಹಲವಾರು ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸುತ್ತಿರುವ ಇವರು, ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇವರನ್ನು ಪತ್ರಕರ್ತರ ಸಂಘದ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಪುನರಾಯ್ಕೆ ಮಾಡಿರುವುದು ಅಭಿನಂದನಿಯ ಸಂಗತಿಯಾಗಿದೆ. ಪತ್ರಕರ್ತರ ಸಂಘವು ಸಹ ಉಳಿದೆಲ್ಲ ಸಂಘಗಳಿಗೆ ಮಾದರಿಯಾಗಿದೆ.

ವರದಿ: ಓಂಕಾರ್ ತಾಳಗುಪ್ಪ
ಜಾಹಿರಾತು

LEAVE A REPLY

Please enter your comment!
Please enter your name here