ಸಾಗರ – ಪಟಗುಪ್ಪ – ಹೊಸನಗರ ಬಸ್ ಸಂಚಾರಕ್ಕೆ ಹಸಿರು ನಿಶಾನೆ

0
1078

– ಸಾಗರದಲ್ಲಿ ಶಾಸಕ ಹಾಲಪ್ಪನವರಿಂದ ಹೊಸನಗರದಲ್ಲಿ ಪಪಂ ಅಧ್ಯಕ್ಷೆ ಗುಲಾಬಿ ಮರಿಯಪ್ಪ ನವರಿಂದ ಬಸ್ ಸಂಚಾರಕ್ಕೆ ಹಸಿರು ನಿಶಾನೆ.

ಹೊಸನಗರ: ಸಾಗರ ಹಾಗೂ ಹೊಸನಗರ ತಾಲೂಕುಗಳನ್ನು ಸಂಪರ್ಕಿಸುವ ಈ ತಾಲೂಕುಗಳ ಜನತೆಯ ಬಹುನಿರೀಕ್ಷಿತ ಪಟಗುಪ್ಪ ಸೇತುವೆ ನಿರ್ಮಾಣವಾಗಿ ಒಂದು ವರ್ಷವಾಗಿದ್ದರೂ ಬಸ್ ಸಂಚಾರ ಪ್ರಾರಂಭವಾಗದೆ ಈ ಭಾಗದ ಜನರು ಜಾತಕಪಕ್ಷಿಯಂತೆ ಕಾಯುತ್ತಿದ್ದರು.

ಬಹು ನಿರೀಕ್ಷಿತ ಪಟಗುಪ್ಪ ಸೇತುವೆ ನಿರ್ಮಾಣವಾಗಿ ಸಂಚಾರಕ್ಕೆ ಬಿಟ್ಟುಕೊಟ್ಟ ನಂತರ ಪ್ರತಿದಿನ ನೂರಾರು ದ್ವಿಚಕ್ರ ವಾಹನ, ಕಾರುಗಳು, ಮರಳು ಗಾಡಿಗಳು ಸಂಚಾರ ಪ್ರಾರಂಭಿಸಿದ್ದು ಈವರೆಗೂ ಯಾವುದೇ ಬಸ್ ಸಂಚಾರ ಇಲ್ಲದ ಕಾರಣ ಈ ಭಾಗದ ಜನರು ತಮ್ಮ ಸ್ವಂತ ವಾಹನಗಳನ್ನು ಅವಲಂಬಿಸಬೇಕಾಗಿತ್ತು.

ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಇಂದಿನಿಂದ ಬೆಳಿಗ್ಗೆ 7 ಗಂಟೆಗೆ ಸಾಗರ ಬಿಡುವ ಈ ಬಸ್ ಆವಿನಹಳ್ಳಿ, ಹುಲಿದೇವರಬನ, ಪಟಗುಪ್ಪ ಮಾರ್ಗವಾಗಿ 8 ಗಂಟೆಗೆ ಹೊಸನಗರ ತಲುಪಿ ನಿಲ್ಸ್ ಕಲ್, ಕರಿಮನೆಗೆ ತೆರಳಲಿದೆ.

ನಂತರ ಸಂಜೆ ಹೊಸನಗರದಿಂದ 4ಗಂಟೆಗೆ ನಿಲ್ಸ್ ಕಲ್ ತೆರಳಿ 5 ಗಂಟೆಗೆ ಹೊಸನಗರ ಬಂದು ಪುನಃ ಪಟಗುಪ್ಪ, ಹುಲಿದೇವರಬನ, ಆವಿನಹಳ್ಳಿ ಮಾರ್ಗವಾಗಿ ಸಾಗರ ತಲುಪಲಿದೆ.

ಈ ನೂತನ ಬಸ್ ಸಂಚಾರಕ್ಕೆ ಸಾಗರದಲ್ಲಿ ಶಾಸಕರಾದ ಹರತಾಳು ಹಾಲಪ್ಪನವರು ಹಸಿರು ನಿಶಾನೆ ತೋರಿ ಶುಭ ಹಾರೈಸಿ ಸಾಗರ, ಹೊಸನಗರ ಭಾಗದ ಜನರು ಇದರ ಸದುಪಯೋಗ ಪಡೆಯುವಂತೆ ಕೋರಿದರು.

ಹೊಸನಗರದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಮರಿಯಪ್ಪ, ಉಪಾಧ್ಯಕ್ಷೆ ಕೃಷ್ಣವೇಣಿ, ಶಾಸಕರ ಆಪ್ತ ಕಾರ್ಯದರ್ಶಿ ಮಂಡಾನಿ ಮೋಹನ್, ಮಾಜಿ ಅಧ್ಯಕ್ಷ ಹೆಚ್.ಎನ್ ಶ್ರೀಪತಿ ರಾವ್, ಸದಸ್ಯರಾದ ಗಾಯತ್ರಿ ನಾಗರಾಜ್, ಗುರುರಾಜ್, ಯಾಸಿರ್, ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಮಾಲಾ ಉಮೇಶ್, ಗಂಗನಕೊಪ್ಪ, ವಡಗೇರಿ ನಾಗಪ್ಪ, ಚಾಲುಕ್ಯ ಬಸವರಾಜ್ ಮೊದಲಾದವರು ಉಪಸ್ಥಿತರಿದ್ದರು. ನೂತನ ಬಸ್ ಸಂಚಾರಕ್ಕೆ ಶುಭಕೋರಿ ನೆರೆದಿದ್ದವರಿಗೆ ಸಿಹಿ ವಿತರಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here